ಕನ್ನಡಪ್ರಭ ವಾರ್ತೆ ಐಗಳಿ
ಅಪ್ಪಯ್ಯ ಸ್ವಾಮಿ ಜಾತ್ರೆಯಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಹಾಸ್ಯ, ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಪ್ಪಯ್ಯ ಸ್ವಾಮಿಗಳು ಪವಾಡ ಪುರುಷರು. ಭೂಮಿಯನ್ನು ಸ್ವರ್ಗ ಮಾಡಿದ್ದಾರೆ. ಅಥಣಿಯ ಮುರಘೇಂದ್ರ ಶಿವಯೋಗಿಗಳು ಹಾಗೂ ಬಿಳ್ಳೂರದ ಅಜ್ಜನವರು ಸಮಕಾಲಿನವರು. ಸಮುದ್ರದ ನೀರು ಆವಿಯಾಗಿ ಮೋಡವಾಗಿ ಶುದ್ದ ನೀರು ಮಳೆ ರೂಪದಲ್ಲಿ ಕೊಟ್ಟ ದೇವರನ್ನು ನಿತ್ಯ ಆರಾಧಿಸಬೇಕು. ಸೈನಿಕ, ರೈತ ಹಾಗೂ ಗುರುಗಳನ್ನು ನಿತ್ಯ ಗೌರವಿಸಬೇಕು ಎಂದರು.
ಧುರೀಣ ಎಸ್.ಕೆ.ಬುಟಾಳೆ ಮಾತನಾಡಿದರು. ತೆಲಸಂಗ ಹಿರೇಮಠದ ವಿರೇಶ ದೇವರು ಸಾನಿದ್ಯ ವಹಿಸಿದ್ದರು. ಸಿ.ಎಸ್.ನೇಮಗೌಡ, ತುಬಚಿಯ ಸುರೇಶಗೌಡ ಪಾಟೀಲ, ಗಜಾನನ ಮಂಗಸೂಳಿ, ಎ.ಎಸ್.ತೆಲಸಂಗ ಪ್ರಾಸ್ತಾವಿಕ ಮಾತನಾಡಿದರು. ರಿಯಾಜ ಡೊಂಗರಗಾಂವ, ಸಿವಾನಂದ ಸಿಂಧೂರ, ಪಿಡಿಒ ಭೀರಪ್ಪ ಕಡಗಂಚಿ, ರಾಜೇಂದ್ರ ಪಾಠಕ, ಪಿಎಸ್ಐ ಚಂದ್ರಶೇಖರ ಸಾಗನೂರ, ಯಲ್ಲಪ್ಪ ಮಿರ್ಜಿ, ಅಪ್ಪಾಸಾಬ ಪಾಟೀಲ, ಅಶೋಕ ಮುದಗೌಡರ, ಡಿ.ಎಲ್.ಕದಮ, ಜಗದೀಶ ತೆಲಸಂಗ, ಚಂದ್ರಕಾಂತ ಪಾಟೀಲ ಮುಂತಾದವರು ಇದ್ದರು. ಬಸವರಾಜ ತೆಲಸಂಗ ಸ್ವಾಗತಿಸಿದರು, ಸದಾನಂದ ಮಾಡಿಗ್ಯಾಳ ನಿರೂಪಿಸಿದರು, ಮಹೇಶ ಮಾಳಿ ವಂದಿಸಿದರು.