ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಸಮಾಜ ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ, ಸಮಾಜ ಚಿಂತನೆ ಸೇರಿದಂತೆ ಪದಾಧಿಕಾರಿ, ಹಿರಿಯರಿಂದ ಬರುವ ಸಲಹೆ ಸೂಚನೆ ಅನುಸರಿಸಿಕೊಂಡು ಮುನ್ನಡೆ
ಗದಗ: ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ನಗರದ ವೀರಶೈವ ಲೈಬ್ರರಿಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಬುಧವಾರ ನಡೆದ ಮಹಾಸಭಾದ ಚುನಾವಣೆಯಲ್ಲಿ ಕಾರ್ಯಕಾರಿ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದವರಿಗೆ ಘೋಷಣಾ ಪತ್ರ ವಿತರಣಾ ಔಪಚಾರಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯ ಚುರುಕುಗೊಳಿಸುವ,ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಸಮಾಜ ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ, ಸಮಾಜ ಚಿಂತನೆ ಸೇರಿದಂತೆ ಪದಾಧಿಕಾರಿ, ಹಿರಿಯರಿಂದ ಬರುವ ಸಲಹೆ ಸೂಚನೆ ಅನುಸರಿಸಿಕೊಂಡು ಮುನ್ನಡೆಯುವುದಾಗಿ ತಿಳಿಸಿದರು.
ಮಹಾಸಭಾದ ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಮಾಜದ ಹಿರಿಯರಾದ ಬಸವರಾಜ ಬಿಳೇಯಲಿ, ಅವಿರೋಧವಾಗಿ ಆಯ್ಕೆಯಾದ ಎಲ್ಲ ಕಾರ್ಯಕಾರಿ ಮಂಡಳಿಯವರಿಗೆ ಪ್ರಮಾಣ ಪತ್ರ ವಿತರಿಸಿ ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಮಹಾಸಭಾದ, ಸಮಾಜದ ಘನತೆ ಗೌರವ ಹೆಚ್ಚಿಸಬೇಕೆಂದು ಹೇಳಿದರು.
ಸದಾಶಿವಯ್ಯ ಮದರಿಮಠದ ಮಾತನಾಡಿ, ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯ ಕುರಿತು ಮುಂದಿನ ವಾರದ ಕರೆಯಲಾಗುವ ಸಭೆಯಲ್ಲಿ ರೂಪುರೇಷೆ ತಿಳಿಸುವದಾಗಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.