ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಬಾಗೂರು, ಪುರ, ಅಮ್ಮನಘಟ್ಟ ಹೇರೂರು, ತಿಪ್ಪೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಶುಕ್ರವಾರ ಸಂಜೆ ಬಿಸಿಯಂತಹ ಬಿರುಗಾಳಿ ಮಳೆಗೆ ಅಡಿಕೆ, ತೆಂಗು, ಬಾಳೆ ಸಂಪೂರ್ಣವಾಗಿ ನೆಲಕಚ್ಚಿದು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ.ತಾಲೂಕಿನ ನಿಟ್ಟೂರು ಹೋಬಳಿ ಬಾಗೂರು ಗ್ರಾಮದಲ್ಲಿ ಅತ್ಯಂತ ಹೆಚ್ಚು ನಷ್ಟವಾಗಿದ್ದು, ಸುಮಾರು 15 ರಿಂದ 20 ವಾಸದ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು ಮನೆಯ ಮೇಲೆ ಹಾಕಿರುವಂತಹ ಶೀಟುಗಳು ಹಾರಿಹೋಗಿವೆ. ಉಳಿದುಕೊಳ್ಳಲು ಕೂಡ ಸಾಧ್ಯವಾಗದೆ ಅವರ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿರುವುದು ಒಂದು ಕಡೆಯಾದರೆ, ಆರ್ಥಿಕವಾಗಿ ಸಾಕಷ್ಟು ಹಿಂದೆ ಇರುವಂತಹ ಕುಟುಂಬಗಳ ಮನೆಗಳು ಹಾಳಾಗಿರುವುದು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಕೈ ತೊಳೆಸುವಂತೆ ಮಾಡಿದೆ.
ಅಡಿಕೆ, ತೆಂಗು, ಬಾಳೆ ಅತ್ಯಂತ ಹೆಚ್ಚು ನಷ್ಟವಾಗಿದ್ದು ಸರ್ಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಗ್ರಾಮದ ಗೋಪಾಲ ಹಾಗೂ ಗ್ರಾಮಸ್ಥರು ಮನವಿಯನ್ನು ಮಾಡಿದ್ದಾರೆ. ಗ್ರಾಮದಲ್ಲಿ ನೂರಾರು ವರ್ಷದ ಆಲದ ಮರ ಒಂದು ದೇವಾಲಯದ ಮೇಲೆ ಉರುಳಿ ದೇವಾಲಯ ಸಂಪೂರ್ಣ ನೆಲಕಚ್ಚಿದೆ. ದ್ವಿಚಕ್ರವಾಹನ ಕಾರುಗಳು ಸಹ ಗಾಳಿಯ ಒಡತಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.ಗ್ರಾಮದಲ್ಲಿ ಆನಂದ್ ಅವರ ತೋಟದಲ್ಲಿ ಅಡಿಕೆ ತೆಂಗು ಬಾಳೆ ನಷ್ಟವಾಗಿದ್ದು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ. ತೆಂಗು, ಅಡಿಕೆ, ಬಾಳೆಗೆ ಉತ್ತಮ ದರ ಇರುವಂತಹ ಸಂದರ್ಭದಲ್ಲಿಯೇ ಪ್ರಕೃತಿ ಈ ರೀತಿ ರೈತರ ಮೇಲೆ ಮುನಿಸಿಕೊಂಡಿರುವುದು ಅತ್ಯಂತ ನೋವು ತುಂಬಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ರೈತರ ಹೆಸರು ನಂಜುಂಡಯ್ಯ, ಸಿದ್ದರಾಮಯ್ಯ, ಚನ್ನಬಸವಯ್ಯ, ಪರಮೇಶ್ವರ, ಡಿ.ಕೆ. ರಾಜಣ್ಣ, ಗೋಪಾಲಯ್ಯ, ರುದ್ರೇಶ್, ನಂಜುಂಡ ಮೂರ್ತಿ, ಲಕ್ಷ್ಮಣಪ್ಪ, ಶಿವನಂಜಪ್ಪ, ಸುರೇಶ್, ಅರಿವೇಸಂದ್ರ ಜ್ಞಾನೇಶ್, ರಾಮಚಂದ್ರಯ್ಯ, ಗಂಗಣ್ಣ, ಮಲ್ಲಿಕಾರ್ಜುನಯ್ಯ, ಮಲ್ಲೇಶ್, ಪಾಂಡುಕುಮಾರ್, ಮಂಜುನಾಥ್, ಗಿರೀಶ್, ತಮ್ಮಯ್ಯ, ಪ್ರಕಾಶ್ ಅನಂತರಾಜು, ಕೆಂಪರಾಜು, ಇನ್ನೂ ಹಲವು ರೈತರ ತೋಟದಲ್ಲಿ ಮರಗಳು ನೆಲಕ್ಕೆ ಉರುಳಿವೆ.ಇನ್ನು ಗುಬ್ಬಿ ತಾಲೂಕಿನ ಹೇರೂರು ಶ್ರೀ ಮಾರುತಿ ವಿದ್ಯಾಮಂದಿರದ ಶಾಲೆಯ ಮೇಲೆ ಹಾಕಿದ್ದ ಸೀಟುಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಮಳೆ ಬಂತು ಎಂದು ಅದರ ಅಡಿಯಲ್ಲಿ ನಿಂತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ದ್ವಿಚಕ್ರ ವಾಹನ ಜಖಂಗೊಂಡಿದೆ.ರಾತ್ರಿ ಬಿರುಗಾಳಿ ಹಾಗೂ ಮಳೆಯಿಂದ ತಾಲೂಕಿನ ಕೆಲವು ಭಾಗಗಳಲ್ಲಿ ರೈತರ ಬೆಳೆದ ಅಡಿಕೆ ,ತೆಂಗು ,ಮಾವು ಬಾಳೆ ಇನ್ನು ಮುಂತಾದ ಮರಗಳು ಗಾಳಿಗೆ ಉರುಳು ಬಿದ್ದು ಹಾನಿಯಾಗಿದೆ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ರೈತ ಸಂಘ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಲೋಕೇಶ್ ಒತ್ತಾಯಿಸಿದ್ದಾರೆ. 26 ಜಿ ಯು ಬಿ 1
26 ಜಿ ಯು ಬಿ 2ಗುಬ್ಬಿತಾಲೂಕಿನ ಬಾಗೂರು, ಪುರ, ಅಮ್ಮನಘಟ್ಟ ಹೇರೂರು, ತಿಪ್ಪೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಬಿರುಗಾಳಿ ಮಳೆಗೆ ಅಡಿಕೆ ,ತೆಂಗು ,ಬಾಳೆ ಸಂಪೂರ್ಣವಾಗಿ ನೆಲಕಚ್ಚಿದು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂಥಾಗಿದೆ.
26 ಜಿ ಯು ಬಿ 3ಗುಬ್ಬಿ ತಾಲೂಕಿನ ಬಿರುಗಾಳಿ ಮಳೆಗೆ ಬಾಗುರು ಗ್ರಾಮದಲ್ಲಿ ಮನೆಗಳು ಕುಸಿತ ಕಂಡಿರುವುದು.
26 ಜಿ ಯು ಬಿ 4ಗುಬ್ಬಿ ತಾಲೂಕಿನ ಹೇರೂರು ಬಿರುಗಾಳಿ ಮಳೆಗೆ ಶ್ರೀ ಮಾರುತಿ ವಿದ್ಯಾಮಂದಿರದ ಶಾಲೆಯ ಮೇಲೆ ಹಾಕಿದ್ದ ಸೀಟುಗಳು ಸಂಪೂರ್ಣವಾಗಿ ನೆಲಕಚ್ಚಿದೆ.