ಕನ್ನಡಪ್ರಭ ವಾರ್ತೆ ಹನೂರುಬಿಆರ್‌ಟಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫಸಲು ಹಾನಿಗೊಳಿಸಿರುವ ಬಗ್ಗೆ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಆರ್‌ಟಿ ವನ್ಯಧಾಮ ಅರಣ್ಯ ಪ್ರದೇಶದಿಂದ ದಿನನಿತ್ಯ ರಾತ್ರಿವೇಳೆ ಬರುವ ಕಾಡಾನೆಗಳು ಮಲೆ ಮಾದೇಶ್ವರ ವನ್ಯಧಾಮ ವ್ಯಾಪ್ತಿಯ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆಯ ನಷ್ಟ ಉಂಟು ಮಾಡುವುದರ ಜೊತೆಗೆ ರಾತ್ರಿ ವೇಳೆ ಕಾವಲು ಕಾಯುವ ಹಾಗೂ ಜಮೀನಿನಲ್ಲಿ ವಾಸದ ಮನೆಗಳಲ್ಲಿರುವ ರೈತರು ಭಯಭೀತರಾಗಿದದ್ದು, ನಿರಂತರ ಕಾಡಾನೆಗಳ ದಾಳಿಯಿಂದ ಫಸಲಿನ ನಷ್ಟದ ಜೊತೆಗೆ ರೈತರು ಭಯ ಭೀತರಾಗಿದ್ದಾರೆ.
ಸಂಬಂಧಪಟ್ಟ ಬಿಆರ್‌ಟಿ ವಲಯ ಅರಣ್ಯ ಅಧಿಕಾರಿಗಳು ಈ ಬಗ್ಗೆ ಹಲವಾರು ತಿಂಗಳುಗಳಿಂದ ರೈತರು ಕಾಡಾನೆ ತಡೆಗಟ್ಟುವಂತೆ ಮನವಿ ಸಲ್ಲಿಸಿದ್ದರು ನಿರ್ಲಕ್ಷೆ ವಹಿಸಿರುವುದರಿಂದ ರೈತರಿಗೆ ಸ್ಪಂದಿಸದೆ ಇರುವುದರಿಂದ ನಷ್ಟದ ಜೊತೆಗೆ ಜೀವ ಭಯದಲ್ಲೇ ರಾತ್ರಿ ಕಳೆಯುವ ಅಂತ ಪರಿಸ್ಥಿತಿ ಗಡಿ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿ ರೈತರು ಭಯಭೀತರಾಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ರೈತ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.ಕೋಟ್------
--------------28ಸಿಎಚ್‌ಎನ್53ಹನೂರು ತಾಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುನಿಗೌಡನದೊಡ್ಡಿ ಗ್ರಾಮದ ರೈತ ಮಹದೇವಪ್ಪ ಜಮೀನಿನಲ್ಲಿ ಬೆಳೆಯಲಾಗಿರುವ ಬೀನ್ಸ್ ಬೆಳೆಯನ್ನು ಕಾಡಾನೆಗಳು ತುಳಿದು ನಾಶಗೊಳಿಸಿರುವುದು.
----------------28ಸಿಎಚ್‌ಎನ್54ಹನೂರು ತಾಲೂಕಿನ ಬೈಲೂರು ಗ್ರಾಮ ವ್ಯಾಪ್ತಿಯ ಮುನಿಗೌಡನದೊಡ್ಡಿ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳ್ಳುಳ್ಳಿ ಬೆಳೆಯನ್ನು ಕಾಡಾನೆಗಳು ತುಳಿದು ನಾಶಗೊಳಿಸಿರುವ ಚಿತ್ರ.
------------