ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಟಿಸಿಕೊಳ್ಳಿ: ನಿಖಿಲ್

KannadaprabhaNewsNetwork |  
Published : Aug 02, 2026, 01:30 AM IST
ಪೋಟೋ: 01ಎಸ್‌ಎಂಜಿಕೆಪಿ10 | Kannada Prabha

ಸಾರಾಂಶ

ಶಿವಮೊಗ್ಗ: ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂದಿ ನಿರ್ಲಕ್ಷ್ಯ ತೋರದೆ ತಮ್ಮ ಮತ್ತು ತಮ್ಮ ಅವಲಂಬಿತ ಕುಟುಂಬದ ಕ್ಷೇಮಕ್ಕಾಗಿ ತಾವು ಪಡೆಯುವ ವೇತನದಲ್ಲಿ ಸ್ಯಾಲರಿ ಪ್ಯಾಕೇಜ್ ಸ್ವೀಂ ಮತ್ತು ಜೀವವಿಮೆಗಾಗಿ ಸಣ್ಣ ಮೊತ್ತವನ್ನು ಕಟಾವಣೆ ಮಾಡಿಸಿಕೊಂಡು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಟಿಸಿಕೊಳ್ಳುವಂತೆ ಎಸ್ಪಿ ಬಿ. ನಿಖಿಲ್ ಹೇಳಿದರು.

ಶಿವಮೊಗ್ಗ: ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂದಿ ನಿರ್ಲಕ್ಷ್ಯ ತೋರದೆ ತಮ್ಮ ಮತ್ತು ತಮ್ಮ ಅವಲಂಬಿತ ಕುಟುಂಬದ ಕ್ಷೇಮಕ್ಕಾಗಿ ತಾವು ಪಡೆಯುವ ವೇತನದಲ್ಲಿ ಸ್ಯಾಲರಿ ಪ್ಯಾಕೇಜ್ ಸ್ವೀಂ ಮತ್ತು ಜೀವವಿಮೆಗಾಗಿ ಸಣ್ಣ ಮೊತ್ತವನ್ನು ಕಟಾವಣೆ ಮಾಡಿಸಿಕೊಂಡು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಟಿಸಿಕೊಳ್ಳುವಂತೆ ಎಸ್ಪಿ ಬಿ. ನಿಖಿಲ್ ಹೇಳಿದರು.

ಕಳೆದ ಎರಡು ತಿಂಗಳ ಹಿಂದೆ ಶಿರಾಳಕೊಪ್ಪ ಸಮೀಪದಲ್ಲಿ ಅಪಘಾತಕ್ಕೀಡಾಗಿ ಮೃತರಾಗಿದ್ದ ಆನವಟ್ಟಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಬಸವರಾಜ್ ಅವರ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡದಿಂದ ನೀಡಿದ್ದ ಸ್ಯಾಲರಿ ಪ್ಯಾಕೇಜ್‌ನ ಸ್ಕೀಂ ಸೌಲಭ್ಯ ಮತ್ತು ವಿಮಾ ಮೊತ್ತ ಸೇರಿ ಒಟ್ಟು 1.08 ಕೋಟಿ ರು. ಮೊತ್ತದ ಚೆಕ್‌ನ್ನು ನಗರದ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ವಿತರಿಸಿ ಅವರು ಮಾತನಾಡಿದರು.

ಯಾವುದೇ ನೌಕರರ ಕುಟುಂಬದಲ್ಲೂ ಇಂತಹ ಆಕಸ್ಮಿಕ ಅಹಿತಕರ ಘಟನೆಗಳು ಘಟಿಸಬಾರದು. ಆದರೆ, ಆಕಸ್ಮಿಕ ಅಪಘಾತಗಳಿಂದ ನೌಕರರ ಕುಟುಂಬಕ್ಕೆ ಆಗುವ ನಷ್ಟ ಅಂದಾಜು ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮನೆಯ ಕುಟುಂಬದ ಪೋಷಕರು, ಪತ್ನಿ ಪುತ್ರರ ಬದುಕಿಗೆ ಆಸರೆ ಯಾರು? ಎನ್ನುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ನೌಕರರು ಭವಿಷ್ಯದ ಬದುಕನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರಿಗಾಗಿಯೇ ಕಲ್ಪಿಸಿಕೊಟ್ಟಿರುವ ಸ್ಯಾಲರಿ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು. ಆಗ ನೊಂದ ಕುಟುಂಬಕ್ಕೆ ಅಲ್ಪಮಟ್ಟಿನ ಸಮಾಧಾನ ದೊರೆಯಲಿದೆ. ಮಾತ್ರವಲ್ಲ ಮುಂದಿನ ಬದುಕಿಗೆ ಸಂಜೀವಿನಿಯಂತೆ ಆಸರೆ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ ಬ್ಯಾಂಕ್ ಆಫ್ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್ ಎನ್. ಸಹಕಾರ್, ಪ್ರಧಾನ ವ್ಯವಸ್ಥಾಪಕ ದೀರಜ್ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್ ಜಿ.ಕೆ., ಶಾಖಾ ವ್ಯವಸ್ಥಾಪಕ ಬಷೀರ್ ಹುಡೇದ್, ಕುಮಾರಿ ಯಶಸ್ವಿನಿ ಮುಂತಾದವರು ಇದ್ದರು.

----------

ಕೋಟ್‌....

ಈ ಯೋಜನೆಯಡಿ ನೌಕರರು ಶೂನ್ಯ ಬ್ಯಾಲೆನ್ಸ್ ಖಾತೆ, ಅಪಘಾತ ವಿಮಾ ಸೌಲಭ್ಯ ಮತ್ತು ವಿಶೇಷ ಬ್ಯಾಂಕಿಂಗ್ ಸೌಲಭ್ಯಗಳ ಪ್ರಯೋಜನ ಪಡೆಯಬಹುದಾಗಿದೆ. ಕಡಿಮೆ ಪ್ರೀಮಿಯಂನಲ್ಲಿ ವೈಯಕ್ತಿಕ ಅಪಘಾತ ವಿಮೆ ಮತ್ತು ಜೀವವಿಮಾ ಸೌಲಭ್ಯಗಳು, ಸಾಲಗಳ ಮೇಲೆ ರಿಯಾಯಿತಿ ದರ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ನೌಕರರ ಮತ್ತು ಅವರ ಅವಲಂಬಿತ ಕುಟುಂಬದವರ ಹಿತಾಸಕ್ತಿ ಕಾಪಾಡಲು ಹಾಗೂ ಬ್ಯಾಂಕ್‌ಗಳು ನೀಡುವ ವಿಮಾ ಭದ್ರತೆ ಪಡೆಯಲು ಮಾರ್ಚ್‌ನಲ್ಲಿ ಆರ್ಥಿಕ ಇಲಾಖೆ ಈ ಆದೇಶ ಹೊರಡಿಸಿದೆ. ಅದಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತಸುಖ ಕಾಯುವ ನಿಟ್ಟಿನಲ್ಲಿ ಅವಿರತವಾಗಿ ಪ್ರಯತ್ನ ಮಾಡಿತ್ತು. ಈ ಯೋಜನೆಯಿಂದಾಗಿ ಮೃತ ಕುಟುಂಬಕ್ಕೆ ಸಹಾಯಕಾರಿಯಾಗಿದೆ. ಸಂಘದ ಸಂಘಟಿತ ಪ್ರಯತ್ನಕ್ಕೆ ಜಯ ದೊರೆತಿದೆ.

-ಸಿ.ಎಸ್. ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ.--------------------

ಪೋಟೋ: 01ಎಸ್‌ಎಂಜಿಕೆಪಿ10

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಬ್ಲ್ಯೂಸಿ ಆದೇಶ ಖಂಡಿಸಿ ಕರವೇ ಪ್ರತಿಭಟನೆ
ಕಾಡಾನೆಗಳಿಗೆ ಇನ್ನೆಷ್ಟು ಜನರ ಬಲಿ ಕೊಡ್ತೀರಿ