ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪೌಢಶಾಲೆ ಸಹಯೋಗದಲ್ಲಿ ನಗರದ ಷಣ್ಮುಖಾರೂಢ ಮಠದ ಆವರಣದಲ್ಲಿ ಜರುಗಿದ 2026-27ನೇ ಸಾಲಿನ 14 ಹಾಗೂ 17ವರ್ಷದ ವಯೋಮಿತಿಯ ಬಾಲಕ-ಬಾಲಕಿಯರ ಬೆಳಗಾವಿ ವಿಭಾಗಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಅನೇಕ ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ.ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ನಿರ್ಮಿಸುವಲ್ಲಿ ಕ್ರೀಡೆಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಅದರಲ್ಲಿಯೂ ಕೂಡಾ ಜಂಟಲ್‌ಮನ್ ಕ್ರೀಡೆಯೆಂದು ಹೆಸರು ಪಡೆದಿರುವ ಕ್ರಿಕೆಟ್ ಭಾರತದಲ್ಲಿ ವಿದ್ಯಾರ್ಥಿಗಳನ್ನು ಕೈಬಿಸಿ ಕರೆಯುತ್ತಿದೆ ಎಂದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಮಾತನಾಡಿ, ಕ್ರಿಕೆಟ್ ಪಂದ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಜವಾಬ್ದಾರಿ, ಹೊಣೆಗಾರಿಕೆ, ಮುಂದಾಳತ್ವ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಎಸ್ಸೆಸ್ಸೆಲ್ಸಿ ನ್ಯೂಡಲ್ ಅಧಿಕಾರಿ ಪ್ರಕಾಶ ನಾಲತವಾಡ, ವಿವಿಧ ತಾಲೂಕುಗಳ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರವಿಕುಮಾರ ನಿಲುಗಲ್, ಎ.ಜೆ.ಪೆಂಡಾರಿ, ಎಚ್.ಎಂ.ರಾಂಪೂರ, ಪಿ.ಡಿ.ಕಾಲವಾಡ, ಎನ್.ಆರ್.ಚವ್ಹಾಣ, ಆರ್.ಎಸ್.ನರೇಗಲ್, ಎಸ್.ಬಿ.ಕುಂಬಾರ, ರಾಜ್ಯ ದೈಹಿಕ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಹಚಡದ, ಪ್ರಾಥಮಿಕ ರಾಜ್ಯ ದೈಹಿಕ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ಬೇನೂರ, ದೈಹಿಕ ಶಿಕ್ಷಕರಾದ ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ ಉಪಸ್ಥಿತರಿದ್ದರು.ಭಾರತೀಯ ಕ್ರೀಡೆಗಳಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಆಟವಾಗಿದ್ದು, ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಸಾಮಾಜಿಕ ವ್ಯಕ್ತಿತ್ವ ರೂಪಗೊಳ್ಳಲು ಕ್ರೀಡೆಗಳು ಸಹಕಾರಿಯಾಗುತ್ತವೆ.-ಆರ್.ವಿ.ಹೊಸೂರ,