ಉತ್ತರ ಪ್ರದೇಶದ ಕಾನ್ಪುರದಲ್ಲಿ ಆ.27ರಂದು ಸಂಭವಿಸಿದ ತರಬೇತಿ ವಿಮಾನ ಪತನದ ದುರ್ಘಟನೆಯಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯ ಪೈಲಟ್ ಅಭಿಷೇಕ್ ಪೂಜಾರಿ (27) ಅವರ ಅಂತ್ಯಕ್ರಿಯೆ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಸೇವಾಗಿರಿ ಎಂಬಲ್ಲಿ ಭಾನುವಾರ ನಡೆಯಿತು.
ಕಾರ್ಕಳ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆ.27ರಂದು ಸಂಭವಿಸಿದ ತರಬೇತಿ ವಿಮಾನ ಪತನದ ದುರ್ಘಟನೆಯಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯ ಪೈಲಟ್ ಅಭಿಷೇಕ್ ಪೂಜಾರಿ (27) ಅವರ ಅಂತ್ಯಕ್ರಿಯೆ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಸೇವಾಗಿರಿ ಎಂಬಲ್ಲಿ ಭಾನುವಾರ ನಡೆಯಿತು.
ಹಿಂದು ಸಂಪ್ರದಾಯದಂತೆ ತಂದೆ ಪ್ರಭಾಕರ್ ಪೂಜಾರಿ ಅಂತಿಮ ವಿಧಿ-ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಯಿ ಶಶಿಕಲಾ ಪೂಜಾರಿ, ಸಹೋದರ, ಅಭಿಷೇಕ್ ಪೂಜಾರಿಯ ದೊಡ್ಡಪ್ಪ, ಮಾವ ಜೀವನ್ ಪೂಜಾರಿ, ಸಂಬಂಧಿಕರು, ಸ್ಥಳೀಯರು ಹಾಗೂ ಇಂಡಿಯನ್ ಏವಿಯೇಷನ್‌ಗೆ ಸಂಬಂಧಿಸಿದವರು ಪಾಲ್ಗೊಂಡಿದ್ದರು.ಕಾನ್ಪುರದಲ್ಲಿರುವ ಗಗನ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನಲ್ಲಿ ಅಭಿಷೇಕ್ ಪೂಜಾರಿ ಮೂರು ವರ್ಷಗಳ ತರಬೇತಿ ಪಡೆಯುತ್ತಿದ್ದರು. ಆ.27ರಂದು ತರಬೇತಿಯ ಸಂದರ್ಭದಲ್ಲಿ ವಿಮಾನ ಪತನಗೊಂಡು ಅವರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಟ್ರೈನಿಂಗ್ ಸೆಂಟರ್‌ನವರು ಘಟನೆ ನಡೆದಾಗಲೂ, ಮೃತದೇಹ ಹಸ್ತಾಂತರಿಸುವ ಸಂದರ್ಭದಲ್ಲಿಯೂ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲಿನ ಸಹಪೈಲಟ್‌ಗಳು ಮೃತದೇಹವನ್ನು ಪ್ಯಾಕ್ ಮಾಡಿಕೊಟ್ಟು, ಊರಿಗೆ ತರುವಲ್ಲಿ ಸಹಕರಿಸಿದ್ದಾರೆ ಎಂದು ತಂದೆ ಪ್ರಭಾಕರ್ ಪೂಜಾರಿ ತಿಳಿಸಿದ್ದಾರೆ.
ಕಾನ್ಪುರದಿಂದ ಲಖನೌವರೆಗೆ ಮೃತದೇಹವನ್ನು ರಸ್ತೆ ಮಾರ್ಗವಾಗಿ ತರಲಾಗಿದ್ದು, ಬಳಿಕ ಲಖನೌದಿಂದ ಮುಂಬೈ ಹಾಗೂ ಮುಂಬೈನಿಂದ ಮಂಗಳೂರಿಗೆ ವಿಮಾನದ ಮೂಲಕ ತರಲಾಯಿತು. ನಂತರ ಮಂಗಳೂರಿನಿಂದ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಸೇವಾಗಿರಿಗೆ ಮೃತದೇಹವನ್ನು ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.