ಕನ್ನಡಪ್ರಭ ವಾರ್ತೆ ಘಟಪ್ರಭಾ
ಗುರುವಾರ ಸಂಜೆ ಘಟಪ್ರಭಾ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶೋತ್ಸವ ಹಾಗೂ ಈದ್ ಮೀಲಾದ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎರಡು ಹಬ್ಬಗಳು ಕೂಡಿ ಬರುವುದರಿಂದ ಹಿಂದು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಅಹಿತಕರ ಘಟನೆಗಳು ನಡೆಯದ ಹಾಗೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪಿಎಸ್‌ಐ ಕಣವಿ ಮಾತನಾಡಿ, ನಾವು ಬಂದೋಬಸ್ತ್ ಒದಗಿಸುವ ಕೆಲಸ ಮಾಡುತ್ತೇವೆ. ಪ್ರತಿಯೊಂದು ಗಣಪತಿಯವರು ಪೆಂಡಾಲ್‌ದಲ್ಲಿ ವಾಲೆಂಟೆರಿಗಳನ್ನು ನೇಮಿಸಬೆಕೆಂದು ಹೇಳಿದರು.ಮುಖಂಡರಾದ ಶಂಕರ ಕಮತೆ ಸಭೆಯನ್ನೇದ್ದೀಶಿಸಿ ಮಾತನಾಡಿ, ಘಟಪ್ರಭಾ ನಗರವು ಬಾವೈಕ್ಯತೆಯಿಂದ ಕೂಡಿದ್ದು, ಇಲ್ಲಿ ಯಾವದೇ ಗಲಭೆಗಳು ಸಂಭವಿಸುವುದಿಲ್ಲ. ಎಲ್ಲ ಹಬ್ಬಗಳನ್ನು ಕೂಡಿಕೊಂಡು ಅಚರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಜಿ.ಎಸ್. ರಜಪೂತ, ಮೌಲಸಾಬ ಬಾಗವಾನ, ಜಹಾಂಗೀರ್ ಬಾಗವಾನ, ಸಲೀಮ್ ಕಬ್ಬೂರ, ಕೆಂಪಣ್ಣ ಚೌಕಶಿ, ಅಪ್ಪಾಸಾಬ ಮುಲ್ಲಾ, ದಿಲಾವರ್ ನದಾಫ್, ಗಣೇಶ ಗಾಣೀಗ, ವಿಠ್ಠಲ ಕರೋಶಿ, ಸೂಲ್ಲಾಪೂರೆ, ಇಕಬಾಲ, ಕೆಂಪಯ್ಯಾ ಪುರಾಣಿಕ, ಅಶೋಕ ಗಾಡಿವಡ್ಡರ, ವಿನಾಯಕ ಕತ್ತಿ, ಹಾಗೂ ಸಿಬ್ಬಂದಿ ರಾಜು ದೋಮಾಳೆ, ಬಿ.ಎಸ್.ನಾಯಿಕ ಸೇರಿದಂತೆ ಘಟಪ್ರಭಾ, ಪಾಮಲದಿನ್ನಿ, ಅರಭಾಂವಿ, ಗಣೇಶವಾಡಿ, ಶಿಂದಿಕುರಬೇಟ, ಧುಪದಾಳ ಹಾಗೂ ಸಂಗನಕೇರಿ ಗ್ರಾಮದ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.