ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಪಾಂಡವಪುರದಲ್ಲಿರುವ ಅಂಕೇಗೌಡರ ಪುಸ್ತಕ ಮನೆ ಇದೀಗ ಶ್ರೀರಾಮನ ಮಿನಿ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಶ್ರೀರಾಮನ ಕುರಿತ ಪುಸ್ತಕ ಸಂಗ್ರಹವಾಗಿರುವುದಲ್ಲದೇ, ನಾಲ್ಕು ಶತಮಾನದ ಹಿಂದಿನ ಅಪರೂಪದ ಶ್ರೀರಾಮ, ಹನುಮನ ನಾಣ್ಯಗಳು ಪ್ರದರ್ಶನಕ್ಕಿಡಲಾಗಿದೆ.
ಶ್ರೀರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸುಸಂದರ್ಭದಲ್ಲಿ ಪುಸ್ತಕ ಮನೆಯಲ್ಲಿ ಒಂದು ವಾರಗಳ ಕಾಲ ಪುಸ್ತಕಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಪುಸ್ತಕ ಪ್ರದರ್ಶನದಲ್ಲಿ ಪಾಲ್ಗೊಂಡು ಶ್ರೀರಾಮನ ಬಗ್ಗೆ ಅಧ್ಯಯನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
10 ಲಕ್ಷ ಪುಸ್ತಕ ಸಂಗ್ರಹಿಸಿ ಲಿಮ್ಕಾ ದಾಖಲೆ ಮಾಡಿದ್ದ ಅಂಕೇಗೌಡರು. ಪ್ರಸ್ತುತ 15ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸಿಟ್ಟಿದ್ದಾರೆ. 15 ಲಕ್ಷ ಪುಸ್ತಕಗಳ ಪೈಕಿ ಶ್ರೀರಾಮನ ಕುರಿತು ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.ಪುಸ್ತಕದ ಜೊತೆ ಅಪರೂಪದ ಶ್ರೀರಾಮ, ಹನುಮಂತನ ಚಿತ್ರವಿರುವ 25 ನಾಣ್ಯಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮ ಇರುವ ನಾಣ್ಯಗಳು 1600, 1700, 1818ರಲ್ಲಿ ಬಿಡುಗಡೆ ಮಾಡಿದ್ದ ಹಳೆಯ ನಾಣ್ಯಗಳಾಗಿವೆ. ಇವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೊರತಂದಿದ್ದ ನಾಣ್ಯಗಳು ಇವೆ.
- ಕೆ.ಅಂಕೇಗೌಡ, ಪುಸ್ತಕಮನೆ, ಪಾಂಡವಪುರ