ಈ ಪ್ರಕರಣ ನಡೆದು ಐದಾರು ದಿನಗಳು ಕಳೆದಿವೆ ಎಂದು ಹೇಳಲಾಗಿದೆ. ವಿಡಿಯೋ ಗಮನಿಸಿದ ವಿಶ್ವಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಮಾವಿನಕೆರೆ ಸಿದ್ದಲಿಂಗೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಸೇರಿ ಹಲವರು ಗಣಿ ಮಾಲೀಕ ರಾಜೇಗೌಡನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡಪ್ರಭವಾರ್ತೆ, ತುರುವೇಕೆರೆ
ಕಲ್ಲು ಗಣಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಅರೆಬೆತ್ತಲೆಗೊಳಿಸಿ ಕೈಗಳನ್ನು ಗ್ರಿಲ್ ಗೆ ಕಟ್ಟಿ ಗಣಿ ಮಾಲೀಕ ಬೆಲ್ಟ್ ನಿಂದ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಾಲೂಕು ಹಾಗೂ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.ಕೋಳಘಟ್ಟದಲ್ಲಿ ಕಲ್ಲುಗಣಿಗಾರಿಕೆ ಘಟಕ ಇದ್ದು, ಮಾಲೀಕ ರಾಜುಗೌಡ ಇಲ್ಲಿನ ಕ್ಯಾಷಿಯರ್ ಅಭಿಷೇಕ್ ಹಣಕಾಸಿನ ಅವ್ಯವಹಾರ ಮಾಡಿದ್ದಾನೆಂದು ಅರೆಬೆತ್ತಲೆಗೊಳಿಸಿ ಗ್ರಿಲ್ ಗೆ ಆತನ ಎರಡೂ ಕೈ ಹಗ್ಗದಿಂದ ಕಟ್ಟಿಹಾಕಿ ಬೆಲ್ಟ್ ನಿಂದ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.
ಈ ಪ್ರಕರಣ ನಡೆದು ಐದಾರು ದಿನಗಳು ಕಳೆದಿವೆ ಎಂದು ಹೇಳಲಾಗಿದೆ. ವಿಡಿಯೋ ಗಮನಿಸಿದ ವಿಶ್ವಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಮಾವಿನಕೆರೆ ಸಿದ್ದಲಿಂಗೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಸೇರಿ ಹಲವರು ಗಣಿ ಮಾಲೀಕ ರಾಜೇಗೌಡನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಸುಮಾರು 6 ನಿಮಿಷದ ಈ ವಿಡಿಯೋ ಇದಾಗಿದ್ದು, ಜಿಲ್ಲಾಧಿಕಾರಿ, ಎಸ್ಪಿ, ಡಿವೈಎಸ್ಪಿ, ಎಸಿ, ತಹಸೀಲ್ದಾರ್, ಸಿಪಿಐ, ಎಸೈ ಸೇರಿ ವಿವಿಧ ಹಂತದಲ್ಲಿ ಹಂಚಲಾಗಿದೆ. ಈ ಕುರಿತು ತುರ್ತು ಕ್ರಮಕ್ಕೆ ಮುಂದಾಗಿರುವ ಪೊಲೀಸರು ಕಾರ್ಮಿಕ ಇಲಾಖಾ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಅಭಿಷೇಕ್ ಹೊಸದುರ್ಗ ತಾಲೂಕಿನವನು ಎಂದು ಹೇಳಲಾಗಿದ್ದು, ಪೊಲೀಸರಿಗೆ ದೂರು ನೀಡಿಲ್ಲ. ಗಣಿ ಮಾಲೀಕ ರಾಜೇಗೌಡರ ಫೋನ್ ಸ್ವಿಚ್ ಆಫ್ ಆಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.