ಗೋ ಸಂರಕ್ಷಣೆ, ವೈಜ್ಞಾನಿಕ ಪಶುಸಂಗೋಪನೆ ತರಬೇತಿ

KannadaprabhaNewsNetwork |  
Published : Sep 09, 2026, 03:00 AM IST
ಗೋ ಸಂರಕ್ಷಣೆ ಹಾಗೂ ವೈಜ್ಞಾನಿಕ ಪಶುಸಂಗೋಪನೆ ಕುರಿತು ರೈತರಿಗೆ ತರಬೇತಿ | Kannada Prabha

ಸಾರಾಂಶ

ವಿಜಯಪುರ ನಗರದ ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬಿಜಾಪುರ ವತಿಯಿಂದ ತಾಲೂಕಿನ ಕಗ್ಗೋಡದಲ್ಲಿರುವ ಯತ್ನಾಳ ಗೋ ರಕ್ಷಾ ಕೇಂದ್ರದ ಗೋ ಶಾಲೆಯಲ್ಲಿ ರೈತರಿಗೆ ಗೋ ಸಂರಕ್ಷಣೆ, ಸುಸ್ಥಿರ ಗೋಸಂಗೋಪನೆ ಹಾಗೂ ವೈಜ್ಞಾನಿಕ ಪಶುಸಂಗೋಪನೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯಪುರ: ನಗರದ ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬಿಜಾಪುರ ವತಿಯಿಂದ ತಾಲೂಕಿನ ಕಗ್ಗೋಡದಲ್ಲಿರುವ ಯತ್ನಾಳ ಗೋ ರಕ್ಷಾ ಕೇಂದ್ರದ ಗೋ ಶಾಲೆಯಲ್ಲಿ ರೈತರಿಗೆ ಗೋ ಸಂರಕ್ಷಣೆ, ಸುಸ್ಥಿರ ಗೋಸಂಗೋಪನೆ ಹಾಗೂ ವೈಜ್ಞಾನಿಕ ಪಶುಸಂಗೋಪನೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಪ್ರಣೇಶ ಜಹಾಗೀರದಾರ ರೈತರಿಗೆ ಉಪಯುಕ್ತವಾದ ಮಾಹಿತಿ ನೀಡಿದರು. ಹಸುಗಳ ಉತ್ತಮ ಆರೈಕೆ, ಪೌಷ್ಟಿಕ ಆಹಾರ, ಆರೋಗ್ಯ ನಿರ್ವಹಣೆ, ಹಾಲಿನ ಉತ್ಪಾದನೆ ಹೆಚ್ಚಿಸುವ ವೈಜ್ಞಾನಿಕ ವಿಧಾನಗಳು ಹಾಗೂ ಗೋ ಆಧಾರಿತ ಸುಸ್ಥಿರ ಕೃಷಿಯ ಮಹತ್ವದ ಕುರಿತು ವಿವರಿಸಿದರು. ಹಸುಗಳನ್ನು ಕೇವಲ ಹಾಲಿನ ಉತ್ಪಾದನೆಯ ದೃಷ್ಟಿಯಿಂದ ನೋಡದೆ, ಕೃಷಿ ಮತ್ತು ರೈತರ ಆರ್ಥಿಕತೆಯೊಂದಿಗೆ ಅವುಗಳ ಮಹತ್ವದ ಸಂಬಂಧವನ್ನು ಅರಿತುಕೊಂಡು ವೈಜ್ಞಾನಿಕವಾಗಿ ಪಶುಸಂಗೋಪನೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬಿಜಾಪುರ ಅಧ್ಯಕ್ಷೆ ಸುಖಲತಾ ಬಿರಾದಾರ, ಕಾರ್ಯದರ್ಶಿ ನಿರ್ಮಲಾ ದೊಡಮನಿ, ಖಜಾಂಚಿ ವಿದ್ಯಾ ಕೊಕಾರೆ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಗೆ ಐಟಿ ಕಂಪನಿ ತರಲು ಪ್ರಯತ್ನ
ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ