ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ದೆಹಲಿಯ ಇಎಸ್‌ಐಸಿ ಕೇಂದ್ರ ಕಚೇರಿ ಅಧಿಕಾರಿಗಳ ಭೇಟಿ; ಆಸ್ಪತ್ರೆ ಸೌಲಭ್ಯ ಸುಧಾರಣೆಗೆ ಅಗತ್ಯ ಕ್ರಮದ ಭರವಸೆಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನ ಹಾಗೂ ಮುತುವರ್ಜಿಯ ಫಲವಾಗಿ ಮಂಗಳೂರಿನ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಗುರುವಾರ ದೆಹಲಿಯಿಂದ ಇಎಸ್‌ಐಸಿ ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳ ತಂಡವು ಭೇಟಿ ನೀಡಿ ಅಲ್ಲಿ ಲಭ್ಯವಿರುವ ಸೌಲಭ್ಯ ಹಾಗೂ ಸಮಸ್ಯಗಳ ಬಗ್ಗೆ ಗಮನಾರ್ಹವಾದ ಪರಿಶೀಲನೆಯನ್ನು ನಡೆಸಿದೆ.
ಕ್ಯಾ. ಚೌಟ ಅವರ ನಿರಂತರ ಪಾಲೋಅಪ್ ಹಾಗೂ ಪ್ರಾಮಾಣಿಕ ಪ್ರಯತ್ನದ ಪರಿಣಾಮ, ಗುರುವಾರ ಇಎಸ್‌ಐಸಿ ಪ್ರಧಾನ ಕಚೇರಿಯ ಉಪ ವೈದ್ಯಕೀಯ ಆಯುಕ್ತೆ ಮೋನಾ ವರ್ಮ, ಇಎಸ್‌ಐಸಿ ದಕ್ಷಿಣ ವಲಯದ (ಐಸಿಟಿ ಅಡಿ) ವಿಮಾ ಆಯುಕ್ತ ಟಿ. ರೇಣುಕಾಪ್ರಸಾದ್ ಅವರನ್ನೊಳಗೊಂಡ ತಂಡವು ಇಎಸ್ಐ ಆಸ್ಪತ್ರೆಗೆ ಭೇಟಿ ಕೊಟ್ಟು ಇಲ್ಲಿನ ಸಮಸ್ಯೆ - ಸವಾಲುಗಳ ಬಗ್ಗೆ ಪರಿಶೀಲಿಸಿ, ಈ ಆಸ್ಪತ್ರೆ ಸುಧಾರಣೆಗೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಹಾಗೂ ಸಿಬ್ಬಂದಿಗಳ ಜತೆ ಸುದೀರ್ಘ ಸಮಲೋಚನೆ ನಡೆಸಿದ್ದಾರೆ.
ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ, ವಾರ್ಡ್, ಶಸ್ತ್ರಚಿಕಿತ್ಸೆ ಕೊಠಡಿ, ಸಿಬ್ಬಂದಿಗಳ ಕ್ವಾಟರ್ಸ್ ಸೇರಿ ಆಸ್ಪತ್ರೆಯ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಬ್ಬಂದಿ ಕೊರತೆ ಎದ್ದು ಕಂಡಿದ್ದು, ಲಭ್ಯವಿರುವ ವ್ಯವಸ್ಥೆ ಹಾಗೂ ಸಿಬ್ಬಂದಿ ಬಳಸಿಕೊಂಡು ಕಾರ್ಮಿಕರಿಗೆ ಯಾವ ರೀತಿ ಸಮರ್ಪಕ ಚಿಕಿತ್ಸಾ ಸೌಲಭ್ಯ ನೀಡಬಹುದು ಎಂದು ಕುರಿತು ಇಲ್ಲಿನ ಸಿಬ್ಬಂದಿ ವರ್ಗಕ್ಕೆ ದೆಹಲಿ ತಂಡ ಸಲಹೆ ನೀಡಿದೆ.........
ತತಕ್ಷಣವೇ ಇಎಸ್‌ಐ ಸೊಸೈಟಿ ರಚಿಸಿ, ಇಲ್ಲವೇ ಹಸ್ತಾಂತರಿಸಲು ಸಂಸದ ಒತ್ತಾಯಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ, ತಮ್ಮ ಮನವಿಗೆ ಸ್ಪಂದಿಸಿ ದೆಹಲಿಯ ಇಎಸ್‌ಐಸಿ ಅಧಿಕಾರಿಗಳ ತಂಡವು ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿರುವುದು ಬಹಳ ಖುಷಿ ತಂದಿದೆ. ಈ ತಂಡದ ಭೇಟಿಯ ಪರಿಣಾಮ, ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ಗುಣಮಟ್ಟ ಹಾಗೂ ಮೂಲಸೌಕರ್ಯ ಹೆಚ್ಚಳವಾಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ..