ಮುಂಡರಗಿ: ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೋಗೇರಿ, ವಿರುಪಾಪುರ, ಮಲ್ಲಿಕಾರ್ಜುನಪುರ ಗ್ರಾಮಗಳ ಹದ್ದಿನಲ್ಲಿ ಬರುವ ಗಾಳಿ ವಿದ್ಯುತ್ ಕಂಬಗಳಲ್ಲಿನ ಕಾಪರ್ ಕೇಬಲ್ ಕಳ್ಳತನವಾದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಮಾಡಿ ಸಾಗಿಸುತ್ತಿದ್ದ ಗಾಳಿ ವಿದ್ಯುತ್ ಕಂಬಗಳಲ್ಲಿನ ₹ 5.40 ಲಕ್ಷ ಮೌಲ್ಯದ ಸುಮಾರು ₹ 4.80 ಕ್ವಿಂಟಲ್ ಕಾಪರ್ ಕೇಬಲ್ಲನ್ನು ವಾಹನ ಸಹಿತ ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನೆಸ್ಪೆಕ್ಟರ್ ಮಂಜುನಾಥ ಕುಸುಗಲ್ ಮಾಹಿತಿ ನೀಡಿದರು.
ಸದರಿ ಕಳ್ಳತನ ಪ್ರಕರಣಗಳ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ವಿಶೇಷ ತಂಡ ರಚನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ನರಗುಂದ ಉಪ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಇನೆಸ್ಪೆಕ್ಟರ್ ಮಂಜುನಾಥ ಕುಸುಗಲ್, ಪಿಎಸ್ಐ ವಿ.ಜಿ. ಪವಾರ, ನುರಿತ ಸಿಬ್ಬಂದಿಗಳೊಂದಿಗೆ ಡಿ. 20 ರಂದು ಎರಡು ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪೈಕಿ ಹಿರೇವಡ್ಡಟ್ಟಿ ಗ್ರಾಮದ ಮೈಲಪ್ಪ ಪೂಜಾರ, ಸುರೇಶ ಭಜಂತ್ರಿ, ಬಸವರಾಜ ಪ್ಯಾಟಿ, ಬೀಡನಾಳ ಗ್ರಾಮದ ಮಹೇಶ ಹರಿಜನ, ಹಿರೇವಡ್ಡಟ್ಟಿಯ ಮೈಲಪ್ಪ ದುರುಗಣ್ಣವರ, ಶರಣಪ್ಪ ಸೋಮಣ್ಣವರ, ಗುಡದಪ್ಪ ಸೋಮಣ್ಣವರ, ಮಹೇಶ ಬಾಲನ್ನವರ, ಕುಮಾರ ಪೂಜಾರ, ದೇವಪ್ಪ ಗುಂಡಿಗೇರಿ, ಮಂಜಪ್ಪ ಕಾಡನ್ನವರ, ಸುನೀಲ ಗುಂಡಿಕೇರಿ, ಅನಿಲ್ ಗುಂಡಿಗೇರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದಾರೆ.
ಈ ಆರೋಪಿತರ ಪೈಕಿ ಮೈಲಪ್ಪ ಪೂಜಾರ, ಸುರೇಶ್ ಭಜಂತ್ರಿ, ಬಸವರಾಜ ಪಾಟೀಲ, ಮಹೇಶ ಹರಿಜನ ಅವರನ್ನು ವಶಕ್ಕೆ ಪಡೆಯಲಾಗಿದೆ.ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ವೇಳೆ ಹಾರೋಗೇರಿ, ವಿರುಪಾಪೂರ, ಮಲ್ಲಿಕಾರ್ಜುನಪುರ ಗ್ರಾಮಗಳ ಹದ್ದಿನಲ್ಲಿ ಇರುವ ಗಾಳಿ ವಿದ್ಯುತ್ ಕಂಬಗಳ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಅವರಿಂದ ಕಾಪರ್ ಕೇಬಲ್ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಪತ್ತೆ ಮಾಡಲು ಶ್ರಮಿಸಿದ ಪೊಲೀಸ್ ಇನೆಸ್ಪೆಕ್ಟರ್ ಮಂಜುನಾಥ ಕುಸುಗಲ್, ಪಿಎಸ್ಐ ವಿ.ಜಿ.ಪವಾರ, ಎ.ಎಸ್.ಐ. ಎಸ್.ಎಂ. ಹಡಪದ, ಸಿಬ್ಬಂದಿ ಜೆ.ಐ. ಬಚ್ಚೇರಿ, ಲಕ್ಷ್ಮಣ ಲಮಾಣಿ, ಮಹೇಶ ಗೊಳಗೊಳಕಿ, ಮಲ್ಲಿಕಾರ್ಜುನ ಬನ್ನಿಕೊಪ್ಪ, ಕೆ.ಎನ್. ಮುಡಿಯಮ್ಮನವರ್, ಎಸ್. ಎಸ್. ಕಂಚಗಾರ, ಎಫ್.ಐ. ಖಾಜಿ, ಐ.ಎ.ಮದರಂಗಿ, ಬಸವರಾಜ ಬಾರಕೇರ, ವೀರೇಶ ಬಿಸನಳ್ಳಿ, ಪಿ.ಎಚ್.ರಾಥೋಡ, ಹನುಮಂತ ಡಂಬಳ, ವಿನಾಯಕ ಬಾಲರೆಡ್ಡಿ, ಬಸವರಾಜ ಬಣಕಾರ, ನಾಗಪ್ಪ ಮಕರಬ್ಬಿ, ಕೆ.ಐ.ಮುತ್ತಾಳಮಠ, ಪರಶುರಾಮ ಧಾರವಾಡ, ತಾಂತ್ರಿಕ ಸಿಬ್ಬಂದಿ ಗುರು ಬೂದಿಹಾಳ ಅವರಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.