ಬಸವರಾಜ ಹಿರೇಮಠ
ಇಲ್ಲಿಯ ಇಂದಿರಾಗಾಜಿನ ಮನೆ ಆವರಣದಲ್ಲಿ ಬುಧವಾರ ಅದ್ಭುತ ಚಿತ್ರಕಲಾ ಜಗತ್ತೇ ಸೃಷ್ಟಿಯಾಗಿತ್ತು. ನೂರಾರು ಶಾಲೆಗಳ ಸಾವಿರಾರು ಮಕ್ಕಳು ತರಹೇವಾರಿ ಬಣ್ಣಗಳ ಧಿರಿಸು ಧರಿಸಿ ತಮ್ಮ ಕಲ್ಪನೆಯ ಚಿತ್ರಗಳನ್ನು ಕ್ಯಾನ್ವಾಸ್ ಮೇಲೆ ಒಡಮೂಡಿಸುವ ಮೂಲಕ ಸಂಭ್ರಮಿಸಿದರು. ಮಕ್ಕಳು ಬಣ್ಣದ ಲೋಕವೊಂದರಲ್ಲಿ ಮಿಂದು ತಮ್ಮ ಪ್ರತಿಭೆ, ಬುದ್ಧಿಮತ್ತೆ, ಪ್ರಾವಿಣ್ಯತೆ ಪ್ರದರ್ಶಿಸಿ ಮೆರೆದರು
ಮಕ್ಕಳಲ್ಲಿನ ಸೃಜನಶೀಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಮಕ್ಕಳ ದಿನಾಚರಣೆ ನಿಮಿತ್ತ ಪ್ರತಿ ವರ್ಷ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸುತ್ತಿದೆ. ಅಂತೆಯೇ, ಈ ಬಾರಿ 5ನೇ ವರ್ಷದ ಚಿತ್ರಕಲಾ ಸ್ಪರ್ಧೆಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ 2800ಕ್ಕೂ ಹೆಚ್ಚು ಪ್ರೌಢಶಾಲೆಯ ವಿದ್ಯಾರ್ಥಿಗಳು ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿ ಅದಕ್ಕೆ ಬಣ್ಣ ತುಂಬಿದರು.ಸ್ಪರ್ಧಾ ವಿಷಯಗಳು
ಮುಖದಲ್ಲಿ ನಗುವಿನ ಭಾವ
ಸಾಮರ್ಥ್ಯ ತೋರ್ಪಡಿಸಿ
ಇನ್ನು, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎಚ್., ವಿ.ಎಸ್.ವಿ. ಪ್ರಸಾದ, ಮಕ್ಕಳ ಕಲಿಕೆಗೆ ಪೂರಕವಾಗುವ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡಪ್ರಭ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕನ್ನಡಪ್ರಭ ಸುವರ್ಣ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ರವಿ ಹೆಗಡೆ, ಇಂದಿರಾ ಗಾಜಿನ ಮನೆ ಮಕ್ಕಳಿಗೆ ಮತ್ತಷ್ಟು ಸ್ಪೂರ್ತಿಯ ನೆಲೆಯಾಗಲಿ. ಐದು ವರ್ಷಗಳಿಂದ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು, ತಂಡದ ಸ್ಫೂರ್ತಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಚಿತ್ರಕಲೆ ಸ್ಪರ್ಧೆಗೆ ಅಂಕಿತಾ ಮೆರಗು
ನಟಿ ಅಂಕಿತಾ ಹಾಡು, ನೃತ್ಯಕ್ಕೆ ಫಿದಾ ಆದ ಮಕ್ಕಳ ಕರತಾಡನ ಮುಗಿಲು ಮುಟ್ಟಿತು. ಪುನೀತ ರಾಜಕುಮಾರ ಅವರ ತನ್ಮಯನಾದೆನು ಹಾಡಿಗಂತೂ ಮಕ್ಕಳು ಚಪ್ಪಾಳೆ, ಶಿಳ್ಳೆಯ ಮಳೆಗೈದರು. ಶೇಖ್ ಇಟ್ ಪುಷ್ಪವತಿ ಹಾಡಿಗೆ ಅಂಕಿತಾ ಕುಣಿದಾಗ ಮಕ್ಕಳು ಪುಟಿದೆದ್ದು ಕುಣಿದರು. ಇದಕ್ಕೂ ಮುಂಚೆ ಮಕ್ಕಳಿಗೆ ಚಿತ್ರಕಲೆಯ ಪಾಠ ಮಾಡಿದರು. ಚಿತ್ರಕಲೆ ಎಲ್ಲರಿಗೂ ಒಲಿಯೋದಿಲ್ಲ. ಒಲಿದವರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇತ್ತೀಚೆಗೆ ಚಿತ್ರಕಲೆಯಲ್ಲಿ ಸಾಕಷ್ಟು ವಿಧಗಳು ಸೃಷ್ಟಿಯಾಗಿದ್ದು ತರಹೇವಾರಿ ಬಣ್ಣಗಳಲ್ಲಿ ಅದ್ಭುತವಾಗಿ ಚಿತ್ರಗಳನ್ನು ಬಿಡಿಸಬಹುದು. ಚಿತ್ರಕಲೆಯಿಂದಾಗಿ ಮಕ್ಕಳಿಗೆ ವಿಭಿನ್ನ ಭಾವನೆಗಳು ಹುಟ್ಟುವುದಲ್ಲದೇ ಜ್ಞಾನದ ಪರಿದಿ ಸಹ ಹೆಚ್ಚುತ್ತದೆ. ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಉತ್ತಮವಾಗಿ ಚಿತ್ರ ಬಿಡಿಸಿದರೆ ಬಹುಮಾನದ ಪ್ರೋತ್ಸಾಹವೂ ದೊರೆಯುತ್ತದೆ. ಮಕ್ಕಳು ಓದಿನ ಜೊತೆಗೆ ವಾರಕ್ಕೊಂದು ಚಿತ್ರ ಬಿಡಿಸುವ ರೂಢಿ ಮಾಡಿಕೊಳ್ಳಬೇಕು ಎಂದು ನಟಿ ಅಂಕಿತಾ ನುಡಿದರು.
ಹೈಸ್ಕೂಲ್‌ನ 8, 9 ಮತ್ತು 10ನೇ ತರಗತಿಯಲ್ಲಿ ತಲಾ ನಾಲ್ಕು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮೊದಲ ಬಹುಮಾನವಾಗಿ ತಲಾ ₹10 ಸಾವಿರ ಮೌಲ್ಯದ ಮೂರು ಸೈಕಲ್, ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಯಿತು. ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನವಾಗಿ ನಗದು, ಗಿಫ್ಟ್ ಹ್ಯಾಂಪರ್, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಲಾಯಿತು.8ನೇ ತರಗತಿ ಪೈಕಿ ಹುಬ್ಬಳ್ಳಿಯ ಕಾನ್ವೆಂಟ್ ಶಾಲೆಯ ಸುಖದಾ ಮುರಗೋಡ ಪ್ರಥಮ, ಹುಬ್ಬಳ್ಳಿಯ ಆದರ್ಶನಗರದ ರೋಟರಿ ಪಬ್ಲಿಕ್ ಶಾಲೆಯ ಸಿಂಚನಾ ಆರ್. ಅರ್ಕಸಾಲಿ ದ್ವಿತೀಯ, ವಿದ್ಯಾನಿಕೇತನ ಆರ್.ಎನ್.ಎಸ್. ಶಾಲೆಯ ವಿಶಾಖಾ ಚಿಕ್ಕತುಂಬಳ ತೃತೀಯ ಹಾಗೂ ವಿ.ಎಸ್. ಪಿಳ್ಳೆ ಶಾಲೆಯ ಸಾನ್ವಿ ಯರಗೊಪ್ಪ ಸಮಾಧಾನಕರ ಬಹುಮಾನ ಸ್ವೀಕರಿಸಿದರು.
9ನೇ ತರಗತಿ ಪೈಕಿ ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಧಾರವಾಡದ ರೀಚಾ ಪಾಂಡೆ ಪ್ರಥಮ, ಹುಬ್ಬಳ್ಳಿಯ ಜೆಎಸ್ಸೆಸ್ ಶಾಲೆಯ ಎನ್.ಡಿ. ಹೊಸಕೇರಿ ದ್ವಿತೀಯ ಜೆ.ಕೆ. ಶಾಲೆಯ ಅರ್ಚನಾ ಯಲ್ಲಟ್ಟಿ ತೃತೀಯ ಹಾಗೂ ಸುಳ್ಳ ಗ್ರಾಮದ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ಭಾಗ್ಯ ಮಣಕವಾಡ ಸಮಾಧಾನಕರ ಬಹುಮಾನ ಪಡೆದರು.ಇನ್ನು, 10ನೇ ತರಗತಿ ಪೈಕಿ ಹುಬ್ಬಳ್ಳಿಯ ನವನಗರ ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯ ಗಣರಾಜ ಕರಿಗಾರ ಪ್ರಥಮ, ಜೆ.ಕೆ. ಇಂಗ್ಲೀಷ್ ಮಾಧ್ಯಮ ಶಾಲೆಯ ಪೂಜಾ ಕಾಂಬಳೆ ದ್ವಿತೀಯ, ರೇಶ್ಮಿ ಆಲ್ ಮಿಲಾದ್ ಉರ್ದು, ಇಂಗ್ಲೀಷ ಮಾಧ್ಯಮ ಶಾಲೆಯ ಐವನ್ ನಾಯ್ಕರ್ ತೃತೀಯ ಹಾಗೂ ವಿಶ್ವಭಾರತಿ ಬಾಲಕಿಯರ ಶಾಲೆಯ ಅನನ್ಯ ಕಂಠಿಗಾವಿ ಸಮಾಧಾನಕರ ಬಹುಮಾನ ಪಡೆದರು.