ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ದೀವಿಗೆ ಎಜುಕೇಷನ್ ಫೌಂಡೇಷನ್ ಹಾಗೂ ವಿ.ಪಿ. ಅಕಾಡೆಮಿ ವತಿಯಿಂದ ಪಿಯುಸಿ ನಂತರ ಮುಂದೇನು? ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷಾ ತರಬೇತಿಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ವಿ.ಪಿ. ಅಕಾಡೆಮಿ ಈಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಎಸ್ಸಿ ಅಗ್ರಿಕಲ್ಚರ್ ಓದುವ ಮಕ್ಕಳಿಗೆ ಈ ಕಾರ್ಯಾಗಾರವು ಉಪಯುಕ್ತವಾಗಿದೆ. ದೇಶಕ್ಕೆ ಅನ್ನ ಕೊಡುವ ರೈತನ ಬದುಕು ಸತ್ವಪೂರ್ಣವಾದುದು. ಮಕ್ಕಳು ಕೃತಕ ಜೀವನಕ್ಕೆ ಮಾರುಹೋಗದೆ, ಗುಣಮಟ್ಟದ ಕೃಷಿಪದ್ಧತಿಯ ಶಿಕ್ಷಣ ಪಡೆದು ಸಾರ್ಥಕ ಬದುಕನ್ನು ನಡೆಸಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಇ.ಮಂಜುನಾಥ ಪಿಯುಸಿ ನಂತರ ಮುಂದೇನು? ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷಾ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು. ದೀವಿಗೆ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ವಿ.ನಟರಾಜ್, ವಿ.ಪಿ.ಅಕಾಡೆಮಿ ಪ್ರಾಚಾರ್ಯ ಹೆಚ್.ದೇವರಾಜ್, ನಿರ್ದೇಶಕ ಎಸ್.ಕೆ.ದೀಪಕ್ ಹಾಗೂ ವೈ.ಜಿ.ರಾಜು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಚನಾ ಸ್ವಾಗತಿಸಿದರು. ಸಂಜನಾ ವಂದಿಸಿದರು. ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.