ಗಬ್ಬದ ದನ ವಧೆ: ಹಿಂದೂ ಸಂಘಟನೆಯಿಂದ ಪ್ರತಿಭಟನೆ

KannadaprabhaNewsNetwork |  
Published : Sep 07, 2025, 01:01 AM IST
ಪ್ರತಿಭಟನೆ | Kannada Prabha

ಸಾರಾಂಶ

ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದು, ಅವರ ಜಮೀನಿನಲ್ಲೇ ವಧಿಸಿ ಮಾಂಸ ಸಾಗಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಪೆರ್ನೆಯ ಕಡಂಬು ಎಂಬಲ್ಲಿ ಪ್ರತಿಭಟನೆ ನಡೆಯಿತು.

 ಉಪ್ಪಿನಂಗಡಿ :  ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದು, ಅವರ ಜಮೀನಿನಲ್ಲೇ ವಧಿಸಿ ಮಾಂಸ ಸಾಗಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಪೆರ್ನೆಯ ಕಡಂಬು ಎಂಬಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಈಗಾಗಲೇ ಬಂಟ್ವಾಳ ಪೊಲೀಸರು ಪತ್ತೆ ಹಚ್ಚಿದ ಗೋ ಹಂತಕರು ನಿಜವಾದ ಪೆರ್ನೆ ಪ್ರಕರಣದ ಆರೋಪಿಗಳು ಹೌದೆನ್ನುವುದಾದರೆ ಅವರಿಗೆ ಪೆರ್ನೆಯ ದೇಜಪ್ಪ ಮೂಲ್ಯ ಅವರ ಹಟ್ಟಿಯಲ್ಲಿ ದನವಿರುವುದರ ಮಾಹಿತಿಯನ್ನು ನೀಡಿರುವವರು ಯಾರು ಎನ್ನುವುದನ್ನೂ ಪತ್ತೆ ಹಚ್ಚಬೇಕು.

 ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ನೈಜ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ನಾಯಕ ನರಸಿಂಹ ಮಾಣಿ ಮೊದಲಾದವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಪೆರ್ನೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಂತ್ರಸ್ತ ದೇಜಪ್ಪ ಮೂಲ್ಯ ಅವರಿಗೆ ಧನಸಹಾಯವನ್ನು ವಿತರಿಸಲಾಯಿತು.

ಪ್ರತಿಭಟನೆಯಲ್ಲಿ ಕಿರಣ್ ಶೆಟ್ಟಿ, ನವೀನ್ ಪದಬರಿ, ಕೇಶವ ಸುಣ್ನಾಣ, ಪ್ರಕಾಶ್ ನಾಯಕ್, ಉಷಾ ಮುಳಿಯ, ಧನಂಜಯ್ ನಟ್ಟಿಬೈಲು, ಆದೇಶ್ ಶೆಟ್ಟಿ, ಪ್ರಸನ್ನ ಕುಮಾರ್ ಮಾರ್ಥ, ಪ್ರಸಾದ್ ಭಂಡಾರಿ, ಮುತ್ತಪ್ಪ ಸಾಲಿಯಾನ್, ಶಾರದಾ, ಸುಮತಿ, ಜಯಂತಿ, ಸುಜಾತ, ನರಸಿಂಹ ನಾಯಕ್, ಉಮೇಶ್ ಸಾಮಂತ್, ಶ್ರೀಕಾಂತ್ ಮಣಿಯಾಣಿ, ಶಿವಪ್ಪ ನಾಯ್ಕ್, ರಮೇಶ್ ನಾಯ್ಕ್, ದೀಪಕ್ ಶೆಟ್ಟಿ, ಶರೋನ್ ನೊರೋನ್ಹಾ, ರಾಬರ್ಟ್ ಫರ್ನಾಂಡಿಸ್, ರಕ್ಷಿತ್ ಮತ್ತಿತರರು ಭಾಗವಹಿಸಿದ್ದರು.ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಬಂದೋಬಸ್ತ್‌ ನಡೆಸಲಾಯಿತು.ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ಕೃತ್ಯ ನಡೆದ ದೇಜಪ್ಪ ಮೂಲ್ಯ ಅವರ ಮನೆಗೆ ತೆರಳಿ, ಧೈರ್ಯ ತುಂಬಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''