ಉದ್ದಟತನ ಪ್ರದರ್ಶಿಸದಂತೆ ಸಿಪಿಐ ಎಚ್ಚರಿಕೆ

KannadaprabhaNewsNetwork |  
Published : Aug 29, 2024, 12:56 AM IST
ತಾಳಿಕೋಟೆ 3 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಯಾವುದೇ ಹಬ್ಬಗಳಿರಲಿ ಒಳ್ಳೆಯ ನೀತಿ ಪಾಠ ಕಲಿಸುತ್ತವೆ, ಹಬ್ಬಗಳಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಿದರೆ ಅದಕ್ಕೆ ಮಹತ್ವದ ಬರುತ್ತದೆ ಎಂದು ಮುದ್ದೇಬಿಹಾಳ ಸರ್ಕಲ್ ಇನ್ಸಪೆಕ್ಟರ್‌ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಯಾವುದೇ ಹಬ್ಬಗಳಿರಲಿ ಒಳ್ಳೆಯ ನೀತಿ ಪಾಠ ಕಲಿಸುತ್ತವೆ, ಹಬ್ಬಗಳಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಿದರೆ ಅದಕ್ಕೆ ಮಹತ್ವದ ಬರುತ್ತದೆ ಎಂದು ಮುದ್ದೇಬಿಹಾಳ ಸರ್ಕಲ್ ಇನ್ಸಪೆಕ್ಟರ್‌ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು.ಈದ್‌ ಮಿಲಾದ್‌ ಹಾಗೂ ಗಣೇಶೋತ್ಸವ ಆಚರಣೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳಲ್ಲಿ ಪ್ರೀತಿ ಸಡಗರ ಬಾಂಧವ್ಯಗಳು ನಿರ್ಮಾಣವಾಗಬೇಕೆಂದರು. ಹಬ್ಬದ ಸಮಯದಲ್ಲಿ ಉದ್ದಟತನದ ಘಟನೆಗಳು ಜರುಗಿದರೆ ಪೊಲೀಸ್ ಇಲಾಖೆ ತನ್ನಕಾರ್ಯ ಕೈಕೊಳ್ಳಬೇಕಾಗುತ್ತದೆ. ಗಣೇಶೋತ್ಸವ ಮಂಡಳಿಯವರಿಗೆ ಭರಣಾ ಮಾಡಿಕೊಡಲು ಫಾರ್ಮ್‌ ನೀಡಲಾಗುತ್ತದೆ. ಅದನ್ನು ಭರ್ತಿ ಮಾಡಿ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಮಾಡಬೇಕು ಎಂದು ಸೂಚಿಸಿದರು. ಕಾನೂನು ಗೌರವಿಸುವವರನ್ನು ನಾವು ಗೌರವಿಸುತ್ತೇವೆ ಎಂದರು.ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿ, ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪನೆ ಸ್ಥಳ ನಮೂದಿಸಿ ಅನುಮತಿ ಪಡೆಯಬೇಕು. ಸ್ವಯಂ ಸೇವಕರನ್ನು ನೇಮಿಸಬೇಕು ೫ ದಿನಗಳು ಹಾಗೂ ೭ ದಿನಗಳು ಮತ್ತು ೯ ದಿನಗಳವರೆಗೆ ಪ್ರತಿಷ್ಠಾಪಿಸುವ ಕುರಿತು ತಿಳುವಳಿಕೆ ನೀಡಿ ಆ ದಿನಗಳ ತಕ್ಕಂತೆ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸೂಚಿಸಿದರು.ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ, ಪುರಸಭೆ ಸಿಬ್ಬಂದಿ ಹಾಗೂ ಹೆಸ್ಕಾಂ ಸಿಬ್ಬಂದಿ ಮಾತನಾಡಿದರು. ಬಿ.ಎಸ್.ಪಾಟೀಲ(ಯಾಳಗಿ) ಹಾಗೂ ರಜಾಕ ಮನಗೂಳಿ, ಜೈಭೀಮ ಮುತ್ತಗಿ ಮಾತನಾಡಿ, ತಾಳಿಕೋಟೆ ಪಟ್ಟಣ ಶಾಂತಿ ಕಾಪಾಡುವ ಪಟ್ಟಣ. ಎಲ್ಲರೂ ಒಗ್ಗಟ್ಟಿನಿಂದ ಈದ್ ಮೀಲಾದ್ ಹಾಗೂ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಸಿಕಂದರ ವಠಾರ, ಕಾಶಿನಾಥ ಮುರಾಳ, ಕುಮಾರಗೌಡ ಪಾಟೀಲ, ಅಬುಬಕರ ಲಾಹೋರಿ, ನಿಂಗಪ್ಪ ಕುಂಟೋಜಿ, ಕೆ.ಯು.ಬಿಳವಾರ, ಎಂ.ಎಫ್.ರಂಗನಪೇಠ, ಎಸ್.ಎಂ.ಸಾರವಾಡ, ಎಂ.ಜಿ.ಪಾಟೀಲ, ಮಂಜು ಶೆಟ್ಟಿ, ರಜಾಕ ಮನಗೂಳಿ, ಯಲ್ಲೇಶ ದಾಯಪುಲೆ, ಡಿ.ವ್ಹಿ.ಪಾಟೀಲ, ಸಂಬಾಜಿ ವಾಡಕರ, ಎಂ.ಎಸ್.ಸರಶೆಟ್ಟಿ, ಆನಂದ ಹಜೇರಿ ಇದ್ದರು. ಸಿದ್ದನಗೌಡ ದೊಡಮನಿ ನಿರೂಪಿಸಿ ವಂದಿಸಿದರು.________

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ