ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಹಕಾರ ಅಗತ್ಯ

KannadaprabhaNewsNetwork |  
Published : Jun 07, 2024, 12:34 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಗ್ರಾಮೀಣ ಭಾಗದಲ್ಲಿ ಇನ್ನೂ ಹಲವೆಡೆ ಜೀವಂತವಾಗಿರುವ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಹಿರಿಯ ನ್ಯಾಯವಾದಿ ಅರ್ಜುನ್‌ ಜಿಡ್ಡಿಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಗ್ರಾಮೀಣ ಭಾಗದಲ್ಲಿ ಇನ್ನೂ ಹಲವೆಡೆ ಜೀವಂತವಾಗಿರುವ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣ ನಿರ್ಮೂಲನಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಹಿರಿಯ ನ್ಯಾಯವಾದಿ ಅರ್ಜುನ್‌ ಜಿಡ್ಡಿಮನಿ ಹೇಳಿದರು.ಚಿಮ್ಮಡ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್‌ ಇಲಾಖೆ, ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕರ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಮಕ್ಕಳೇ ದೇಶದ ಆಸ್ತಿ, ಅವರನ್ನು ಸದೃಢ, ಸುಶಿಕ್ಷತರನ್ನಾಗಿ ಬೆಳೆಸಿದಲ್ಲಿ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ. ಉತ್ತಮ ಶಿಕ್ಷಣ ನೀಡದೆ ಬಾಲ ಕಾರ್ಮಿಕರನ್ನಾಗಿ ಬೆಳೆಸಿದಲ್ಲಿ ನಮ್ಮ ಪೂರ್ವಜರ ಹಾಗೆ ಜೀತಪದ್ದತಿ, ಗುಲಾಮ ಗಿರಿಯಲ್ಲಿ ಬದುಕಬೇಕಾಗುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು. ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ ಮಾತನಾಡಿ, ಶಿಕ್ಷಣ ಬರೀ ನೌಕರಿಗಾಗಿ ಅಷ್ಟೆ ಅಲ್ಲ. ಜೀವನ ನಿರ್ವಹಣೆಗಾಗಿಯೂ ಪಡೆಯಬೇಕಾಗಿದೆ, ಯಾವುದೇ ಕಾರ್ಯ ಶಿಕ್ಷಣದೊಂದಿಗೆ ಕೈಗೊಂಡಲ್ಲಿ ಅದು ಯಶಸ್ಸು ನೀಡುತ್ತದೆ ಎಂದರು.

ಗಾಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ, ತಾಪಂ ನಿರ್ವಾಹಕ ಸದಾಶಿವ ಅರೆನಾಡ, ಸಿಆರ್‌ಪಿ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಮಾಲಾ ಮೋಟಗಿ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಗೋವಿಂದಗೋಳ, ನ್ಯಾಯವಾದಿ ಬಿ.ಎಲ್ ಲಾಳಕೆ, ಮಹಾದೇವ ಗಾಯಕವಾಡ, ಭಾಸ್ಕರ ಬಡಿಗೇರ, ಪರಪ್ಪ ಪಾಲಭಾವಿ, ಅಶೋಕ ಧಡೂತಿ, ಗ್ರಾಪಂ ಸದಸ್ಯ ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ, ನಾಗಪ್ಪ ಆಲಕನೂರ, ಬಾಳೇಶ ಬ್ಯಾಕೋಡ, ಬಾಳಪ್ಪ ಗಡೆಪ್ಪನವರ, ಪ್ರಮುಖರಾದ ಅಶೋಕ ಮೋಟಗಿ, ಪ್ರಭು ಗೋವಿಂದಗೋಳ, ರವಿ ದೊಡವಾಡ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಎಂ.ಎಸ್. ಜಿಟ್ಟಿ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೆಯರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ