ವಿಶ್ವನಾಥ ಮಲೇಬೆನ್ನೂರು
ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಬಿಬಿಎಂಪಿಯು ಡಿಸೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ ₹3,273 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಿದೆ.
ತನ್ಮೂಲಕ ಕಳೆದ 2022ರ ಡಿಸೆಂಬರ್ ಅಂತ್ಯಕ್ಕೆ ಹೋಲಿಕೆ ಮಾಡಿದರೆ ₹532 ಕೋಟಿ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ವಸೂಲಿಯಾಗಿದೆ.ಆರ್ಥಿಕ ವರ್ಷ ಅಂತ್ಯಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದ್ದು, ಆ ವೇಳೆಗೆ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ₹4,412 ಕೋಟಿ ವಸೂಲಿ ಮಾಡುವ ಗುರಿ ಮುಟ್ಟುವ ಪಣವನ್ನು ಬಿಬಿಎಂಪಿ ಕಂದಾಯ ವಿಭಾಗ ತೊಟ್ಟಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ನಲ್ಲಿ ಕೇವಲ 1,225 ಕೋಟಿ ರು. ಆಸ್ತಿ ತೆರಿಗೆ ವಸೂಲಿಯಾಗಿತ್ತು. ಉಳಿದಂತೆ ಮೇನಿಂದ ಈವರೆಗೆ ಕಳೆದ 2022ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರತಿ ತಿಂಗಳೂ ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಿ ಆಗಿದೆ. ಹಾಗಾಗಿ, ಕಳೆದ 2022ರ ಡಿಸೆಂಬರ್ ಅವಧಿಯಲ್ಲಿ ಸಂಗ್ರಹವಾಗಿದ್ದ ಪ್ರಮಾಣಕ್ಕಂತ 532 ಕೋಟಿ ರು. ಹೆಚ್ಚುವರಿ ವಸೂಲಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ, ಕಂದಾಯ ವಸೂಲಿ ಅಧಿಕಾರಿಗಳಿಗೆ ನಿರ್ದಿಷ್ಟ ಗುರಿ ನೀಡಲಾಗಿದೆ. ಬೆಸ್ಕಾಂ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗೆ ನೀಡಿದ ದಾಖಲೆ ಆಧರಿಸಿ ಪರಿಶೀಲಿಸುವುದು. ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರನ್ನು ಗುರುತಿಸಿ ವಸೂಲಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಇರುವ ವ್ಯವಸ್ಥೆಯ ಸುಧಾರಣೆಯಿಂದ ಆಸ್ತಿ ತೆರಿಗೆ ವಸೂಲಿ ಪ್ರಮಾಣದಲ್ಲಿ ಹೆಚ್ಚಳವಾಗಿದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಹದೇವಪುರದಲ್ಲಿ ಹೆಚ್ಚು ಸಂಗ್ರಹ
ಕಳೆದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ 3,332 ಕೋಟಿ ರು, ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 3273 ಕೋಟಿ ರು. ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ 60 ಕೋಟಿ ರು. ಬೇಕಾಗಲಿದೆ. ಮುಂದಿನ 10 ದಿನದೊಳಗೆ 60 ಕೋಟಿ ರು. ಸಂಗ್ರಹವಾಗಲಿದೆ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.₹6 ಸಾವಿರ ಕೋಟಿ ಗುರಿ
ಮೇ ₹532.69 ₹554.11ಜೂನ್ ₹145.77 ₹465.91ಜುಲೈ ₹129.16 ₹201.26ಆಗಸ್ಟ್ ₹86.46 ₹120.48ಸೆಪ್ಟಂಬರ್ ₹79.80 ₹125.20ಅಕ್ಟೋಬರ್ ₹70.45 ₹226.70ನವೆಂಬರ್ ₹98.44 ₹141.76ಡಿಸೆಂಬರ್ ₹71.26 ₹173.28ಜನವರಿ ₹5.83 ₹38.23ಒಟ್ಟು ₹2,749.10 ₹3,272.91