ಕ್ರಿಯೇಟಿವ್‌ ಕಾಲೇಜು: ಶಿಕ್ಷಕರು, ಪಾಲಕರ ಸಭೆ

KannadaprabhaNewsNetwork |  
Published : Oct 28, 2025, 12:44 AM IST
ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ-ಪಾಲಕರ ಸಭೆ | Kannada Prabha

ಸಾರಾಂಶ

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ - ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ - ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜೀವನ ಮೌಲ್ಯಗಳನ್ನು ಕುರಿತು ನಡೆದ ಕಾರ್ಯಕ್ರಮವು ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ವೇದಿಕೆಯಾಯಿತು.

ಸಹಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ, ಪೋಷಕರು ಮತ್ತು ಶಿಕ್ಷಕರ ತ್ರಿಕೋನ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.

ಅಶ್ವತ್ ಎಸ್.ಎಲ್. ಮಾತನಾಡಿ, ಶಿಕ್ಷಕರು ಮತ್ತು ಪಾಲಕರು ಇಬ್ಬರು ಒಂದೇ ಹಾದಿಯಲ್ಲಿ ನಡೆದು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದಾಗ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು. ಡಾ. ಬಿ. ಗಣನಾಥ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಮಯ ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಶ್ರಮದಿಂದ ಓದುತ್ತ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.ಗಣಪತಿ ಭಟ್ ಕೆ.ಎಸ್. ಸಮಗ್ರ ಶೈಕ್ಷಣಿಕ ವಿವರಗಳನ್ನು ನೀಡಿ, ಶಿಕ್ಷಣ ಜೀವನಕ್ಕೆ ಬೆಳಕಾಗಲಿ ಎಂದು ಹಾರೈಸಿದರು.

ಆಡಳಿತ ಮಂಡಳಿಯವರು, ಉಪನ್ಯಾಸಕ- ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಸ್ಮಿತಾ ಹಾಗೂ ಪ್ರಿಯಾಂಕ ತೀರ್ಥರಾಮ್ ನಿರ್ವಹಿಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು