ಲೋಕದ ಸಂಕಟ,ತಲ್ಲಣ, ಅನುಭವಗಳನ್ನು ಕಾವ್ಯಮಯವಾಗಿಸುವನೇ ಕವಿ

KannadaprabhaNewsNetwork |  
Published : Apr 14, 2026, 02:30 AM IST
ರಾಣಿಬೆನ್ನೂರು ನಗರದ ಮೆಡ್ಲೇರಿ ರಸ್ತೆ ಕರ್ನಾಟಕ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕವಿ ಗೋಷ್ಠಿಯನ್ನು ಶಿಗ್ಗಾವಿಯ ಕವಿ, ಹಿರಿಯ ಸಾಹಿತಿ ಶಕುಂತಲಾ ಉದ್ಘಾಟಿಸಿದರು.  | Kannada Prabha

ಸಾರಾಂಶ

ಸೃಷ್ಟಿಕ್ರಿಯೆ ಎನ್ನುವುದು ಕಾವ್ಯದ ಮೂಲಗುಣ. ಸಿಟ್ಟು, ಆಕ್ರೋಶ, ನೋವು, ನಲಿವು ಉಂಟಾದಾಗ ಕಾವ್ಯ ಹುಟ್ಟಿಕೊಳ್ಳುತ್ತದೆ. ಲೋಕದ ಸಂಕಟ ತಲ್ಲಣ ಅನುಭವಗಳನ್ನು ಕಾವ್ಯಮಯವಾಗಿಸುವನೇ ಕವಿ ಎಂದು ಶಿಗ್ಗಾವಿಯ ಸಾಹಿತಿ ಶಕುಂತಲಾ ಅವರು ಹೇಳಿದರು.

ರಾಣಿಬೆನ್ನೂರು: ಸೃಷ್ಟಿಕ್ರಿಯೆ ಎನ್ನುವುದು ಕಾವ್ಯದ ಮೂಲಗುಣ ಎಂದು ಶಿಗ್ಗಾಂವಿಯ ಕವಿ, ಹಿರಿಯ ಸಾಹಿತಿ ಶಕುಂತಲಾ ಹೇಳಿದರು. ನಗರದ ಮೆಡ್ಲೇರಿ ರಸ್ತೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾವೇರಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕವಿ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸಿಟ್ಟು, ಆಕ್ರೋಶ, ನೋವು, ನಲಿವು ಉಂಟಾದಾಗ ಕಾವ್ಯ ಹುಟ್ಟಿಕೊಳ್ಳುತ್ತದೆ. ಲೋಕದ ಸಂಕಟ ತಲ್ಲಣ ಅನುಭವಗಳನ್ನು ಕಾವ್ಯಮಯವಾಗಿಸುವನೇ ಕವಿ. ಕವಿಯು ಅಂತರಂಗದಲ್ಲಿ ತನ್ನೊಳಗೆ ತಾನೆ ಜಗಳ ಮಾಡಿಕೊಂಡರೆ ಕವಿತೆ ಹುಟ್ಟುತ್ತದೆ, ಸುಮ್ಮನೆ ಬರೆದ ಸಾಲುಗಳು ಕವಿತೆಯಾಗಲಾರವು. ಕವಿತೆ ಬರೆಯುವುದು ಒಂದು ಕಲೆಯಾದರೆ ಅದನ್ನು ವಾಚನ ಮಾಡುವ ಮೂಲಕ ಕೇಳುವರಿಗೆ ಮುಟ್ಟಿಸುವುದು ಸಹ ಒಂದು ಕಲೆ. ಕವಿಗಳು ಇಂಥ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕ ಡಾ. ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿ, ಕವಿಗಳು ತಮ್ಮ ಸೃಜನಶೀಲತೆಯ ಮೂಲಕ ಸಮಾಜದ ಸಮಸ್ಯೆಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯವು ಕೇವಲ ಮನರಂಜನೆಗೆ ಸೀಮಿತವಾಗದೇ, ಸಮಾಜ ಪರಿವರ್ತನೆಗೆ ದಾರಿದೀಪವಾಗಬೇಕು ಎಂದರು.ಜಿಲ್ಲೆಯ 25ಕವಿತೆಗಳು ಕವಿತೆ ವಾಚನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಸ್ಥಳೀಯ ಅಂಬೇಡ್ಕರ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಚಲವಾದಿ, ಕಸಾಪ ತಾಲೂಕ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಶಿವಕುಮಾರ ಚನ್ನಪ್ಪನವರ, ಶೇಖರ್ ಭಜಂತ್ರಿ, ದ್ರಾಕ್ಷಾಯಿಣಿ ಉದಗಟ್ಟಿ, ರೇಖಾ ರಾಮಾಳದ, ವಿನಾಯಕ ಬಾರ್ಕಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು