ಕನ್ನಡಪ್ರಭ ವಾರ್ತೆ, ಶೃಂಗೇರಿ
ರಾಜ್ಯದಲ್ಲಿ ಚುನಾವಣೆಗೂ ಮುಂಚೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳು ಸೇರಿದಂತೆ ಆಶ್ವಾಸನೆ ಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯದ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದರು.ತಾಲೂಕಿನ ಮೆಣಸೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ಮಾಡಿದರು. ಉಚಿತ 200 ಯೂನಿಟ್ ವಿದ್ಯುತ್ ಎಂದರು. ಆದರೆ ಕೆಲವರಿಗೆ ಲಕ್ಷಗಟ್ಟಲೆ ಬಿಲ್, ವಿದ್ಯುತ್ ಕಂಬಕ್ಕೆ 26,000, ಠೇವಣಿ ಹೆಚ್ಚಳ, ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 2000 ರು. ನೀಡುತ್ತೇವೆ ಎಂದಿದ್ದರು ನಂತರ ಕುಟುಂಬದ ಒಬ್ಬರಿಗೆ ಮಾತ್ರ ಎಂದು ಉಲ್ಟಾ ಹೊಡೆದರು. ನಿರದ್ಯೋಗಿ ಪದವಿಧರರಿಗೆ ತಿಂಗಳಿಗೆ 3000 ನೀಡುತ್ತೇವೆ ಎಂದಿದ್ದರು. ಯಾವುದನ್ನು ಸರಿಯಾಗಿ ಈಡೇರಿಸಿಲ್ಲ.
ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎಂದು ಸಾರಿ ಸಾರಿ ಹೇಳುತ್ತಾರೆ. ಎಲ್ಲವೂ ಸುಳ್ಳು. 10 ಕೆಜಿ ಅಕ್ಕಿ ನೀಡಿರು ವುದು ಮೋದಿ ಸರ್ಕಾರ. ಕ್ಷೇತ್ರದಲ್ಲಿ ಇರುವುದು ಬೇಜವಾಬ್ದಾರಿಯುತ ಶಾಸಕರಾಗಿದ್ದಾರೆ. ಯಾವುದೇ ಕಾಮಗಾರಿಗಳ ಬಗ್ಗೆ ಮಾತನಾಡಿದರೂ ಜೀವರಾಜ್ ಬಿಡುತ್ತಿಲ್ಲ ಎಂದು ನೆಪ ಹೇಳುತ್ತಿದ್ದರು. ಈಗ ಯಾಕೆ ಮಾಡಲಾಗುತ್ತಿಲ್ಲ.100 ಬೆಡ್ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಡಿಪೋ ನಮ್ಮ ಅವಧಿಯಲ್ಲಿಯೇ ಮಂಜೂರಾಗಿದ್ದರೂ ಶಂಕುಸ್ಥಾಪನೆ ಮಾಡಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಇದು ಕ್ಷೇತ್ರದ ಶಾಸಕರ ವಿಫಲತೆ. ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ಅಡಕೆ ಹಾನಿಕಾರಕ. ಅದನ್ನು ನಿಷೇಧಿಸಬೇಕು ಎಂದು ಹೊರಟವರು ಕಾಂಗ್ರೆಸಿಗರು. ಇದೇ ಜಯಪ್ರಕಾಶ್ ಹೆಗ್ಡೆ ಸಂಸದರಾಗಿದ್ದರು. ಬಿಜೆಪಿ ಅಡಕೆ ಪರವಾಗಿ ಹೋರಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ ಯವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಸ್ಥಳೀಯ ಮುಖಂಡರಾದ ಉಮೇಶ್ ಭಟ್, ರಾಮಕೃಷ್ಣರಾವ್, ದಿನೇಶ್ ಹೆಗ್ಡೆ ಮತ್ತಿತರರು ಇದ್ದರು.
20 ಶ್ರೀ ಚಿತ್ರ 1-ಶೃಂಗೇರಿ ಮೆಣಸೆಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.