MLA Dr. Siddalingappa Patil issued strict instructions to officials to effectively handle monsoon-related issues and maintain constant vigilance to ensure there is no shortage of drinking water in any village within the constituency.
* ತುರ್ತಾಗಿ ಪರಿಹರಿಸಿ
- ದುಬಲಗುಂಡಿ ಗ್ರಾಮದಲ್ಲಿ 48 ಕೊಳವೆಬಾವಿಗಳಿದ್ದರೂ ಬಗೆಹರಿಯದ ಜಲ ಕ್ಷಾಮಕನ್ನಡಪ್ರಭ ವಾರ್ತೆ, ಹುಮನಾಬಾದ್ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವದರ ಜೊತೆಗೆ ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದುಬಲಗುಂಡಿ ಗ್ರಾಮದಲ್ಲಿ 48 ಕೊಳವೆಬಾವಿಗಳಿದ್ದರೂ ಜಲ ಕ್ಷಾಮ ಬಗೆಹರಿದಿಲ್ಲ :ಅವರು ನಗರದ ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತಾದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಧ್ಯ ಗ್ರಾಮ ಪಂಚಾಯತ್‌ಗಳು ತೆರಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಂಕಷ್ಟ ಎದುರಾಗಿದೆ. ದುಬಲಗುಂಡಿ ಗ್ರಾಮದಲ್ಲಿ 48 ಕೊಳವೆಬಾವಿಗಳಿದ್ದು, ಇಲ್ಲಿಯವರೆಗೆ ನೀರಿನ ಸಮಸ್ಯೆ ಬಗೆಹರಿದಿಲ್ಲ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಿ ಎಂದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಹುಮನಾಬಾದ್ ಮತಕ್ಷೇತ್ರಕ್ಕೆ 1 ಕೋಟಿ ರು. ಅನುದಾನ ನೀಡಿರುವದನ್ನು ಉಲ್ಲೇಖಿಸಿದ ಶಾಸಕರು. ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸುವುದು ಹಾಗೂ ನೀರಿನ ಮಟ್ಟದ ಮಾಹಿತಿ ಪಡೆಯುವ ಕಾರ್ಯ ಮಾಡಬೇಕು. ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇದ್ದು ಜನರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ತಹಸೀಲ್ದಾರರು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ನಿರಂತರವಾಗಿ ನಿಗಾ ವಹಿಸಬೇಕು ಸೂಚಿಸಿದರು.ಹುಮನಾಬಾದ್ ನಗರಸಭೆ, ಚಿಟ್ಟಗುಪ್ಪ, ಹಳ್ಳಿಖೇಡ (ಬಿ) ಪುರಸಭೆಯಲ್ಲಿ ನಗರಕ್ಕೆ ಬರುವ ಕಾರಂಜಾ ಜಲಾಶಯದ ನೀರಿನ ಪೈಪಲೈನ್ ಪಟ್ಟಣದಲ್ಲಿ ಸಮಸ್ಯೆ ಇದ್ದರೆ ಶೀಘ್ರದಲ್ಲಿಯೇ ಬದಲಾವಣೆ ಮಾಡಿಕೊಳ್ಳಿ. ಹಳ್ಳಿಖೇಡ (ಬಿ) ಪುರಸಭೆ ಸ್ಲಂಬೋರ್ಡ ಸರ್ವೆ ಮಾಡಿದರೆ ಅನುದಾನ ಬರಲಿದೆ. ಹಲವಡೆ 24 ತಾಸು ವಿದ್ಯುತ್ ಸಮಸ್ಯೆ ಇದ್ದು ಕುಡಿಯುವ ನೀರಿನ ಸಮಸ್ಯೆ ನಿಂಗ್ಗಿಸುವ ಕೆಲಸಕ್ಕೆ ಅಡತಡೆ ಉಂಟಾಗುತ್ತಿದೆ. ತಕ್ಷಣ ಅಂತಹ ಸ್ಥಳದಲ್ಲಿ ಸತತ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿಕೊಡಿ ಎಂದು ತಿಳಿಸಿದರು.
ಪ್ರೌಢ ಶಾಲೆಯ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ತಹಸೀಲ್ದಾರ ಜಗದೀಶ ಚೌರ್, ಚಿಟ್ಟಗುಪ್ಪ ತಹಸೀಲ್ದಾರ ಮಂಜುನಾಥ ಪಾಂಚಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕಲ್, ನಿಂಗರಾಜ ಪಾಟೀರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಾಜಕುಮಾರ ಚಾಳೆ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.------
----ಬಾಕ್ಸ್---ಯುಜೆಡಿಗೆ 30 ಕೋಟಿ ರುಪಾಯಿಮಂಜೂರು, ಸಿಸಿ ರಸ್ತೆ ಸದ್ಯ ಬೇಡಹುಮನಾಬಾದ್ ನಗರಸಭೆ ವ್ಯಾಪ್ತಿಯಲ್ಲಿ ಯುಜೆಡಿ ಕಾಮಗಾರಿ 30 ಕೋಟಿ ಮಂಜೂರಾತಿ ಸಿಕ್ಕಿದೆ. ಶಿಘ್ರದಲ್ಲೆ ಅದರ ಕಾಮಗಾರಿ ನಡೆಯಲಿದ್ದು, ಈಗಾಗಲೇ ಅಮೃತ-2 ಯೋಜನೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಯಾವುದೇ ತರಹದ ಸಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಡಿ ಎಂದು ಶಾಸಕ ಡಾ. ಸಿದ್ದು ಪಾಟೀಲ್ ತಿಳಿಸಿದರು.