ಗ್ರಾಮೀಣ ನಾಟಕಗಳಿಂದ ಕಲಾವಿದರ ಸೃಷ್ಟಿ: ಕುಮಾರ ನಾಯಕ

KannadaprabhaNewsNetwork |  
Published : Jan 18, 2024, 02:07 AM IST
ಸುರಪುರ ತಾಲೂಕಿನ ಟಿ. ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ನಾಟಕವನ್ನು ರಾಜಾ ಕುಮಾರನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಟಿ.ಬೊಮ್ಮನಹಳ್ಳಿ ಗ್ರಮಾದಲ್ಲಿ ಸಾವು ಬಂದರೂ ಸೆರಗು ಹಾಸಲಾರೆ ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು. ಸುರಪುರದಲ್ಲಿ ರಂಗಮಂದಿರ ನಿರ್ಮಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆ ಗ್ರಾಮೀಣ ನಾಟಕಗಳಿಗೆ ಪ್ರತ್ಯೇಕ ಧನ ಸಹಾಯ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆಶಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುರಪುರ

ಈ ಭಾಗದಲ್ಲಿ ಹಾಸುಹೊಕ್ಕಾಗಿರುವ ಗ್ರಾಮೀಣ ನಾಟಕಗಳು ಕಲಾವಿದರ ಸೃಷ್ಟಿಗೆ ಕಾರಣವಾಗಿವೆ. ಇಲ್ಲಿನ ರಂಗಕಲಾವಿದರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವಷ್ಟು ಪ್ರೌಢಿಮೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜಾ ಕುಮಾರ ನಾಯಕ ಹೇಳಿದರು.

ತಾಲೂಕಿನ ಟಿ.ಬೊಮ್ಮನಹಳ್ಳಿ ಗ್ರಾಮದಲ್ಲಿ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಲ್ಲೇಶ ಕೋನ್ಹಾಳ ಬರೆದ ಸಾವು ಬಂದರೂ ಸೆರಗು ಹಾಸಲಾರೆ ಸಗರನಾಡು ಗ್ರಾಮೀಣ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿ ನಾಟಕ ಸಾಹಿತಿಗಳು, ರಂಗ ನಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ. ಸುರಪುರ ನಗರದಲ್ಲಿ ರಂಗಮಂದಿರ ನಿರ್ಮಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆ ಗ್ರಾಮೀಣ ನಾಟಕಗಳಿಗೆ ಪ್ರತ್ಯೇಕ ಧನ ಸಹಾಯ ನೀಡಬೇಕು. ಈ ದಿಸೆಯಲ್ಲಿ ತಾವು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಶೋಷಿತರ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ವೆಂಕೋಬ ದೊರೆ ಅಧ್ಯಕ್ಷತೆ ವಹಿಸಿದ್ದರು. ಸಕ್ರೆಪ್ಪ ಮುತ್ಯಾ ದೇವರಗೋನಾಲ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಕೆ. ವಿಜಯಕುಮಾರ, ಮುಖಂಡರಾದ ಬಲಭೀಮನಾಯಕ ಭೈರಿಮರಡಿ, ಶಿವರಾಜನಾಯಕ ನಾಯ್ಕೋಡಿ, ಭೀಮರಾಯ ಮೂಲಿಮನಿ, ಶಿವರಾಯ ಕಾಡ್ಲೂರ, ಯಲ್ಲಪ್ಪನಾಯಕ ಮಲ್ಲಿಭಾವಿ, ನಾಗಪ್ಪ ಕನ್ನೆಳ್ಳಿ, ಸಣ್ಣದೇಸಾಯಿ ದೇವರಗೋನಾಲ, ರವಿನಾಯಕ ಭೈರಿಮರಡಿ, ಕಾಳಪ್ಪ ಕವಾತಿ, ದೇವಿಂದ್ರಪ್ಪ ಬಾದ್ಯಾಪುರ ಇದ್ದರು.

ಸಂಘದ ಅಧ್ಯಕ್ಷ ಮಲ್ಲೇಶ ಕೋನ್ಹಾಳ ಮಾತನಾಡಿದರು. ಮೂರ್ತಿ ಬೊಮ್ಮನಳ್ಳಿ, ಮುತ್ತು ಬಳಗಾನೂರ, ಭೀಮಾಶಂಕರ ಹಲಕರ್ಟಿ, ಬಲಭೀಮ ದೇವಡಿ, ಕೃಷ್ಣ ಹೀರಾಪುರ, ಮೌನೇಶ ದಳಪತಿ, ಸಿದ್ದಣ್ಣ ಶಾರದಳ್ಳಿ, ಶಿವುಮಾನಯ್ಯ ವಾಗಣಗೇರಾ, ಭವಾನಿ ಬೆಂಗಳೂರು, ಸೀಮಾ ಮಹಿಂದ್ರಗಿ, ರಂಜಿತಾ ದುಧನಿ, ಪ್ರಿಯಾಂಕಾ ಹಿರಿಯೂರ ಅವರು ಅದ್ಭುತವಾಗಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ