ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಸಾಮರಸ್ಯದ ನಗರ, ‘ಸೂಫಿ-ಸಂತ ತತ್ತ್ವಶಾಸ್ತ್ರ’ದ ಸಂಗಮಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರವನ್ನು ಹೊಂದಿದೆ. ಇಲ್ಲಿ ಶರಣಬಸವೇಶ್ವರರ ಪಾರ್ಥಿವ ಶರೀರ ಸಮಾಧಿಯಲ್ಲಿ ನೆಲೆಗೊಂಡಿದ್ದಾರೆ. ಪ್ರತಿ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ತಮ್ಮ ಭಕ್ತಿ ನಮನ ಸಲ್ಲಿಸುತ್ತಾರೆ.
ಇಡೀ ದಿನ ಭಕ್ತರ ಉಪವಾಸ ವ್ರತ: ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದಲ್ಲಿರುವ ಬಡವರ ಮತ್ತು ವಂಚಿತ ವರ್ಗದವರ ಅಗತ್ಯತೆಗಳನ್ನು ಪೂರೈಸಲು ಮುಡಿಪಾಗಿಟ್ಟ ಸಂತ ಶರಣಬಸವೇಶ್ವರರು ತಾವು ಹೋಳಿ ಆಚರಣೆಯ ಐದು ದಿನಗಳ ನಂತರ ಲಿಂ. ಮುನ್ಸೂಚನೆ ನೀಡಿದ್ದರು ಮತ್ತು ಅದೇ ದಿನ ಅವರು ದಾಸೋಹ ಮಹಾಮನೆಯಲ್ಲಿ ಕೊನೆಯುಸಿರೆಳೆದರು.ಈ ದಿನ ಭಕ್ತರು ಇಡಿ ದಿನ ಉಪವಾಸವಿದ್ದು, ಸಂಜೆ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ಜರುಗುವ ರಥೋತ್ಸವದ ನಂತರ ಸಿಹಿ ತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಿ ಪೂಜೆ ಸಲ್ಲಿಸುತ್ತಾರೆ.
‘ಉಚ್ಛಾಯಿ’ (ಉತ್ಸವ) ಒಂದು ದಿನ ಮುಂಚಿತವಾಗಿ ನಡೆಯುತ್ತದೆ. ಇದರಲ್ಲಿ ಸಂಸ್ಥಾನದ ಪೂರ್ವ ಪೀಠಾಧಿಪತಿಗಳು ಲಿಂಗೈಕ್ಯರಾದ ವರ್ಷವನ್ನು ಗುರುತಿಸುವು ಅಂಗವಾಗಿ ದೇವಸ್ಥಾನದ ಸುತ್ತಲೂ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ‘ಉಚ್ಛಾಯಿ’ (ಸಣ್ಣ ರಥ) ಎಳೆಯಲಾಗುತ್ತದೆ.ರಥೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ಯುಗಾದಿ ಹಬ್ಬದವರೆಗೆ ಹತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವ್ಯಾಪಾರಿಗಳು ತಮ್ಮ ಸರಕುಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಮಕ್ಕಳಿಗೆ ಮನರಂಜನೆ ಮತ್ತು ವಿನೋದ ಹಾಗೂ ಉಲ್ಲಾಸಕ್ಕಾಗಿ ವಿಶೇಷ ಆವರಣವನ್ನು ಮೀಸಲಿಡಲಾಗಿದೆ.
ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ಭಕ್ತನು ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಹೆಜ್ಜೆ ಹಾಕುತ್ತಾನೆ. ಹುಳಿ ಬಾನವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಐದು ಬಾರಿ ರಥದ ಪ್ರದಕ್ಷಿಣೆ ಹಾಕಿದ ನಂತರ ರಥವು ದೇಗುಲದ ಸಂಕೀರ್ಣದಲ್ಲಿ ಪ್ರದಕ್ಷಿಣೆ ಮಾಡಿ, ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ ಭಕ್ತರಿಗೆ ವಿತರಿಸಲಾಗುತ್ತದೆ.