ಜಿಲ್ಲಾ ಸಹಕಾರಿ ಬ್ಯಾಂಕಿ ನಿಂದ ಸುಮಾರು 85 ವಿವಿಧ ಖಾಲಿ ಹುದ್ದೆ
ಕನ್ನಡಪ್ರಭ ವಾರ್ತೆ ಕಡೂರುಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಅಧ್ಯಕ್ಷರು, ನಿರ್ದೇಶಕರು ಮತ್ತು ಅಧಿಕಾರಿಗಳ ಮಟ್ಟದಲ್ಲೆ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಶಾಸಕ ಕೆ.ಎಸ್. ಆನಂದ್ ಗಂಭೀರ ಆರೋಪ ಮಾಡಿದರು.
ಬುಧವಾರ ಪಟ್ಟಣದ ತಮ್ಮ ನಿವಾಸದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಿಲ್ಲಾ ಸಹಕಾರಿ ಬ್ಯಾಂಕಿ ನಿಂದ ಸುಮಾರು 85 ವಿವಿಧ ಖಾಲಿ ಹುದ್ದೆಗಳಿಗೆ ಬಹಳಷ್ಟು ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹಣ ನೀಡಿದವರಿಗೆ ಪರೀಕ್ಷೆ ಬರೆಯಿರಿ 30 ಅಂಕಗಳ ಸಂದರ್ಶನದಲ್ಲಿ ನಾವು ಮಾರ್ಕ್ಸ್ ಗಳನ್ನು ನೀಡುತ್ತೇವೆ ಎಂದು ಬ್ಯಾಂಕ್ ನ ನಿರ್ದೇಶಕರು, ಡಿಸಿಪಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಣ ಪಡೆಯಲು ಮುಂದಾಗಿದ್ದಾರೆ ಎಂದು ದೂರಿದರು.ಸುಪ್ರೀಂ ಕೋರ್ಟಿನ ಆದೇಶದಂತೆ ಕ್ಲಾಸ್ 1 ಹುದ್ದೆಗೆ ಅಂಕಗಳಿರುತ್ತದೆ. ಆದರೆ ಸಹಕಾರ ಕ್ಷೇತ್ರದಲ್ಲಿ ಈ ಮಾನದಂಡ ವಿಲ್ಲ.ಆದರೆ ಉನ್ನತ ಶಿಕ್ಷಣ ಪಡೆದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂದರ್ಶನಕ್ಕೆ ಬೋರ್ಡಿನ ನಿರ್ದೇಶಕರು ಯಾವ ಮಾನದಂಡದಿಂದ ಸಂದರ್ಶನ ಮಾಡುತ್ತಾರೆ. ಪಾರದರ್ಶಕತೆ ಇರುವುದಿಲ್ಲ. ಹಾಗಾಗಿ ಇಂಟರ್ ರ್ವ್ಯೂ ಮಾರ್ಕ್ಸ್ ಅನ್ನು ತೆಗೆದುಹಾಕಬೇಕು ಎಂಬುದು ನನ್ನ ಒತ್ತಾಯ ಎಂದರು.
ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರ ಗಮನಕ್ಕೆ ತರಲಾಗಿದೆ. ಆಂತರಿಕ ಅಂಕಗಳನ್ನು ತೆಗೆದು ಹಾಕು ವಂತೆ ಹಾಗು ಅಲ್ಲಿಯವರೆಗೂ ಈ ನೇಮಕಾತಿ ಮುಂದೂಡುವಂತೆ ಮನವಿ ಮಾಡುತ್ತೇನೆ. ನ್ಯಾಯಾಧೀಶರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಪಾರದರ್ಶಕ ಸಂದರ್ಶನ ಮಾಡಿಸಲಿ ಎಂದು ಹೇಳಿದರು.ಸಹಕಾರಿ ಬ್ಯಾಂಕುಗಳಲ್ಲಿ ರೈತರು ಹಣ ಇಡುವ ಮೂಲಕ ವಹಿವಾಟು ನಡೆಯುತ್ತದೆ. ಇದನ್ನು ಅರಿತು ನೇಮಕಾತಿ ಪಾರದರ್ಶಕವಾಗಿ ನಡೆಸಿ, ವಿಡಿಯೋ ರೆಕಾರ್ಡಿಂಗ್ ಮಾಡಿಸಬೇಕು. ಈಗಾಗಲೇ ಅಭ್ಯರ್ಥಿಗಳು ರಾಜಕಾರಣಿಗಳು, ನಿರ್ದೇಶಕರನ್ನು ಭೇಟಿ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಸಂಭಂಧಿಸಿದ ಅಧಿಕಾರಿಗಳು, ಅಧ್ಯಕ್ಷರು ಬ್ಯಾಂಕಿನ ನಿರ್ದೇಶಕರು ಕೆಲಸ ಮಾಡಿಸಿಕೊಡುತ್ತೇನೆ ಎಂದು ಹಣ ಪಡೆದಿದ್ದಾರೆ ಎಂದು ಆರೋಪಿಸಿದ ಅವರು ಈ 85 ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡದಿದ್ದಲ್ಲಿ ಪಿಎಸ್ಐ ನೇಮಕಾತಿ ಪ್ರಕರಣದಂತೆ ಜೈಲು ಪಾಲಾಗುವ ಅಪಾಯವಿದೆ. ಡಿಸಿಸಿ ಬ್ಯಾಂಕಿನ ಅಧಿಕಾರಿಗಳು ನೌಕರರು ಅಥವಾ ನಿರ್ದೇಶಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಲ್ಲಿ ಅಂತವರು ಜೈಲು ಪಾಲಾಗಲು ಶಾಸಕನಾಗಿ ದೊಡ್ಡ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು. ಇದನ್ನು ತಾತ್ಕಾಲಿಕವಾಗಿ ತಡೆಹಿಡಿಬೇಕು ಎಂದು ಸಹಕಾರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
15ಕೆಕೆಡಿಯು1.ಕೆ.ಎಸ್.ಆನಂದ್.