ಬ್ಯಾಡಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಎದೆತಟ್ಟಿ ಹೇಳಿಕೊಳ್ಳಿ. ಇಲ್ಲದಿದ್ದರೆ ತಲೆ ತಗ್ಗಿಸಿ ನಡೆಯಬೇಕಾದ ಕಾಲ ದೂರವಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ತಾಲೂಕು ಮಂಡಳ ಹಾಗೂ ವಿವಿಧ ಮುಖಂಡರೊಂದಿಗೆ ಸ್ವಚ್ಛತಾ ಕಾರ‍್ಯ ನಡೆಸಿ ಮಾತನಾಡಿದರು.
ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಅಭಿವೃದ್ಧಿ ಹತ್ತು ಪಟ್ಟು ಹೆಚ್ಚಿದೆ. ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಸಿಕ್ಕಿದೆ. ಭಾರತದಲ್ಲಿ ಇತಿಹಾಸದಲ್ಲಿ ನರೇಂದ್ರ ಮೋದಿ ಅವರಂಥ ನೇರ ದಿಟ್ಟ ನಿರ್ಧಾರದ ವ್ಯಕ್ತಿತ್ವ ಹೊಂದಿದ ಹಾಗೂ ದೇಶಪ್ರೇಮಿ ಪ್ರಧಾನಮಂತ್ರಿ ಮತ್ತೊಬ್ಬರಿಲ್ಲ ಎಂದರು.ಯುಪಿಐ ಐಡಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಕೇವಲ 10 ವರ್ಷಗಳಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಮೋದಿ ಜನಪ್ರಿಯತೆ ಅಭಿವೃದ್ಧಿ ಪರ ಚಿಂತನೆಗಳು ವಿಶ್ವವನ್ನೇ ಬೆರಗುಗೊಳಿಸಿದೆ. ಅಕ್ಷರ ಜ್ಞಾನವಿಲ್ಲದವರೂ ಬ್ಯಾಂಕ್ ಜತೆ ವಹಿವಾಟು ನಡೆಸುತ್ತಿದ್ದು, ಪ್ರತ್ಯೇಕ ಯುಪಿಐ ಐಡಿ ಹೊಂದಿದ್ದಾರೆ. ಇದಕ್ಕಿಂತ ಬದಲಾವಣೆ ಬೇಕೆ ಎಂದರು.ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಹಾವನೂರ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಫಕ್ಕಿರಮ್ಮ ಛಲವಾದಿ, ಹನುಮಂತ ಮ್ಯಾಗೇರಿ, ವಿನಯ ಹಿರೇಮಠ, ಮುಖಂಡರಾದ ಶಿವಯೋಗಿ ಶಿರೂರು, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ವಿಜಯ ಮಾಳಗಿ, ಸುರೇಶ ಉದ್ಯೋಗಣ್ಣನವರ, ಸುರೇಶ ಆಸಾದಿ ವಿಷ್ಣುಕಾಂತ ಬೆನ್ನೂರ, ವಿದ್ಯಾಶೆಟ್ಟಿ, ಮುರಿಗೆಪ್ಪ ಶೆಟ್ಟರ, ಶಿವಯೋಗಿ ಗಡಾದ, ಪರಶುರಾಮ ಉಜನಿಕೊಪ್ಪ, ವಿನಾಯಕ ಕಂಬಳಿ, ಪ್ರದೀಪ ಜಾಧವ, ಜ್ಯೋತಿ ಕುದರಿಹಾಳ, ಗಿರಿಜಾ ಪಟ್ಟಣಶೆಟ್ಟಿ, ಸಂತೋಷ ಮೂಲಿಮನಿ, ಗಣೇಶ ಆಚಲಕರ, ನಿಂಗಪ್ಪ ಆಡಿನವರ ಇತರರಿದ್ದರು.