ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಾಗೂ ನಂ.561ನೇ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ನಗರದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, 1997 ಕರ್ನಾಟಕ ಸೌಹಾರ್ದ ಕಾಯಿದೆ 2001 ಜ.1 ರಂದು ಜಾರಿಗೆ ಬಂದಿತು. ಇದರ ಜ್ಞಾಪಕಾರ್ಥವಾಗಿ ಸೌಹಾರ್ದ ಸಹಕಾರಿ ದಿನ ಆಚರಿಸಲಾಗುತ್ತದೆ ಎಂದರು.2005ರಲ್ಲಿ 200 ಸದಸ್ಯರೊಂದಿಗೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೊಡಗಿನಾದ್ಯಂತ ಸದಸ್ಯರನ್ನು ಹೊಂದಿದ್ದು, ಪ್ರಸ್ತುತ 2313 ಸದಸ್ಯರಿದ್ದಾರೆ. ಸದಸ್ಯರಿಗೆ ವಿವಿಧ ರೀತಿಯ ಸಾಲ, ಸದಸ್ಯರಿಂದ ಠೇವಣಿ ಸಂಗ್ರಹ, ವಿಮೆ ಸೇರಿದಂತೆ ಇ ಸ್ಟಾಂಪಿಂಗ್, ಆರ್.ಟಿ.ಸಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದ್ದು, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಲಾಭದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ ಮಣವಟ್ಟೀರ ಬಿ.ಮಾಚಯ್ಯ, ಹಲವು ವರ್ಷಗಳಿಂದ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ನಮ್ಮದೇ ಆದ ಕಟ್ಟಡ, ಜಾಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಿ ಜಾಗ ಗುರುತಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಎಂ.ಜಿ.ಉಷಾ ಉತ್ತಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಮಣವಟ್ಟೀರ ಬಿ.ಮಾಚಯ್ಯ, ಪೇರಿಯಂಡ ಪಿ.ಪೆಮ್ಮಯ್ಯ, ಸುಳ್ಳಿಮಾಡ ಪಿ.ಮಾದಪ್ಪ, ಪುದಿಯೊಕ್ಕಡ ಎಸ್.ಈರಪ್ಪ, ಪೆಮ್ಮಂಡ ಎ.ಸರಸ್ವತಿ, ಬೈರೇಟ್ಟಿರ ಎಸ್.ಬಿದ್ದಯ್ಯ ಅವರನ್ನು ಗೌರವಿಸಲಾಯಿತು.