ಸೌಹಾರ್ದಯುತವಾಗಿ ಬದುಕು ರೂಪಿಸಿಕೊಳ್ಳಿ: ಅಬ್ದುಲ್ ಖಾದರ ಖಾಜಿ

KannadaprabhaNewsNetwork |  
Published : Jun 18, 2024, 12:49 AM IST
೧೭ವೈಎಲ್‌ಬಿ೧:ಯಲಬುರ್ಗಾದ ಜುಮ್ಮಾ ಮಸೀದಿಯಲ್ಲಿ ಬಕ್ರೀದ್  ಹಬ್ಬದ ನಿಮಿತ್ಯ ಮುಸ್ಲಿಂ ಭಾಂಧವರು ಸೋಮವಾರ ಭಕ್ತಿ ಶ್ರದ್ದೆಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಿದರು.

ಬೆಳಗ್ಗೆ ನಗರದ ಜುಮ್ಮಾ ಮಸೀದಿ ಹತ್ತಿರ ಜಮಾಯಿಸಿದ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಅಬ್ದುಲ್ ಖಾದರ ಖಾಜಿ ಮಾತನಾಡಿ, ಎಲ್ಲರೊಂದಿಗೂ ಪ್ರೀತಿ-ವಿಶ್ವಾಸ ಹಾಗೂ ಸೌಹಾರ್ದಯುತವಾಗಿ ಬದುಕು ರೂಪಿಸಿಕೊಳ್ಳುವ ಮೂಲಕ ಮುಸ್ಲಿಂ ಸಮಾಜ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಸಂದೇಶ ಸಾರಿದರು.

ತಾಲೂಕಿನ ಮಾರನಾಳ, ಮುಧೋಳ, ಕುದ್ರಿಕೋಟಗಿ, ಸಂಗನಾಳ, ತುಮ್ಮರಗುದ್ದಿ, ಗೆದಗೇರಿ, ಹೊಸಳ್ಳಿ, ಮಲ್ಕಸಮುದ್ರ, ಚಿಕ್ಕಮ್ಯಾಗೇರಿ, ಚಿಕ್ಕೋಪ, ದಮ್ಮೂರ, ಬೂನಕೋಪ್ಪ ಸೇರಿದಂತೆ ಅನೇಕ ಗ್ರಾಮದ ಮುಸ್ಲಿಮರು ಈ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಒಬ್ಬರಿಗೊಬ್ಬರು ಪರಸ್ಪರ ಶುಭ ಕೋರಿದರು.

ಸಮಾಜದ ಮುಖಂಡರಾದ ಮೆಹಬೂಬಸಾಬ ಮಕಾಂದಾರ, ಎಂ.ಎಫ್. ನದಾಫ್, ಅಖ್ತರಸಾಬ ಖಾಜಿ, ಗೌಸುಸಾಬ ಕನಕಗಿರಿ, ಮೆಹಮೂದಮೀಯಾ ಖಾಜಿ, ಬಾಬುಸಾಬ ಕೋತ್ವಾಲ್, ಜಿಲಾನಸಾಬ ಖಾಜಿ, ಮೆಹಬೂಬಸಾಬ ಕನಕಗಿರಿ, ನಜೀರಸಾಬ ಹಿರೇಮನಿ, ಖಾಜಾಮೈನುದ್ದೀನ್ ವಣಗೇರಿ, ನೂರಅಹ್ಮದಖಾನ್ ಗಡಾದ, ಶಹಾಬುದ್ದೀನ್ ಎಲಿಗಾರ, ಇಮಾಮ ಕೊತ್ವಾಲ್, ಎಂ.ಡಿ. ಮುಸ್ತಾಫ್, ಎಂ.ಡಿ. ಯೂಸೊಫ್, ಅಬ್ದುಲ್ ಮುನಾಫ್, ಚಿನ್ನುಭಾಷ ಅತ್ತಾರ, ಖಾಜಾವಲಿ ಜರಕುಂಟಿ, ಇಮಾಮ್ ಸಂಕನೂರ, ದಾದು ಎಲಿಗಾರ, ರಸೀದ್ ಖಾಜಿ, ರಹೀಮಾನ ರೇವಡಿವಾಲೆ, ಖಾಜಾವಲಿ ಗಡಾದ, ಅಬ್ದುಲ್ ರಹೀಮ್, ಅಬ್ದುಲ್ ಕವಲೂರ, ರಿಯಾಜ್ ಖಾಜಿ, ಷಾಷಾಸಾಬ ಮಕಾಂದಾರ, ಲಾಲಅಹ್ಮದ್ ರಾಯಚೂರ, ಖಾಜಾವಲಿ ಗುಳಗುಳಿ ಮತ್ತಿತರರು ಇದ್ದರು.

ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್:

ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಪ್ರತೀಕವಾಗಿದೆ ಎಂದು ಮುಸ್ಲಿಂ ಧರ್ಮಗುರು ಇಮಾಮಸಾಬ್ ಹೇಳಿದರು.ಕುಕನೂರು ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಜರುಗಿದ ಮುಸ್ಲಿಂ ಸಾಮೂಹಿಕ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ಬಕ್ರೀದ್ ಹಬ್ಬದ ತಿರುಳನ್ನು ಉಪದೇಶಿಸಿದರು. ತ್ಯಾಗ, ಬಲಿದಾನ, ಶಾಂತಿ ಹಾಗೂ ಸಾಮರಸ್ಯದ ಸಂಕೇತವಾದ ಬಕ್ರೀದ್ ಮಾನವೀಯತೆಯ ಕೈಗನ್ನಡಿಯಾಗಿದೆ. ಪರಸ್ಪರ ಪ್ರೀತಿ ಮತ್ತು ಶಾಂತಿ, ಸೌಹಾರ್ದತೆಯನ್ನು ನೀಡುವ ಹಬ್ಬವಾಗಿದೆ. ದ್ವೇಷ, ಅಸೂಯೆ ದೂರ ಮಾಡುವ ಪರಸ್ಪರರನ್ನು ಮಮತೆ ಕರುಣೆಯಿಂದ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಪರಿಶುದ್ಧತೆಯ ದಿನವಾಗಿದೆ ಎಂದರು.ಬಕ್ರೀದ್ ಹಬ್ಬದ ನಿಮಿತ್ತ ಈದ್ಗಾ ಮೈದಾನದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಕಳಕಪ್ಪ ಕಂಬಳಿ ಲಕ್ಷ ರೂ. ದೇಣಿಗೆ:

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಕುಕನೂರಿನ ಮುಸ್ಲಿಂ ಅಂಜುಮನ್ ಬಜಾರ್ ಮಸೀದಿಗೆ ₹ ಒಂದು ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.ಈ ವೇಳೆ ಪಿಎಸ್ಐ ಗುರುರಾಜ, ದಳಪತಿ ವೀರಯ್ಯ ತೋಂಟದಾರ್ಯಮಠ, ಮುಖಂಡರಾದ ರಷೀದ ಅಹ್ಮದ್ ಹಣಜಗಿರಿ, ಶಫೀಸಾಬ ಗುಡಿಯಿಂದಲ್, ಚಾಂದಪಾಷ ಮುಲ್ಲಾ, ಮೆಹಬೂಬ್ ಸಾಬ್ ಗುಡಿಯಿಂದಲ್, ಅಲ್ಲಾವುದ್ದೀನ ಯಮ್ಮಿ, ಅಬ್ದುಲ್ ಖಾದರ್ ದೇವದುರ್ಗ, ಮಹ್ಮದ್ ರಫಿ ಹಿರೇಹಾಳ ಇತರರಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ