ಪುತ್ತೂರು ನಗರದ ಕಲ್ಲಾರೆ ವರ್ಣಕುಟೀರದ ಪ್ರವೀಣ್ ಮೊಲ್ಡ್ ಕ್ಲೇ ಮೂಲಕ ೧೦೦೮ ಗಣಪತಿಯ ವಿವಿಧ ಭಂಗಿಯ ಸಣ್ಣ ಸಣ್ಣ ಪ್ರತಿಮೆ ರಚನೆ ಮಾಡಿದ್ದಲ್ಲದೆ ೧೦೮ ಶ್ಲೋಕಗಳನ್ನು ಅದರಲ್ಲಿ ಮೂಡಿಸುವ ಮೂಲಕ ಏಷಿಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ.
ಪುತ್ತೂರು , ಪುತ್ತೂರು ನಗರದ ಕಲ್ಲಾರೆ ವರ್ಣಕುಟೀರದ ಪ್ರವೀಣ್ ಮೊಲ್ಡ್ ಕ್ಲೇ ಮೂಲಕ ೧೦೦೮ ಗಣಪತಿಯ ವಿವಿಧ ಭಂಗಿಯ ಸಣ್ಣ ಸಣ್ಣ ಪ್ರತಿಮೆ ರಚನೆ ಮಾಡಿದ್ದಲ್ಲದೆ ೧೦೮ ಶ್ಲೋಕಗಳನ್ನು ಅದರಲ್ಲಿ ಮೂಡಿಸುವ ಮೂಲಕ ಏಷಿಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ.ಕಲಾ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರವೀಣ್ ಅವರು ಈ ಹಿಂದೆ ಮಾಡಿದ ಒಂದು ಸಾಸಿವೆ ಕಾಳಿನಲ್ಲಿ ರೇಖಾ ಚಿತ್ರ, ಬಿದಿರಿನಲ್ಲಿ ಮಾಡಿದ ಗಣಪ, ಪ್ರೇಮ್ ಒಯಸೀಸ್ ಬ್ರಿಗ್ಸ್, ಡೀಪ್ ಶೀಟ್ ಒಂದು ಪೆನ್ಸಿಲ್ ಮೊನೆಯ ಗಣಪನ ಕೆತ್ತನೆ ಶಿಲ್ಪ, ಮಣ್ಣಿನಿಂದ ಮಾಡಿದ ಪುಟ್ಟ ಗಣಪ, ಪೆನ್ನಿನ ರೀಫಿಲ್‌ನಲ್ಲಿ, ಐಸ್‌ಕ್ಯಾಂಡಿ ಕಡ್ಡಿಯಲ್ಲಿ, ಬೆಂಕಿ ಕಡ್ಡಿಯಲ್ಲಿ ಮಾಡಿದ ಗಣಪ, ಎಲೆಕ್ಟ್ರಾನಿಕ್ ಬಿಡಿಭಾಗಗಳಲ್ಲಿ ಸಣ್ಣ ಸಣ್ಣ ಗಣಪ, ಮೋಲ್ಡಿಟ್ ಎಂಬ ವಸ್ತುವಿನಿಂದ ಮೂಡಿದ ಗಣಪತಿ ಮೂರ್ತಿಗಳು, ನೀರಿನ ಪೈಪ್ ಮತ್ತು ವಯರಿಂಗ್ ಪೈಪ್‌ಗಳ ತುಂಡುಗಳನ್ನು ಬಳಸಿಕೊಂಡು ಪಂಚ ಭೂತಗಳನ್ನು ಗಣಪತಿ ಮೂರ್ತಿ, ನೀರಿನಲ್ಲಿ ತೇಲುವ ಎಎಸಿ ಬ್ಲಾಕ್‌ಗಳಿಂದ ಮಾಡಿದ ಗಣಪತಿ, ಬಾಟಲ್ ಕಾರ್ಕ್ ನಿಂದ ಮಾಡಿದ ಗಣಪತಿ ಮತ್ತು ಕಳೆದ ವರ್ಷ ಫ್ರಿಜ್ ಗಳಿಗೆ ಬಳಸುವ ಪಿಯು ಫೋಮ್ ಮೂಲಕ ಮಾಡಿದ ವಿಗ್ರಹಗಳು ಪ್ರಸಿದ್ದಿ ಪಡೆದಿತ್ತು.
ಇದೀಗ ಮೊಲ್ಡ್ ಕ್ಲೇ ಮೂಲಕ ೧೦೦೮ ಗಣಪತಿಯ ವಿವಿಧ ಭಂಗಿಯ ಸಣ್ಣ ಸಣ್ಣ ಪ್ರತಿಮೆ ರಚನೆ ಮಾಡಿದ್ದಲ್ಲದೆ ೧೦೮ ಶ್ಲೋಕಗಳನ್ನು ಅದರಲ್ಲಿ ಮೂಡಿಸುವ ಮೂಲಕ ಏಷಿಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ. ಸೆ.೧೪ರಂದು ಕಲ್ಲಾರೆ ವರ್ಣಕುಟೀರ ಸಂಸ್ಥೆಯಲ್ಲಿ ನಡೆದ ಪರೀಕ್ಷಾ ಕಾರ್ಯಕ್ರಮದಲ್ಲಿ ಏಷ್ಯಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ಭಾರತೀಯ ಮುಖ್ಯಸ್ಥ ಮನೀಷ್ ವೈಷ್ಣೋಯಿ ಅವರ ನೇತೃತ್ವದಲ್ಲಿ ಸಂಸ್ಥೆಯ ಪ್ರತಿನಿಧಿ ಸಿವಿಲ್ ಇಂಜಿನಿಯರ್ ಶರತ್ ಮತ್ತು ಅನೂಪ್ ಕಾಮತ್ ಅವರು ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಿದರು. ಕಾರ್ಯಕ್ರಮವನ್ನು ಡಾ. ಯು.ಪಿ.ಶಿವಾನಂದ ಉದ್ಘಾಟಿಸಿದರು. ಶಿಕ್ಷಕ ರವೀಂದ್ರ ದರ್ಬೆ, ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗುರು ಪ್ರವೀಣ್ ವರ್ಣಕುಟೀರ ಅವರನ್ನು ಸನ್ಮಾನಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.