ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಹೆಗ್ಗೆರೆಯಲ್ಲಿರುವ ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವೈಶ್ಯ ಕೋ-ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
100 ವರ್ಷಗಳ ಹಿಂದೆ ಪ್ರಾರಂಭವಾದ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಜಿಲ್ಲೆಯ ವಾಣಿಜ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಹಕರು ಬ್ಯಾಂಕಿನೊಂದಿಗೆ ಹೆಚ್ಚಿನ ಸಂಬಂಧ ಹೊಂದಿ, ತಾವು ಬೆಳೆಯುವುದರ ಜೊತೆಗೆ, ಬ್ಯಾಂಕ್‌ನ್ನು ಬೆಳೆಸಿದ್ದಾರೆ ಎಂದರು.ಸದ್ಯ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿಯೂ ಹಣದ ಅರಿವು ಇದೆ. ಆದರೆ ಸಾಲ ಸೌಲಭ್ಯ ಒದಗಿಸಲು ಉತ್ತಮ ಗ್ರಾಹಕರ ಕೊರತೆ ಇದೆ. ಹಣಕಾಸು ಸಂಸ್ಥೆಗಳು ಹೆಚ್ಚಾದಂತೆ ಗ್ರಾಹಕರಿಗೆ ಆಯ್ಕೆಗೆ ಹೆಚ್ಚಿನ ಅವಕಾಶಗಳಿವೆ. ಅತೀ ಕಡಿಮೆ ಬಡ್ಡಿಗೆ ಯಾರು ಸಾಲ ಸೌಲಭ್ಯ ನೀಡುವ ಸಂಸ್ಥೆಗಳನ್ನು ಅವರು ಆಯ್ಕೆ ಮಾಡುತ್ತಾರೆ. ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯದ ನಂತರ ಸಹಕಾರಿ ಬ್ಯಾಂಕುಗಳ ಡಿಪಾಸಿಟ್ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಆದರೆ ಸೌಹಾರ್ದ ಸಹಕಾರಿ ಸಂಘಗಳ ಕಾರ್ಯ ವೈಖರಿ ಚೆನ್ನಾಗಿಲ್ಲ. ಸುಮಾರು 45ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಗ್ರಾಹಕರು ಇಟ್ಟಿದ್ದ ಡಿಫಾಸಿಟ್ ಹಣ ಕೊಡಲು ಹಣವಿಲ್ಲದಂತಾಗಿದೆ. ಅನಾರೋಗ್ಯಕರ ಪೈಪೋಟಿಯಿಂದ ಸುಮಾರು 2650 ಕೋಟಿ ರು. ಅವ್ಯವಹಾರ ನಡೆದಿದೆ. ಗ್ರಾಹಕರ ಶೋಷಣೆ ತಪ್ಪಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ರಾಜಕೀಯವಾಗಿ ನಾನು ಮಧುಗಿರಿಯಲ್ಲಿದ್ದರೂ, ನನ್ನ ಕರ್ಮ ಭೂಮಿ ತುಮಕೂರು.ಹಿಂದುಳಿದ ಸಮುದಾಯಗಳು ನನ್ನ ಕೈ ಹಿಡಿದು ನಡೆಸಿವೆ.1994ರಲ್ಲಿ ನಾನು ತುಮಕೂರು ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಎಲ್ಲ ಹಿಂದುಳಿದ, ಮುಂದುವರೆದ ಸಮಾಜಗಳು ಕೈಹಿಡಿದು ಸುಮಾರು 27ಸಾವಿರ ಮತಗಳು ಪಡೆಯಲು ಸಾಧ್ಯವಾಯಿತು.ಅನಂತರಾಮಶೆಟ್ಟರು ಅಂದಿಗೆ ಸುಮಾರು 500 ಜನರ ಪಟ್ಟಿ ನೀಡಿ, ಮತ ಹಾಕಿಸುವ ಭರವಸೆ ನೀಡಿದ್ದರು ಎಂದು ತಮ್ಮ ರಾಜಕೀಯದ ಆರಂಭದ ದಿನಗಳನ್ನು ನೆನೆದರು.
ಶಾಸಕ ಜಿ.ಬಿ.ಜೋತಿ ಗಣೇಶ್ ಮಾತನಾಡಿ, ಸಿಐಟಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಯೇ ಹಿಂದೆ ವೀರಶೈವ ಸಹಕಾರಿ ಬ್ಯಾಂಕ್ ಹಾಗೂ ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಸಹಕಾರ ಇದೆ. ಇವರನ್ನು ಸ್ಮರಿಸುತ್ತೇನೆ. ಕಳೆದ 10 ವರ್ಷಗಳಿಂದ ಗೋವಿಂದರಾಜು ಮತ್ತು ರಾಮಮೂರ್ತಿ ಅವರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣದಾಗಿ ಆರಂಭವಾಗಿ ಸದ್ಯ ಬೃಹದಾಕಾರವಾಗಿ ಬೆಳೆದಿರುವ ಬ್ಯಾಂಕಿನ ಹಿಂದಿನ ಹಲವರ ಶ್ರಮವಿದೆ. ಅವರೆಲ್ಲರಿಗೂ ಹೃಪೂರ್ವಕ ಧನ್ಯವಾದ ಗಳನ್ನು ತಿಳಿಸುತ್ತೇನೆ. ಮತ್ತಷ್ಟು ಗ್ರಾಹಕರ ಸೇವೆಯಲ್ಲಿ ತೊಡಗಲಿ ಎಂದು ಶುಭ ಹಾರೈಸಿದರು.
ವೈಶ್ಯ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಎ.ವಿ. ನಂಜುಂಡರು ಈ ಬ್ಯಾಂಕ್ ಆರಂಭಿಸಿದರು. ಅವರ ಮೊಮ್ಮಗನಾದ ನಾನು ಸದ್ಯ ಶತಮಾನೋತ್ಸವ ಸಮಾರಂಭದ ಅಧ್ಯಕ್ಷನಾಗಿರುವುದು ಸಂತೋಷದ ವಿಚಾರವಾಗಿದೆ. ಸುಮಾರು 8 ಶಾಖೆಗಳನ್ನು ಹೊಂದಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಶಾಖೆಗಳನ್ನು ಹೊಂದಿದೆ. 25 ವರ್ಷಗಳ ಹಿಂದೆಯೇ ಟೆಲಿ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದ್ದು, ಕೋರ್ ಬ್ಯಾಂಕಿಂಗ್ ಆಗಿ ಕೆಲಸ ನಿರ್ವಹಿಸುತ್ತಿದೆ. ವೈಶ್ಯ ಜನಾಂಗದ ಹಣಕಾಸು ಸಂಸ್ಥೆಗಳಲ್ಲಿಯೇ ಮುಂಚೂಣಿಯಲ್ಲಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ.ಅರ್.ಎಲ್. ರಮೇಶ್‌ಬಾಬು, ವೈಶ್ಯಕೋ-ಅಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ರಾಮಮೂರ್ತಿ, ಸಿಇಒ ಸುಮ, ನಿರ್ದೇಶಕರು ಉಪಸ್ಥಿತರಿದ್ದರು.