ದಾಬಸ್‍ಪೇಟೆ: ಎಲ್ಲ ಸಮಾಜದ ಬಡ, ಮಧ್ಯಮ ವರ್ಗದವರಿಗೆ ಅತಿ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿರುವ ಸಹಕಾರ ಸಂಘಗಳ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಸಂಘದ ಉಪಾಧ್ಯಕ್ಷೆ ಭಾಗ್ಯಮ್ಮ ಹೇಳಿದರು.
ಸೋಂಪುರ ಹೋಬಳಿಯ ಕಂಬಾಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ನಡೆದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಶಿವಾನಂದ ನಗರದಲ್ಲಿ ಪಡಿತರ ವಿತರಣೆಗೆ ಜಾಗ ಸಿಕ್ಕರೆ ಉತ್ತಮ ಕಟ್ಟಡ ನಿರ್ಮಿಸಲಾಗುವುದು. ರಸಗೊಬ್ಬರ, ಎಸ್.ಬಿ. ಮೇಲಿನ ಬಡ್ಡಿದರ, ಪಡಿತರ ವ್ಯವಸ್ಥೆಯನ್ನು ಸರಳೀಕೃತಗೊಳಿಸುತ್ತೇವೆ ಎಂದರು.ಸಿಇಒ ನರಸಿಂಹಮೂರ್ತಿ ಮಾತನಾಡಿ, ನಮ್ಮ ಸಂಘದಲ್ಲಿ 3858 ಸದಸ್ಯರಿದ್ದು, 29 ಕೋಟಿ ವ್ಯವಹಾರ ನಡೆಸಿದೆ, 3.64 ಕೋಟಿ ಬೆಳೆಸಾಲ, ಸ್ತ್ರೀಶಕ್ತಿ ಗುಂಪುಗಳಿಗೆ 48 ಲಕ್ಷ, ಸ್ವಂತ ಬಂಡವಾಳ ಸಾಲವಾಗಿ 2.11 ಕೋಟಿ ನೀಡಿದ್ದೇವೆ ಎಂದರು.
ನಿರ್ದೇಶಕರಿಗೆ ತರಾಟೆ: ಮುಂಗಾರಿನಲ್ಲಿ ಭಾರಿ ಬೇಡಿಕೆಯಿದ್ದ ರಸಗೊಬ್ಬರ ವಿಚಾರವಾಗಿ ಹಾಗೂ ಎಸ್.ಬಿ. ಖಾತೆಗೆ ಬಡ್ಡಿದರ ಹೆಚ್ಚಿಸುವಂತೆ ಸದಸ್ಯ ವಿರೂಪಾಕ್ಷಯ್ಯ ಸಭೆಯ ಮುಂದಿಟ್ಟಾಗ, ನಿರ್ದೇಶಕರ ನಡುವೆ ವಾಗ್ವಾದ ನಡೆಯಿತು.ನಿರ್ದೇಶಕ ಸಿದ್ದರಾಜು ಪ್ರತಿಕ್ರಿಯಿಸಿ, ಮುಂದಿನ ವರ್ಷದಿಂದ ರಸಗೊಬ್ಬರ ಮಾರಾಟ ಮಾಡುವುದಿಲ್ಲ ಎನ್ನುತ್ತಿದ್ದಂತೆ ಆಕ್ರೋಶಗೊಂಡ ರೈತರು ನಮಗೆ ಅನುಕೂಲವಾಗಲೆಂದು ಸಂಘವಿರುವುದು ಈ ಉದ್ದಟತನದ ಹೇಳಿಕೆ ಬೇಡ ಎಂದು ಸಿದ್ದರಾಜುಗೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ನಿರ್ದೇಶಕರಾದ ಹೊನ್ನಗಂಗಶೆಟ್ಟಿ, ನಂಜಪ್ಪ, ಸಿದ್ದರಾಜು, ಅಣ್ಣಯ್ಯಪ್ಪ, ಶೇಷಾಚಲಮೂರ್ತಿ, ಭೈರೇಗೌಡ, ರಾಮಕೃಷ್ಣಯ್ಯ ಚಂದ್ರಕಲಾ, ದೇವರಾಜು, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನರಸಿಂಹಮೂರ್ತಿ, ಸಂಘದ ಸಿಬ್ಬಂದಿಗಳಾದ ಚಂದ್ರಕಲಾ, ಮಂಜುನಾಥ್, ಮಂಗಳಗೌರಮ್ಮ ಬಸವರಾಜು ಉಪಸ್ಥಿತರಿದ್ದರು.ಪೋಟೋ 5 :
ಸೋಂಪುರ ಹೋಬಳಿಯ ಕಂಬಾಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.