ಕೃಷಿ ಸೌಲಭ್ಯಕ್ಕೆ ಬೆಳೆ ಸಮೀಕ್ಷೆ ಕಡ್ಡಾಯ

KannadaprabhaNewsNetwork |  
Published : Jul 07, 2025, 11:48 PM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ರೈತರು ಬೆಳೆಗಳಿಗೆ ಸಂಬಂಧಿಸಿದ ಬೆಳೆವಿಮೆ, ಬೆಳೆಹಾನಿ ಪರಿಹಾರ ಸೇರಿ ವಿವಿಧ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ ಮಾಡಿಸಬೇಕಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ತಿಳಿಸಿದ್ದಾರೆ,

- ಹೊನ್ನಾಳಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ಸಲಹೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರೈತರು ಬೆಳೆಗಳಿಗೆ ಸಂಬಂಧಿಸಿದ ಬೆಳೆವಿಮೆ, ಬೆಳೆಹಾನಿ ಪರಿಹಾರ ಸೇರಿ ವಿವಿಧ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ ಮಾಡಿಸಬೇಕಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ತಿಳಿಸಿದ್ದಾರೆ,

ಈ ಆ್ಯಪ್‌ನಿಂದ ರಾಜ್ಯದ ಯಾವುದೇ ಭಾಗದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಮೊಬೈಲ್ ತಂತ್ರಾಂಶ ಮೂಲಕ ವೀಕ್ಷಿಸಬಹುದು. ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ಸರ್ಕಾರ ಬೆಳೆ ಪರಿಹಾರ ನೀಡುತ್ತದೆ. ಬೆಂಬಲ ಬೆಲೆಯಡಿ ರೈತರು ತಾವು ಬೆಳೆದ ಫಸಲು ಮಾರಾಟ ಮಾಡಬೇಕಾದರೂ ಬೆಳೆ ಸಮೀಕ್ಷೆ ಮಾಡಿರಬೇಕು ಎಂದು ಹೇಳಿದ್ದಾರೆ.

ಬ್ಯಾಂಕುಗಳಿಂದ ಬೆಳೆಸಾಲ ಪಡೆಯಲು ನಿಖರ ಬೆಳೆ ಮಾಹಿತಿ ದಾಖಲಿಸಬೇಕಾಗಿದೆ. ಸರ್ಕಾರದ ಹಲವಾರು ಉಪಯೋಗಗಳನ್ನು ಪಡೆಯಬೇಕಾದರೆ ಬೆಳೆ ಸಮೀಕ್ಷೆ ಮಾಡಿ ವಿವರ ದಾಖಲಿಸುವುದು ಕಡ್ಡಾಯ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ರೈತರು ಬೆಳೆ ಸಮೀಕ್ಷೆ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕನ್ನಡದ ಆ್ಯಪ್ ತೆರೆದು ಜಮೀನಿನಲ್ಲಿ ನಿಂತು ಆಧಾರ್‌ ಸಂಖ್ಯೆ ನಮೂದಿಸಿ ದೃಢಿಕರಿಸಬೇಕು ಎಂದಿದ್ದಾರೆ.

ಆ್ಯಪ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮೊಬೈಲ್ ಪೋನ್ ಸಂಖ್ಯೆ ನಮೂದಿಸಬೇಕು. ರೈತರ ಹೆಸರಿನಲ್ಲಿರುವ ಜಮೀನುಗಳ ವಿವರ ಸರ್ವೇ ನಂಬರ್‌ಸಮೇತ ಕಾಣುತ್ತದೆ ಎಂದು ಮಾಹಿತಿ ನೀಡಿದ್ದಾರೆ.

- - -

-7ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದ ಜಮೀನೊಂದರಲ್ಲಿ ಕೃಷಿ ಇಲಾಖೆ ತಾಂತ್ರಿಕ ಸಿಬ್ಬಂದಿ ರೈತರಿಗೆ ಆ್ಯಪ್ ಬ‍ಳಸಿ ಬೆಳೆವಿಮೆ ಮಾಹಿತಿ ಅಪ್ ಲೋಡ್ ಮಾಡುವ ವಿಧಾನ ತಿಳಿಸಿಕೊಟ್ಟರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು