ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ವೇಳೆ ಇ ಖಾತೆ ಮತ್ತು ಶಾಶ್ವತ ಗುತ್ತಿಗೆ ಕುರಿತಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತಾಗಿ ಸುದೀರ್ಘವಾಗಿ ಚರ್ಚಿಸಲಾಯಿತು. ಅಲ್ಲದೆ, ಶನಿವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಇಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ನೂತನ ಮೇಯರ್ ಮತ್ತು ಉಪಮೇಯರ್ ಅವರು ಕ್ರೆಡಾಯ್ ನಿಯೋಗಕ್ಕೆ ಭರವಸೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ. ಈ ವೇಳೆ ಕ್ರೆಡಾಯ್ ಬೆಳಗಾವಿ ಅಧ್ಯಕ್ಷ ಯುವರಾಜ ಹುಲಜಿ, ಉಪಾಧ್ಯಕ್ಷ ಆನಂದ ಕುಲಕರ್ಣಿ, ಕಾರ್ಯದರ್ಶಿ ಪ್ರಶಾಂತ್ ವಂದಕರ್, ಖಜಾಂಚಿ ಸುಧೀರ ಪನಾರೆ, ನಿರ್ದೇಶಕರಾದ ರಾಜೇಶ ಮಾಳಿ, ಸಚಿನ್ ಬೈಲವಾಡ, ಡಿ.ಎ.ಸಾಯನೇಕರ, ವೀರೇಶೆ ಶೆಟ್ಟೆನ್ನವರ ಮತ್ತು ಸದಸ್ಯರಾದ ಮಹೇಶ ಫಗರೆ ಹಾಜರಿದ್ದರು.