ಕನ್ನಡಪ್ರಭ ವಾರ್ತೆ ಗದಗ
ನಗರದ ಹಳೇ ಸರಾಫ್ ಬಜಾರ್‌ನ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಂಗಣದಲ್ಲಿ ಎಸ್‌ಎಸ್‌ಕೆ ಸಮಾಜ ಆಯೋಜಿಸಿದ್ದ ನಮ್ಮೂರ ದಸರಾ-2026 ದಸರಾ ದರ್ಬಾರ್ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಮನಸ್ಸು ಮತ್ತು ದೇಹ ಸದೃಢವಾಗುತ್ತದೆ. ಯುವಜನತೆ ಚಾಟ್‌ಜಿಪಿಟಿ ಮತ್ತು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಅತಿಯಾಗಿ ಬಳಸುತ್ತಿರುವುದರಿಂದ ಕ್ರಿಯಾಶೀಲತೆ ಕಡಿಮೆಯಾಗುತ್ತಿದ್ದು, ಸ್ವಂತಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದರು.
ಮುಖ್ಯ ಅತಿಥಿ, ಉತ್ತರ ಪ್ರದೇಶದ ಲಖನೌ ಕೇಂದ್ರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪ್ರಶಾಂತ್ ಮೆಹರವಾಡೆ ಮಾತನಾಡಿ, ಯುವಕರು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು. ಸಂಸ್ಕಾರಯುತ ಜೀವನವೇ ನಮಗೆ ಗೌರವ ತಂದುಕೊಡುತ್ತದೆ ಎಂದರು.ದಸರಾ ಕಮಿಟಿ ಚೇರ್ಮನ್ ಪ್ರಕಾಶ್ ಬಾಕಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್ಪಿ ಕೆ.ಎನ್. ಮಿಥುನ್, ಯುವ ಮುಖಂಡ ಸಚಿನ್ ಪಾಟೀಲ, ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ದಂಪತಿ ಶ್ರೀದೇವಿಯ ದರ್ಶನ ಪಡೆದರು.