ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಪ್ರಸಿದ್ಧ ಶ್ರೀಗವಿಮಠದ ಜಾತ್ರೆ ಜ.05 ರಿಂದ ಆರಂಭವಾಗಲಿದ್ದು, ಈಗಾಗಲೇ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಸದಾ ಹೊಸತನದೊಂದಿಗೆ ಪ್ರತಿ ವರ್ಷ ಜರುಗುವ ಜಾತ್ರೆ ವಿಭಿನ್ನವೆನಿಸುತ್ತದೆ. ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಗೆ ಈ ಬಾರಿಯೂ ಡಿಜಿಟಲ್‌ಆಮಂತ್ರಣ ನೀಡುವ ಟ್ರೈಲರ್‌ಸಾಂಗ್ ಬಿಡುಗಡೆಯಾಗಿದೆ. ಈ ಮೂಲಕ ಗವಿಮಠದ ಜಾತ್ರೆಗೆ ಭಕ್ತರನ್ನು ಆಹ್ವಾನಿಸಲಾಗುತ್ತಿದೆ.
ಓಂಕಾರವು ಕೋಟೆಕಟ್ಟಿ,,,, ಬೆಟ್ಟಗಳು ಧ್ಯಾನದಲಿ
ಸಿದ್ದ ಪುರುಷ ಗವಿಸಿದ್ದನೇ ಇಷ್ಟ ಪ್ರಾಣ ಭಾವದಲ್ಲಿಜಾತ್ರೋತ್ಸವ ನಮ್ಮಯಾತ್ರೋತ್ಸವ”...
ಸಾಮಾಜಿಕ ಜಾಲತಾಣಗಳು ಅತ್ಯಂತ ಜನಪ್ರಿಯವಾಗಿರುವುದರಿಂದ ಜನರನ್ನು ಬಹಳ ಸರಳವಾಗಿ ತಲುಪಬಹುದು. ಹೀಗಾಗಿ ಶ್ರೀಮಠವೂ ಇಂತಹ ಹೊಸ ಪ್ರಯೋಗ ಪ್ರತಿ ವರ್ಷದ ಜಾತ್ರೆಯಲ್ಲಿಯೂ ಅಳವಡಿಸಿಕೊಂಡು ಭಕ್ತರಿಗೆ ಮಾಹಿತಿ ಹಂಚುತ್ತಿದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಡಿಜಿಟಲ್ ಆಮಂತ್ರಣದ ಟ್ರೈಲರ್‌ವಿಡಿಯೋ ಹೆಚ್ಚು ಜನರನ್ನು ತಲುಪಲಿದ್ದು ಪ್ರತಿ ವರ್ಷವೂ ಹೆಚ್ಚಿನ ಭಕ್ತರು ಜಾತ್ರೆಗೆ ಅನುಕೂಲವಾಗುತ್ತಿದೆ. ಡಿಜಿಟಲ್ ಆಮಂತ್ರಣದ ಇಂತಹ ವಿಡಿಯೋಗಳನ್ನು ಈಗಾಗಲೇ ಹಲವು ವರ್ಷಗಳಿಂದ ಶ್ರೀಮಠ ಜಾತ್ರೆಗೂ ಮುನ್ನ ರೆಡಿ ಮಾಡಿ ಬಿಡುಗಡೆ ಮಾಡುತ್ತಿದೆ. ಈ ಬಾರಿ ಜಾತ್ರೆಯ ಸಿದ್ದತೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೇವಾ ಕಾರ್ಯಕರ್ತರ ಮೂಲಕ ಬಿಡುಗಡೆ ಮಾಡಿರುವುದು ವಿಶೇಷ. ಜಾತ್ರೆಯ ಸಿದ್ದತೆಯ ಸೇವಾ ಕಾರ್ಯದಲ್ಲಿ ಸೇವೆ ಮಾಡುತ್ತಿರುವ ನಾಗವ್ವ ಮ್ಯಾಗಳಮನಿ, ಹುಲಿಗೆವ್ವ ಅಗಳಕೇರಾ, ಶೋಭಾ ಇಟಗಿ, ಲಕ್ಷ್ಮೀ ಬೆಲ್ಲದ, ಭರಮವ್ವ ಬೋಚಹನಳ್ಳಿ, ಅಮೃತಾ, ಯಲ್ಲಮ್ಮ, ಈರಮ್ಮ, ಮಾತೆಂಗವ್ವ, ರುದ್ರಗೌಡ, ಮಲ್ಲಿಕಾರ್ಜುನಯ್ಯ ಅವರಿಂದ ಈ ವಿಡಿಯೋ ಟ್ರೈಲರ್‌ಸಾಂಗ್ ಬಿಡುಗಡೆಗೂಳಿಸಿದ್ದು ಜಾತ್ರೆಯ ವಿಶೇಷತೆಯಾಗಿದೆ.
https://drive.google.com/file/d/14QCE6_Enl4t5fcAlcHip82nOia3VHsy_/view?usp=sharing