ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರಿಗೆ ಹಾಗೂ ವಿಶೇಷವಾಗಿ ಜಾದೂ ಕಲೆಗೆ ಸರ್ಕಾರ, ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿ ಬೆಳೆಸಬೇಕು. ಮೊಬೈಲ್ ಹಾವಳಿಯಿಂದ ಎಲ್ಲ ಕಲೆಗಳಿಗೂ ಕಂಟಕ ಎದುರಾಗಿದ್ದು, ಎಲ್ಲರಲ್ಲೂ ಆಸಕ್ತಿ ಕಡಿಮೆಯಾಗಿದೆ. ಆದರೆ ನಾನು ಜಾದೂ ಕಲೆಯನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿದ್ದೇನೆ ಎಂದರು.
ಬಾಲ್ಯದಿಂದಲೇ ಜಾದೂ ಕಲೆ ಅಭ್ಯಾಸ ಮಾಡುತ್ತ ವೃತ್ತಿ ಜೀವನ ಮುಡುಪಾಗಿಟ್ಟು ಇಂದಿಗೂ ಮಾಯಾಲೋಕದಲ್ಲಿ ಸೇವೆ ಅನೇಕ ಜನರು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಜಾದುಗಾರ್ ಪ್ರಶಾಂತ್ ಎಸ್.ಹೆಗಡೆ ಅದ್ಭುತ ಜಾದು ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು.ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ನಮ್ಮ ರೋಟರಿ ಸಂಸ್ಥೆ ಸಾಧಕರನ್ನು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ. ಕಲಾವಿದರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಬೇಕು. ಜಾದೂಗಾರ್ ಪ್ರಶಾಂತ್ ಹೆಗಡೆ ಕಲಾಸೇವೆ ಅವೀರಸ್ಮರಣೀಯ ಎಂದು ಹೇಳಿದರು.
----------------------------