ಸಮುದಾಯ ಮತ್ತು ಪೋಷಕರಿಗೆ ಮತದಾನ ಜಾಗೃತಿ ಮೂಡಿಸಿ

KannadaprabhaNewsNetwork |  
Published : Nov 22, 2024, 01:19 AM IST
ನಗರದ  ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಚುನಾವಣಾ ಆಯೋಗ ಜಿಲ್ಲಾ ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮತದಾನ ಜಾಗೃತಿ ಸ್ಪರ್ಧೆ ಉದ್ಘಾಟನಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್  ಮಾತನಾಡಿದರು  | Kannada Prabha

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುವ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ಹೇಳಿದರು. ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನದಂತೆ ಆಡಳಿತವನ್ನು ರೂಪಿಸಲು ಚುನಾವಣೆಯಾಗುತ್ತದೆ, ನಮ್ಮ ಪ್ರತಿನಿಧಿಗಳ ಆಯ್ಕೆಯ ಸಮಯದಲ್ಲಿ ಈ ಹಕ್ಕಿನ ಉದ್ದೇಶವೇನು ಇದರ ಮಹತ್ವವೇನು ಎಂಬುದನ್ನು ನೀವು ತಿಳಿದಿದ್ದರೆ ನಿಮ್ಮ ಪೋಷಕರಿಗೂ ಮತ್ತು ನೆರೆಹೊರೆಯ ಮತದಾರರಲ್ಲಿಯೂ ಜಾಗೃತಿ ಮೂಡಿಸಬಹುದು ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುವ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ಹೇಳಿದರು. ಅವರು ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಚುನಾವಣಾ ಆಯೋಗ ಜಿಲ್ಲಾ ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮತದಾನ ಜಾಗೃತಿ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀವು ಮತದಾನ ಮಾಡಲು ಹಕ್ಕನ್ನು ಪಡೆಯಲು ಇನ್ನೂ ನಾಲ್ಕು ಐದು ವರ್ಷಗಳು ಬೇಕು ಆದರೂ ನಮಗೆ ಏಕೆ ಈ ಸ್ಪರ್ಧೆ ಮತ್ತು ಮಾಹಿತಿ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನದಂತೆ ಆಡಳಿತವನ್ನು ರೂಪಿಸಲು ಚುನಾವಣೆಯಾಗುತ್ತದೆ, ನಮ್ಮ ಪ್ರತಿನಿಧಿಗಳ ಆಯ್ಕೆಯ ಸಮಯದಲ್ಲಿ ಮತದಾನವನ್ನು ಚಲಾಯಿಸುವಾಗ ಯಾರಿಗೆ ಚಲಾಯಿಸಬೇಕು, ಈ ಹಕ್ಕಿನ ಉದ್ದೇಶವೇನು ಇದರ ಮಹತ್ವವೇನು ಎಂಬುದನ್ನು ನೀವು ತಿಳಿದಿದ್ದರೆ ನಿಮ್ಮ ಪೋಷಕರಿಗೂ ಮತ್ತು ನೆರೆಹೊರೆಯ ಮತದಾರರಲ್ಲಿಯೂ ಜಾಗೃತಿ ಮೂಡಿಸಬಹುದು, ಆ ಕಾರ್ಯವನ್ನು ನೀವು ಮಾಡಬೇಕು, ಇಲ್ಲಿ ನೀವು ಗ್ರಹಿಸುವ ಮಾಹಿತಿಗಳು ನಿಮ್ಮ ಪಠ್ಯದ ಸಮಾಜ ವಿಷಯಕ್ಕೂ ಸಹಕಾರಿಯಾಗುತ್ತದೆ ಎಂದರು.

ಶಿಕ್ಷಣ ಸಂಯೋಜಕ ಮಲ್ಲೇಶ್ ಸ್ಪರ್ಧೆಯ ಉದ್ದೇಶ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಶಿವಾನಂದ್ ಶಿಕ್ಷಣ ಸಂಯೋಜಕರುಗಳಾದ ಚಿದಾನಂದ ಹರೀಶ್, ಹಾಗೂ ಶಾಲಾ ಶಿಕ್ಷಕರುಗಳು ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌