ದೇವನಹಳ್ಳಿ:
ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ, ಔಷಧಿ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸುತ್ತಾ ರೈತರ ಬೆನ್ನೆಲುಬಿಗೆ ಸಹಕಾರ ಸಂಘಗಳು ನಿಂತಿದ್ದು, ಸಹಕಾರ ಸಂಘಗಳು ರೈತರ ಬೆನ್ನೆಲುಬು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಹಕಾರ ಸಂಘಗಳು ರೈತರಿಗೆ ಗೊಬ್ಬರ, ಔಷಧಿ, ಸಾಲಸೌಲಭ್ಯ, ವಿವಿಧ ಸವಲತ್ತುಗಳನ್ನು ಸಕಾಲದಲ್ಲಿ ನೀಡಿ ಅವರ ಅಭಿವೃದ್ಧಿಗೆ ಕಾರಣವಾಗಿದೆ. ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತಿದ್ದು ಸಹಕಾರ ಸಂಘಗಳು ಇನ್ನ? ಬೆಳೆಯಬೇಕು. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ಸರ್ಕಾರದಿಂದ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಬಹಳಷ್ಟುಕೊಡುಗೆ ನೀಡುತ್ತಿದೆ. ಸಹಕಾರ ಸಂಘಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು.
ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಜಿ.ಮುನಿರಾಜು ಮಾತನಾಡಿ 1949ರಲ್ಲಿ ಸ್ಥಾಪನೆಯಾದ ಸಂಘ 77 ವರ್ಷ ಪೂರೈಸಿದೆ. ರೈತ ಬಾಂದವರಿಗೆ ಹಾಗೂ ಸಂಘದ ಸದಸ್ಯರಿಗೆ ಪಡಿತರ ಆಹಾರ ಧಾನ್ಯ ಸಂಸ್ಕರಣೆ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸತತವಾಗಿ ಸಂಸ್ಥೆ ಪ್ರತಿವರ್ಷ ಲಾಭಾದಾಯಕವಾಗಿ ಮುನ್ನಡೆಯುತ್ತಿದೆ ಸಂಘದಿಂದ ರೈತಪರ ಅನುಕೂಲವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಸಂಘದ ಪ್ರಗತಿಯಲ್ಲಿ ಮಹತ್ತರ ಪಾತ್ರವಹಿಸಿದ ಎಲ್ಲಾ ಸಹಕಾರಿ ಬಂದುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಇದೇ ವೇಳೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ, ಬಯಪ್ಪ ಅಧ್ಯಕ್ಷ ಶಾಂತಕುಮಾರ್, ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಈರಪ್ಪ, ನಿರ್ದೇಶಕರಾದ ಎ.ದೇವರಾಜ್, ಕೆ.ರಮೇಶ್, ಎಂ.ಗಂಗಾಧರಪ್ಪ, ಚನ್ನಕೃಷ್ಣಪ್ಪ, ಎನ್.ರಾಮಮೂರ್ತಿ, ಮುನಿರಾಜು, ಕೆ.ಶಿವಣ್ಣ, ಕೆ.ಮಂಜುನಾಥ್, ಆರ್.ಚಂದ್ರಶೇಖರ್, ಬಿ.ಸಿ.ಭಾಗ್ಯಮ್ಮ, ಕಾಂತಮ್ಮ, ಎಂ.ರಮೇಶ್, ಎನ್.ನಾಗರಾಜ್, ಮಂಡಿಬೆಲೆ ರಾಜಣ್ಣ, ಪ್ರಭಾರ ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಸದಸ್ಯರು ತಾಲೂಕಿನ ಮುಖಂಡರು ಇದ್ದರು.
೨೪ ದೇವನಹಳ್ಳಿ ಚಿತ್ರಸುದ್ದಿ:೦೨ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು