ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಗ್ರಾಮದ ರವಿ, ಕೃಷ್ಣಶೆಟ್ಟಿ, ಲಿಂಗರಾಜು, ಷಡಕ್ಷರಿ ಮಾತನಾಡಿ, ಗ್ರಾಪಂನಲ್ಲಿ ಪಿಡಿಒ ರಘುರಾಮ್ ಅವರು ಯಾವುದೇ ಟೆಂಡರ್ ಕರಿಯದೆ ಅವರಿಗೆ ಬೇಕಾದ ವ್ಯಕ್ತಿಗಳಿಗೆ ಕಾಮಗಾರಿಗಳನ್ನು ಕೊಟ್ಟು ಹಲವಾರು ಕಾಮಗಾರಿಗಳು ನಡೆಯುವುದಕ್ಕೂ ಮೊದಲೇ ಹಣ ಡ್ರಾ ಮಾಡಿದ್ದಾರೆ ಎಂದು ದೂರಿದರು.
ಅಮೃತ ಸರೋವರ ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ, ಬಸವ ವಸತಿ ಯೋಜನೆ, ಗ್ರಾಪಂನಲ್ಲಿರುವ ವಿದ್ಯುತ್ ಕಂಬಗಳಿಗೆ ಬಲ್ಪ್ ಬದಲಾವಣೆ, ಬಸ್‌ಸ್ಟ್ಯಾಂಡ್ ರಿಪೇರಿ ಹಾಗೂ ಸ್ವಚ್ಛತೆ, ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಹಾಗೂ ಹೂಳೆತ್ತುವ ಕಾಮಗಾರಿ, ಕಾಲುವೆ ನಿರ್ಮಾಣ ಹಾಗೂ ಹೂಳೆತ್ತುವ ಕಾಮಗಾರಿ, ಚರಂಡಿ ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದರು.ಗ್ರಾಮದಲ್ಲಿ ಘನತ್ಯಾಜ್ಯ ಘಟಕದಲ್ಲಿ ನರ್ಸರಿ ಅಭಿವೃದ್ದಿ, ಬಲ್ಲಾಳ ಜನಾಂಗದ ಸ್ಮಶಾನ ಸ್ವಚ್ಛತೆ ಕಾಮಗಾರಿ, ರಸ್ತೆ ಕಾಮಗಾರಿಗಳನ್ನು ಮಾಡದೇ ಬಿಲ್‌ಗಳನ್ನು ಮಾಡಲಾಗಿದೆ. ಅಲ್ಲದೇ ಗ್ರಾಪಂ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ಗ್ರಾಪಂ ಅಧ್ಯಕ್ಷರಿಲ್ಲದಿದ್ದರೂ ₹5.90 ಲಕ್ಷ ವರಗೆ ಪಿಡಿಒ ಅವರು ಡ್ರಾ ಮಾಡಿದ್ದಾರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.