ಕಟೀಲು ಯಕ್ಷಗಾನ ಏಳನೇ ಮೇಳ ಆರಂಭ: ದೇವರು, ಪರಿಕರಗಳ ಮೆರವಣಿಗೆ ಸಿದ್ಧತಾ ಸಭೆ

KannadaprabhaNewsNetwork |  
Published : Oct 28, 2025, 12:44 AM IST
ಕಟೀಲು ಯಕ್ಷಗಾನ  ಎಳನೇ ಮೇಳ ಆರಂಭ  ದೇವರು, ಪರಿಕರಗಳ ಮೆರವಣಿಗೆ ಸಿದ್ದತಾ ಸಭೆ | Kannada Prabha

ಸಾರಾಂಶ

ಕಟೀಲು ದೇವಳದಲ್ಲಿ ನ.16 ರಂದು ಜರಗಲಿರುವ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪಾದಾರ್ಪಣೆ ಹಾಗೂ ಏಳೂ ಮೇಳಗಳ ತಿರುಗಾಟದ ಆರಂಭದ ಸಂಭ್ರಮದ ಸಲುವಾಗಿ ನ. 15 ರಂದು ಬಜಪೆಯಿಂದ ಕಟೀಲುವರೆಗೆ ನಡೆಯಲಿರುವ ಮೇಳಗಳ ದೇವರು, ಪರಿಕರಗಳ ಮೆರವಣಿಗೆಯ ಸಿದ್ಧತಾ ಸಭೆಯು ಬಜಪೆ ಶಾಂತಿಭವನ ವಠಾರದಲ್ಲಿ ನಡೆಯಿತು.

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನ.16 ರಂದು ಜರಗಲಿರುವ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪಾದಾರ್ಪಣೆ ಹಾಗೂ ಏಳೂ ಮೇಳಗಳ ತಿರುಗಾಟದ ಆರಂಭದ ಸಂಭ್ರಮದ ಸಲುವಾಗಿ ನ. 15 ರಂದು ಬಜಪೆಯಿಂದ ಕಟೀಲುವರೆಗೆ ನಡೆಯಲಿರುವ ಮೇಳಗಳ ದೇವರು, ಪರಿಕರಗಳ ಮೆರವಣಿಗೆಯ ಸಿದ್ಧತಾ ಸಭೆಯು ಬಜಪೆ ಶಾಂತಿಭವನ ವಠಾರದಲ್ಲಿ ನಡೆಯಿತು.

ಸಭೆಯಲ್ಲಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸುವುದು, ಅಲ್ಲಲ್ಲಿ ದ್ವಾರಗಳನ್ನು ನಿರ್ಮಿಸುವುದು, ಬಜಪೆಯಿಂದ ಕಟೀಲುವರೆಗೆ ಬಂಟಿಂಗ್ಸ್ ಅಲಂಕಾರ ಮಾಡುವ ಬಗ್ಗೆ ಆಯಾಯ ಪ್ರದೇಶದವರು ಮುಂದೆ ಬಂದಿದ್ದಾರೆ. ಮೂರು ಗಂಟೆಗೆ ಮೆರವಣಿಗೆ ಹೊರಟು, ಎಕ್ಕಾರಿನಿಂದ ಐದು ಗಂಟೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕಟೀಲನ್ನು ತಲುಪುವುದು. ಎಕ್ಕಾರಿನಲ್ಲಿ ಪಾನೀಯ, ಕಟೀಲು ಬಸ್ ನಿಲ್ದಾಣದಲ್ಲಿ ಫಲಾಹಾರದ ವ್ಯವಸ್ಥೆ ಮಾಡಲಾಗುವುದು. ಹತ್ತರಿಂದ ಹದಿನೈದು ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಅನೇಕ ತಂಡಗಳವರು ನೋಂದಾಯಿಸಿದ್ದು, ನಾಲ್ಕು ನೂರಕ್ಕೂ ಹೆಚ್ಚು ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಅನೇಕ ತಂಡಗಳು ನೋಂದಾಯಿಸುತ್ತಿದ್ದು ನೂರಕ್ಕೂ ಹೆಚ್ಚು ಚೆಂಡೆ, ಕೊಂಬು, ಡೋಲುಗಳು ಮೆರವಣಿಗೆಯಲ್ಲಿ ಇರಲಿವೆ. ಮೇಳಗಳ ದೇವರ ಏಳು ಸ್ತಬ್ಧಚಿತ್ರಗಳನ್ನು ಭಕ್ತರು ಈಗಾಗಲೇ ಸೇವಾರೂಪದಲ್ಲಿ ವ್ಯವಸ್ಥೆಗೊಳಿಸಿದ್ದು ಏಳನೆಯ ಮೇಳಕ್ಕೆ ಬೇಕಾದ ದೇವರ ಕಿರೀಟ, ಬಂಗಾರದ, ಬೆಳ್ಳಿಯ ಪರಿಕರಗಳನ್ನು ಸೇವಾದಾರರು ಒದಗಿಸಿಕೊಟ್ಟಿದ್ದಾರೆ. ಮೆರವಣಿಗೆಯಲ್ಲಿ ಡಿಜೆ ಹಾಗೂ ನಾಸಿಕ್ ಬ್ಯಾಂಡ್‌ಗಳಿಗೆ ಅವಕಾಶ ಕೊಟ್ಟಿಲ್ಲವೆಂದು ಮಾಹಿತಿಗಳನ್ನು ಸಂಘಟಕರು ಸಭೆಯಲ್ಲಿ ತಿಳಿಸಿದರು.ಈ ಸಂದರ್ಭ ನೂತನ ಮೇಳದ ಪ್ರಚಾರದ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಕಟೀಲು ದೇವಳದ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಶ್ರೀಹರಿ ನಾರಾಯಣ ದಾಸ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ‍್ಯ, ರವಿರಾಜ ಆಚಾರ್ಯ, ಯಾದವ ಕೋಟ್ಯಾನ್, ಶೇಖರ ಶೆಟ್ಟಿ ಪೆರ್ಮುದೆ, ಲೋಕೇಶ್ ಪೂಜಾರಿ ಬಜಪೆ, ರತ್ನಾಕರ ಶೆಟ್ಟಿ ಎಕ್ಕಾರು, ಈಶ್ವರ ಕಟೀಲು, ಅದ್ಯಪಾಡಿ ಹರೀಶ್ ಶೆಟ್ಟಿ, ವರಪ್ರಸಾದ ಶೆಟ್ಟಿ, ಜಯಂತ ಸುವರ್ಣ, ಭುಜಂಗ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!