- ನೀಲಗುಂದ ಕ್ರಾಸ್‌ನ ಬಳಿ ದಾರಿಯಲ್ಲೇ ಕೇಸ್ ಕತ್ತರಿಸಿ ಜನ್ಮದಿನಾಚರಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಹರಪನಹಳ್ಳಿಗೆ ವಿನಯಕುಮಾರ್ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಅದ್ಧೂರಿಯಾಗಿ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿನಯಕುಮಾರ್ ಅವರಿಗೆ ಜೈಕಾರ, ಸಿಲಿಂಡರ್ ಘೋಷಣೆಗಳು ಮುಗಿಲುಮುಟ್ಟಿದವು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರೆ, ಯುವಕರು ನೃತ್ಯ ಮಾಡಿ ಗಮನ ಸೆಳೆದರು.
ಕಿಲೋಮೀಟರ್ ಗಟ್ಟಲೇ ನೆರೆದಿದ್ದ ಸಾವಿರಾರು ಜನರು ಬಿಸಿಲಿನ ಝಳ ಲೆಕ್ಕಿಸದೇ ಹೆಜ್ಜೆ ಹಾಕಿದರು. ಹರಪ್ಪನಹಳ್ಳಿಯ ಹರಿಹರ ವೃತ್ತದಿಂದ ಆರಂಭವಾದ ಬೃಹತ್ ರೋಡ್ ಶೋ ತೆಕ್ಕದಗರಡಿಕೇರೆ, ಅರಸಿಕೇರ ರಸ್ತೆ, ಕೋರಮರ ಓಣಿ, ವಾಲ್ಮೀಕಿ ನಗರ, ಐಬಿ ವೃತ್ತದಿಂದ ಕೊಟ್ಟೂರು ವೃತ್ತದ ಮುಖ್ಯರಸ್ತೆ, ಮೆಗಳಪೇಟೆ ಸಾಗಿದ ಮೂಲಕ ಸಾಗಿ ಹರಪ್ಪನಹಳ್ಳಿಯ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು.ಯಾವ ರಾಷ್ಟ್ರೀಯ ಪಕ್ಷಗಳಿಗೂ ಕಡಿಮೆ ಏನಿಲ್ಲ ಎಂಬಂತೆ ಮೆರವಣಿಗೆ ಸಾಗಿತು. ವಾದ್ಯಗಳು, ತಮಟೆ ಸದ್ದು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿತು. ಎಲ್ಲೆಲ್ಲೂ ವಿನಯ್ ಕುಮಾರ್ ಭಾವಚಿತ್ರ, ಸ್ವಾಭಿಮಾನಿ ಸಂಕೇತವೂ ರಾರಾಜಿಸಿತು. ಹರಪನಹಳ್ಳಿಯಲ್ಲಿ 3 ತಾಸು ಮೆರವಣಿಗೆ ಸಾಗಿತು. 8 ಕಿ.ಮೀ.ವರೆಗೂ ಯಾತ್ರೆ ನಡೆಯಿತು. ಹರಪನಹಳ್ಳಿಯಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನೆಂದಿಗೂ ಚಿರಋಣಿ ಎಂದು ವಿನಯ್ ಕುಮಾರ್ ಹೇಳಿದರು.
ಜನ್ಮದಿನ ಆಚರಣೆ: ನೀಲಗುಂದ ಕ್ರಾಸ್‌ನ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ವಿನಯಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ದಾರಿ ಮಧ್ಯೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜೊತೆಗೆ ಸನ್ಮಾನಿಸಿ ವಿನಯಕುಮಾರ್ ಶುಭಾಶಯ ಕೋರಿದರು.- - -
ಬಾಕ್ಸ್ ನನ್ನನ್ನು ನೀವೇ ಗೆಲ್ಲಿಸಬೇಕುಜನರ ಮಧ್ಯೆ ಇರುವವನು ನಾನು. ನಿಮ್ಮೊಂದಿಗೆ ಇರುವವನು. ನಿಮ್ಮಿಂದಲೇ ಬೆಳೆದವನು. ನಿಮಗಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ, ನೀವೇ ಗೆಲ್ಲಿಸಬೇಕು. ಹರಪನಹಳ್ಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತಂದು ಉದ್ಯೋಗಾವಕಾಶ ಸೃಷ್ಟಿಸುತ್ತೇನೆ. ಪ್ರತಿ ಗ್ರಾಮಗಳಿಗೂ ಹೈಟೆಕ್ ಶಾಲೆ ಆರಂಭಿಸುವ ಯೋಜನೆ ಇದೆ. ಈ ಬಾರಿ ಕ್ರಮ ಸಂಖ್ಯೆ 28, ಸಿಲಿಂಡರ್ ಗುರುತಿಗೆ ಮತ ನೀಡಿ, ಮನೆ ಮಗನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ವಿನಯಕುಮಾರ ಮನವಿ ಮಾಡಿದರು.- - - -4ಕೆಡಿವಿಜಿ42, 43ಃ:
ಹರಪನಹಳ್ಳಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಚುನಾವಣಾ ಪ್ರಚಾರ ನಡೆಸಿದರು.