-ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಾಣಿಕರಾವ್ ಕುಲಕರ್ಣಿ ಸನ್ಮಾನ
----ಕನ್ನಡಪ್ರಭ ವಾರ್ತೆ ವಡಗೇರಾ
ರೈತರು ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆ ಕಂಡುಬಂದಲ್ಲಿ ನಮ್ಮ ಸಿಬ್ಬಂದಿಗಳು ತಕ್ಷಣವೇ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಯಾದಗಿರಿ ಜಿಲ್ಲಾ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಾಣಿಕರಾವ್ ಕುಲಕರ್ಣಿ ಸೂಚನೆ ನೀಡಿದರು.ಪಟ್ಟಣದಲ್ಲಿರುವ 33 ಉಪ ವಿದ್ಯುತ್ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಗ್ರಾಹಕರೇ ನಮಗೆ ಆದಾಯದ ಮೂಲವಾಗಿದ್ದು, ಅವರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿನ ವಿದ್ಯುತ್ ಗೆ ಸಂಬಂಧಿಸಿದ ಹಳೆಯದಾದ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನು ಬದಲಿಸುವ ಕಾರ್ಯಕ್ಕೆ ಮುಂದಾಗಿ ಮತ್ತು ಪರಿವರ್ತಕ, ವಿದ್ಯುತ್ ತಂತಿಗಳ ಮೇಲೆ ಹಾದು ಹೋಗಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಇಲಾಖೆಯು ಅಧಿಕಾರಿಗಳಿಗೆ ಮೊಬೈಲ್ ನೀಡಿದ್ದು, ಸಾರ್ವಜನಿಕರ ಕರೆಗಳಿಗೆ ಸ್ಪಂದಿಸುವಂತೆ ತಿಳಿಸಿದರು.ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯ ಸ್ಥಾನದಲ್ಲಿ ಲಭ್ಯವಿರಬೇಕು. ಲೈನ್ ಮ್ಯಾನ್ ಗಳು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ನೂತನವಾಗಿ ಜಿಲ್ಲಾ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಹುದ್ದೆಗೆ ಅಧಿಕಾರ ವಹಿಸಿಕೊಂಡು ಭೇಟಿ ನೀಡಿದ ವೇಳೆ ಮಾಣಿಕರಾವ್ ಕುಲಕರ್ಣಿ ಹಾಗೂ ಉಪ ವಿಭಾಗಿಯ ಲೆಕ್ಕಾಧಿಕಾರಿಗಳಾದ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.ವಡಗೇರಾ ಉಪ ವಿದ್ಯುತ್ ಕೇಂದ್ರದ ಶಾಖಾಧಿಕಾರಿ ಥಾಮಸ್, ಇಕ್ಬಾಲ್ ಸಾಬ್, ಗೂಳಪ್ಪ, ಭೀಮರಾಯ, ಬಂದೇಶ್ ಗೌಡ, ಸೂಗರಯ್ಯ ಸ್ವಾಮಿ, ರುದ್ರಗೌಡ ಐರೆಡ್ಡಿ, ಭೀರಪ್ಪ ಕೊಂಕಲ್, ಅಯ್ಯಣ್ಣ, ರಫಿ ನದಾಫ್, ಮರೆಪ್ಪ ಸೇರಿದಂತೆ ಇತರರಿದ್ದರು.
-23ವೈಡಿಆರ್9: ವಡಗೇರಾ ಪಟ್ಟಣದಲ್ಲಿರುವ 33 ಉಪ ವಿದ್ಯುತ್ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಯಾದಗಿರಿ ಜಿಲ್ಲಾ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಮಾಣಿಕರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.