ಆಡಳಿತದಲ್ಲಿರುವ ದುರಾಸಯೇ ಭ್ರಷ್ಟಾಚಾರಕ್ಕೆ ಕಾರಣ

KannadaprabhaNewsNetwork | Published : Apr 28, 2025 12:52 AM

ಸಾರಾಂಶ

ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನೆರವೇರಿಸುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಸನ್ಮಾನ ಮಾಡುವ ಕೆಲಸ ಮಾಡಬೇಕು ಅದು ಸಮಾಜದ ಕರ್ತವ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಡಾ. ಸಂತೋಷ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನೆರವೇರಿಸುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಸನ್ಮಾನ ಮಾಡುವ ಕೆಲಸ ಮಾಡಬೇಕು ಅದು ಸಮಾಜದ ಕರ್ತವ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಡಾ. ಸಂತೋಷ ಹೆಗಡೆ ಹೇಳಿದರು.ಅವರು ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಮತ್ತು ಶ್ರೀಗಂಧ ಬಳೆಗಾರರ ಮತ್ತು ಬಳಕೆದಾರರ ಸಂಶೋಧನಾ ಸಂಘ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನ್ಯಾಯಮೂರ್ತಿಯಾಗಿ ಹಾಗೂ ಹಲವು ಸಂಸ್ಥೆಗಳಲ್ಲಿ ಹಲವಾರು ಹುದ್ದೆಗಳಲ್ಲಿ ನಾನು ಕಾರ್ಯನಿರ್ವಹಿಸಿದೆ ಕೊನೆಗೆ ನಾನು ಲೋಕಾಯುಕ್ತಕ್ಕೆ ಬಂದ ನಂತರ ನನಗೆ ಅನಿಸಿದ್ದು ಲೋಕಾಯುಕ್ತಕ್ಕೆ ಬರುವ ಮುಂಚೆ ನಾನೊಬ್ಬ ಕೂಪ ಮಂಡುಕನಾಗಿದ್ದೆ, ಸಮಾಜದ ಆಗುಹೋಗುಗಳ ಬಗ್ಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಸಮಸ್ಯೆಗಳ ಬಗ್ಗೆ ನನಗೆ ಅರಿವು ಇರಲಿಲ್ಲ. ನಾನು ಸುಖವಾಗಿದ್ದೆ ಹಾಗಾಗಿ ಎಲ್ಲರೂ ಸುಖವಾಗಿಯೇ ಇರುತ್ತಾರೆಂದು ಭಾವಿಸಿದ್ದೆ, ಸಮಸ್ಯೆಗಳು ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಮೂಲ ಕಾರಣ ಕೇವಲ ದುರಾಸೆಯಾಗಿದೆ ಆಡಳಿತದಲ್ಲಿರುವ ಜನರಿಗೆ ಈ ದುರಾಸೆ ಎಂಬ ಕಾಯಿಲೆ ಬಂದ ಕಾರಣ ಹಲವು ಸಮಸ್ಯೆಗಳಿಗೆ ಅದು ಮೂಲವಾಗುತ್ತಿದೆ. ಈ ದುರಾಸೆ ಎಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರೆ ಇಂದು ನಡೆಯುತ್ತಿರುವ ಎಲ್ಲಾ ಹಗರಣಗಳ ಒಟ್ಟು ಮೊತ್ತ ಒಂದು ಲಕ್ಷದ ಎಪ್ಪತೈದು ಸಾವಿರ ಕೋಟಿ ರೂಪಾಯಿಗಳನ್ನು ನಮ್ಮ ರಾಜಕಾರಣಿಗಳು ಅಧಿಕಾರಿಗಳನ್ನು ಬಳಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾರೆ. ಎಲ್ಲರಲ್ಲೂ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ವಿದ್ಯಾರ್ಥಿಗಳಲ್ಲಿ ಅದರ ಅರಿವಾಗಬೇಕು ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅರಿವಾಗಬೇಕು ಎಂದು ತಿಳಿಸಿದ ಅವರು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಲೇ ಇದೆ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಲಂಚ ಕೇಳುವವನಷ್ಟೇ ತಪ್ಪಿತಸ್ಥನಲ್ಲ ಕೊಡುವವನು ಸಹ ತಪ್ಪಿತಸ್ಥ ಎಂದರು.ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯ ಅಧ್ಯಕ್ಷ ದೇವರಾಜುರವರು ಮಾತನಾಡಿ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕಾದಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬೊಬ್ಬ ಸಂತೋಷ ಹೆಗ್ಗಡೆಯ ತವರು ಹುಟ್ಟಬೇಕು ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಇಂದು ಶೋಷಿತ ವರ್ಗದವರಾಗಿದ್ದಾರೆ ಸೂಕ್ತವಾದಂತ ಸೌಲಭ್ಯ ಗಳು ಇವರಿಗೆ ಸಿಗುತ್ತಿಲ್ಲ ಸರ್ಕಾರ ಮನಸ್ಸು ಮಾಡಿ ಪ್ರತಿ ತಾಲೂಕಿನಲ್ಲಿಯೂ ಒಂದೊಂದು ಸಮುದಾಯ ಭವನಗಳು ಮತ್ತು ಪ್ರತಿ ಜಿಲ್ಲೆಗೊಂದುಇ ಎಸ್ ಐ ಆಸ್ಪತ್ರೆಗಳು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಹಾಗೂ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸೋಲೂರು ಮಠದ ಕೃಷ್ಣಮೂರ್ತಿಸ್ವಾಮೀಜಿ, ರಾಜ್ಯ ಕಾರ್ಯಾಧ್ಯಕ್ಷ ಆರ್ ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಉಸ್ತುವಾರಿ ಹಾಗೂ ಶಿರಾ ತಾಲೂಕು ಅಧ್ಯಕ್ಷ ಖಲೀಲ್ ಸಾಬ್, ಮುಖಂಡರಾದ ಬಿ ಆರ್ ಎಂ ಸತ್ಯನಾರಾಯಣ, ರಘು ರಾವ್, ಗ್ರಾಪಂ ಅಧ್ಯಕ್ಷ ಮುಜಾಹಿದ್, ಸದಸ್ಯರಾದ ಗಂಗರಾಜು, ಪಿಡಿಒ ಶಿವಶಂಕರ್, ಹೊಸಪಾಳ್ಯ ಲಿಂಗಪ್ಪ, ಪುಟ್ಟಕಾಮಣ್ಣ, ಸೇರಿದಂತೆ ಸಾವಿರಾರು ಜನ ಕಟ್ಟಡ ಕಾರ್ಮಿಕರು ಫಲಾನುಭವಿಗಳು ಸಾರ್ವಜನಿಕರು ಹಾಜರಿದ್ದರು.

Share this article