ಕನ್ನಡಪ್ರಭ ವಾರ್ತೆ ಹನೂರು
ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರು ಜನರಲ್ಲಿ ಜಾಗೃತಿ ಮೂಡಿಸಿದ ಪವಾಡ ಪುರುಷರು. ಇಂತಹ ಪುಣ್ಯ ಕ್ಷೇತ್ರದಲ್ಲಿ ಉಚಿತ ವಿವಾಹ ಮಹೋತ್ಸವ ನಡೆಯುತ್ತಿದೆ ಎಂದರೆ ನೀವೆಲ್ಲರೂ ಪುಣ್ಯವಂತರು. ಇಂತಹ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ನೀವು ಒಳ್ಳೇಯ ಜೀವನ ನಡೆಸಬೇಕು. ದಂಪತಿಗಳು ಇಬ್ಬರೂ ಆದರೂ ಮಾನಸಿಕವಾಗಿ ಒಂದೇ ಆಗಬೇಕು. ಪರಸ್ಪರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಂದರವಾಗಿರುತ್ತದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಇಲ್ಲಿನ ಶಾಸಕ ಎಂ.ಆರ್. ಮಂಜುನಾಥ್ ಸಹ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ನೀಡುತ್ತಿದ್ದಾರೆ. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಲಿ ಎಂದರು.
ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಆದರೇ ಪುಣ್ಯದ ಕೆಲಸ ಆದಂತೆ. ದೇವರು ಸದಾ ನಿಮ್ಮ ಬಾಳನ್ನು ಹಸನು ಮಾಡುತ್ತಾನೆ. ಜೊತೆಗೆ ನಿಮಗೆ ಆರ್ಥಿಕವಾಗಿ ಒಂದಷ್ಟು ಸಹಾಯ ಆದಂತೆ ಆಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ.ಹಾಗಾಗಿ ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.ದೇವಾಲಯದಲ್ಲಿ ಮದುವೆಯಾದರೆ ಜೋಡಿಗಳ ಜೀವನ ನೆಮ್ಮದಿಯಾಗಿರುತ್ತದೆ ಎಂಬುದು ವಾಡಿಕೆ ಅದರಂತೆ ನಿಮ್ಮೆಲ್ಲರ ಬದುಕು ಚೆನ್ನಾಗಿರಲಿ ಎಂದು ಮಹದೇಶ್ವರರಲ್ಲಿ ಪ್ರಾರ್ಥನೆ ಮಾಡುತ್ತೇನೆ, ಇಲ್ಲಿಯವರೆಗೆ 1989ರಿಂದ 2024 ಸಾಲಿನವರೆಗೆ ನವ ದಂಪತಿಗಳು ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಮಗಲ್ಲರಿಗೂ ಮಾದಪ್ಪನ ಆಶೀರ್ವಾದ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ.
ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಣ ಉಳ್ಳವರಿಗೆ ತಿರುಪತಿ ಆದರೆ ಬಡವರಿಗೆ ಮಾದಪ್ಪನ ಬೆಟ್ಟ. ಶ್ರೀ ಕ್ಷೇತ್ರ 93 ಜೋಡಿಗಳು ನವಜೀವನಕ್ಕೆ ಕಾಲಿಟ್ಟಿರುವುದು ಮಾದಪ್ಪನ ಶ್ರೀರಕ್ಷೆಯೊಂದಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಬೆಟ್ಟಕ್ಕೆ ಬಂದು ವಿವಾಹವಾಗಿರುವ ನವ ವಧುಗಳಿಗೆ ಶುಭವಾಗಲಿ ಎಂದು ತಿಳಿಸಿದರು.
ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೆಟ್ಟೂರು ಶಾಸಕರಾದ ಸದಾಶಿವಂ, ಗ್ರಾರಂಟಿ ಯೋಜನೆ ಗಳ ಅಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯಿತಿ ಸಿ ಇ ಒ ಮೋನಾ ರೋತ್, ಎಸ್ ಪಿ ಡಾ. ಬಿ ಟಿ ಕವಿತಾ, ಪ್ರಾಧಿಕಾರದ ಕಾರ್ಯದರ್ಶಿ ಎ. ಇ. ರಘು ,ಉಪ ಕಾರ್ಯದರ್ಶಿ ಚಂದ್ರಶೇಖರ್,ಡಿ ವೈ ಎಸ್ ಪಿ ಧರ್ಮೇoದ್ರ, ಹನೂರು ತಹಸೀಲ್ದಾರ್ ಚೈತ್ರ, ನಾಮನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಮರಿಸ್ವಾಮಿ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.