ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಸ್ಥೆ ಅಗತ್ಯ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Apr 28, 2025, 11:52 PM IST
ಫೋಟೋ ಏ.೨೮ ವೈ.ಎಲ್.ಪಿ. ೦೪ | Kannada Prabha

ಸಾರಾಂಶ

ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಪ್ರಬಲವಾಗಿದೆ. ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ.

ಯಲ್ಲಾಪುರ: ಸಹಕಾರಿ ಕ್ಷೇತ್ರ ಜೀವಂತವಾಗಿದ್ದರೆ ಮಾತ್ರ ರೈತರು ಜೀವಂತಿಕೆಯಿಂದ ಇರಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಏ.೨೮ರಂದು ತಾಲೂಕಿನ ಇಡಗುಂದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದ ವಜ್ರಮಹೋತ್ಸವ ಉದ್ಘಾಟಿಸಿ, ನೆನಪಿನ ಕಾಣಿಕೆ ಬಿಡುಗಡೆ ಮಾಡಿ, ಮಾತನಾಡಿದರು.

ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಪ್ರಬಲವಾಗಿದೆ. ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ. ಸಹಕಾರಿ ಸಂಘ ಶಕ್ತಿಯುತವಾಗಿ ಬೆಳೆಯಬೇಕೆಂದರೆ ರೈತರು ಸಂಘದ ಮೂಲಕವೇ ವ್ಯವಹರಿಸಬೇಕು. ಇಡಗುಂದಿಯು ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದೃಢ ಹೆಜ್ಜೆ ಇರಿಸಿದ್ದು ಅಭಿಮಾನದ ಸಂಗತಿ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಮಾತನಾಡಿ, ಶೋಷಣೆ ತಪ್ಪಿಸುವ ಸಹಕಾರಿ ಕ್ಷೇತ್ರವು ನಿಸ್ವಾರ್ಥ ಸೇವಾ ಮನೋಭಾವದಿಂದ ಮುನ್ನಡೆಯಬೇಕು ಎಂದರು.

ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಸಂಘಗಳು ಬೆಳೆಯಲು ಎಲ್ಲರ ಸಹಕಾರ ಮುಖ್ಯ. ಎಲ್ಲರ ಮನೆಗೆ ಸಹಕಾರಿಯ ಸೌಲಭ್ಯ ದೊರೆಯುವಂತಾಗಬೇಕು. ಸಂಘದ ಸದಸ್ಯರೇ ಸಂಘದ ಕಾವಲುದಾರರಾಗಬೇಕು ಎಂದರು.

ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ಸಹಕಾರಿಕ್ಷೇತ್ರ ಬಲಪಡಿಸಬೇಕು'''''''' ಎಂದರು.

ಸಂಘದ ಮಾಜಿ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಕಾಸ ಬ್ಯಾಂಕ ಅಧ್ಯಕ್ಷ ಮುರಳಿ ಹೆಗಡೆ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಕಳಚೆ ಸೇ.ಸ.ಸ. ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಕುಂದರಗಿ ಸೇ.ಸ.ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ಹಿರಿಯರಾದ ಎಂ.ಆರ್ ಹೆಗಡೆ ಕೊಡ್ಲಗದ್ದೆ, ನಾರಾಯಣ ಭಟ್ಟ ಏಕಾನ್, ಸಹಕಾರಿ ಇಲಾಖೆಯ ಎ.ಕೆ ಮಾಸ್ತಿ, ಸಂಘದ ಉಪಾಧ್ಯಕ್ಷ ಶಿವರಾಮ ಭಟ್ಟ ಕೋಮಡಿ, ನಿರ್ದೇಶಕರಾದ ಶಂಕರ ಭಟ್ಟ ಬಿದ್ರೆಮನೆ, ಎಂ.ಟಿ.ಗೌಡ, ವಿಶ್ವೇಶ್ವರ ಭಟ್ಟ ಕಬ್ಬಳ್ಳಿ, ಶಂಕರ ಕೃಷ್ಣ ಕಣ್ಣಿ, ಗಣಪತಿ ಭಟ್ಟ ಅರಬೈಲ್, ಪ್ರಮೀಳಾ ಭಟ್ಟ ಕೆಳಾಸೆ, ಸುಗಂಧಾ ಭಟ್ಟ, ಸತೀಶ ನಾಯ್ಕ ಪಣಸಗುಳಿ, ಶಶಿಧರ ಸಿದ್ದಿ, ತಿಮ್ಮಣ್ಣ ಬೋವಿ, ಮುಖ್ಯಕಾರ್ಯನಿರ್ವಾಹಕ ಶ್ರೀಪಾದ ಭಾಗ್ವತ ಮುಂತಾದವರು ಉಪಸ್ಥಿತರಿದ್ದರು.

ಮೈತ್ರಿ ಭಟ್ಟ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಚಂದ್ರಕಲಾ ಭಟ್ಟ, ವಿನೋದ ಭಟ್ಟ ನಿರ್ವಹಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?