ಕನ್ನಡಪ್ರಭ ವಾರ್ತೆ ಬೀದರ್
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಕೃಷಿ ಸಂಶೋಧನಾ ಕೇಂದ್ರ, ಬೀದರ್ ಹಾಗೂ ಭಾರತ ಹವಾಮಾನ ವಿಭಾಗ, ನವದೆಹಲಿ ಆಶ್ರಯದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆ ಅಡಿಯಲ್ಲಿ ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳು ಹಾಗೂ ವಿವಿಧ ಬೆಳೆ ಪದ್ಧತಿಗಳ ಮಹತ್ವ ಕುರಿತು ರೈತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೃಷಿ ವಿಜ್ಞಾನ ಕೇಂದ್ರ ಬೀದರ್‌ನ ಡಾ. ಸುನೀಲಕುಮಾರ ಎನ್‌ಎಂ ಅವರು ಕೃಷಿಯಲ್ಲಾಗುವ ನಷ್ಟವನ್ನು ಅವುಗಳಿಂದ ಹೇಗೆ ಕಡಿಮೆಗೊಳಿಸಬೇಕು ಎಂಬುವುದರ ಬಗ್ಗೆ ಸಭೆಯಲ್ಲಿ ರೈತರಿಗೆ ತಿಳಿಸಿಕೊಟ್ಟರು.ಕೇಂದ್ರ ಉಗ್ರಾಣ ಸಂಸ್ಥೆಯ ವ್ಯವಸ್ಥಾಪಕರಾದ ರೀತಾ ಬನ್ನಸೂಧ ಮಾತನಾಡಿ, ಹವಾಮಾನ ಆಧಾರಿಸಿ ದವಸ ಧಾನ್ಯಗಳನ್ನು ಯಾವ ರೀತಿ ಉಗ್ರಾಣದಲ್ಲಿ ಶೇಖರಿಸಿ ಅವುಗಳ ಗುಣಮಟ್ಟ ದೀರ್ಘಕಾಲದವರೆಗೆ ಕಾಪಾಡುವುದು ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ಪಡೆಯುವುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕೆವಿಕೆ ಪ್ರಾಧ್ಯಾಪಕರಾದ ಡಾ. ಸುನೀಲ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೀದರ್ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 185 ರೈತರು ಪಾಲ್ಗೊಂಡು ಕಾರ್ಯಕ್ರಮದ ಲಾಭ ಪಡೆದುಕೊಂಡರು.