ಜಾತಿ, ಮತ, ದೇಶ ಮೀರಿ ಆತ್ಮೀಯ ಸಂಬಂಧ ಬೆಳೆಸಿ

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಜಾತಿ, ಮತ, ಭಾಷೆ ಮತ್ತು ದೇಶಗಳನ್ನು ಮೀರಿ ಆತ್ಮೀಯ ಸಂಬಂಧಗಳನ್ನು ಬೆಳೆಸಬೇಕು. ವ್ಯಕ್ತಿತ್ವದ ಮಾದರಿಯಾಗಿರುವ ಪ್ರಾಮಾಣಿಕತೆ ಮತ್ತು ಸಹಾನುಭೂತಿ ಧಾರ್ಮಿಕ ಆಚರಣೆಯ ಮೂಲ ತತ್ವಗಳಾಗಿವೆ ಎಂದು ಶಿರಹಟ್ಟಿ-ಬಾಲೆಹೊಸುರ ಭಾವೈಕ್ಯತಾ ಸಂಸ್ಥಾನ ಪೀಠದ ಪಕೀರ ದಿಂಗಾಲೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಜಾತಿ, ಮತ, ಭಾಷೆ ಮತ್ತು ದೇಶಗಳನ್ನು ಮೀರಿ ಆತ್ಮೀಯ ಸಂಬಂಧಗಳನ್ನು ಬೆಳೆಸಬೇಕು. ವ್ಯಕ್ತಿತ್ವದ ಮಾದರಿಯಾಗಿರುವ ಪ್ರಾಮಾಣಿಕತೆ ಮತ್ತು ಸಹಾನುಭೂತಿ ಧಾರ್ಮಿಕ ಆಚರಣೆಯ ಮೂಲ ತತ್ವಗಳಾಗಿವೆ ಎಂದು ಶಿರಹಟ್ಟಿ-ಬಾಲೆಹೊಸುರ ಭಾವೈಕ್ಯತಾ ಸಂಸ್ಥಾನ ಪೀಠದ ಪಕೀರ ದಿಂಗಾಲೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.ಸ್ಥಳೀಯ ವೀರೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ಶರಣ ವೀರೇಶ್ವರ ದಂಪತಿಯ 106ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ಯಾತ್ರೆಯ ಪಥವನ್ನು ವಿವರಿಸಿದರು. ಇದು ಪ್ರತಿ ವ್ಯಕ್ತಿಯ ಒಳನೋಟವನ್ನು ಮತ್ತು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಆಧ್ಯಾತ್ಮ ಯಾವ ಸಮಯದಲ್ಲಾದರೂ ಹೃದಯದಲ್ಲಿ ಬೆಳೆಯುವ ವಿದ್ಯೆಯಂತೆ ಇದೆ. ಅದನ್ನು ಅರಿತು ಸ್ವೀಕರಿಸುವವರಿಗೆ ಮಾತ್ರ ದಾರಿ ತೋರುತ್ತದೆ ಎಂದರು.

ಪ್ರವಚನಕಾರರಿಗೆ ಮಾನ ಸಮ್ಮಾನ, ಅಪಮಾನ ಆಗುವುದು ಸಹಜ. ಪ್ರವಚನ ಕಾರ್ಯದಲ್ಲು ಕೆಲವು ಅಚಾತುರ್ಯ ನಡೆಯುತ್ತವೆ. ಎಲ್ಲದಕ್ಕು ಮಾನಸಿಕವಾಗಿ ಸಿದ್ದರಾಗಬೇಕಾಗುತ್ತದೆ, ನಾವು ಪ್ರವಚನ ಪರಂಪರೆಯನ್ನು ಉಳಿಸಲು ನಿಮ್ಮ ಬಯಕೆಯನ್ನು ಈಡೇರಿಸಲು ಸಿದ್ದರಾಗಿದ್ದೇವೆ, ಕರ್ತವ್ಯ ಪ್ರಜ್ಞೆಗಾಗಿ ಪ್ರವಚನಕ್ಕಾಗಿ ಬಂದಿದ್ದೇವೆ, ಮಠಾಧೀಶರ ಉದ್ಯೋಗವೇ ಧರ್ಮೋಉಪದೇಶವಾಗಿದೆ ಎಂದು ಹೇಳಿದರು.ಮಸಬಿನಾಳದ ವಿರಕ್ತಮಠ ದಾಸೋಹ ಸಂಸ್ಥಾನ ಮಠದ ಸಿದ್ದರಾಮ ಶ್ರೀಗಳು ಮಾತನಾಡಿ, ಪಕೀರ ದಿಂಗಾಲೇಶ್ವರ ಶ್ರಿಗಳು ಕಳೆದ 12 ವರ್ಷಗಳಿಂದ ಪ್ರವಚನ ನೀಡಿಲ್ಲ. ಶ್ರೀಗಳ ಪ್ರವಚನ ನಮ್ಮ ಬದುಕಿಗೆ ದಾರಿ ತೋರಿಸುವ ಪ್ರವಚನವಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ದಿನ ನಿತ್ಯ ಪ್ರವಚನ ಆಲಿಸುತ್ತಾ ಹೋದಲ್ಲಿ ಶ್ರೀಗಳ ಪ್ರವಚನದ ಶಕ್ತಿ ಎಂತಹದ್ದು ಎಂದು ಅರಿವಾಗಲಿದೆ ಎಂದರು.ವೀರೇಶ್ವರ ಸಂಸ್ಥೆಯ ಕಾರ್ಯದರ್ಶಿ ಮುತ್ತು ಅಂಗಡಿ ಮಾತನಾಡಿದರು. ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಶಿರಸಿ ಬಣ್ಣದಮಠದ ಶಿವಲಿಂಗ ಶ್ರೀಗಳು, ಮಲಘಾಣದ ಜಡೆ ಶಾಂತಲಿಂಗ ಶ್ರೀಗಳು, ಪಡೇಕನೂರದ ಮಲ್ಲಿಕಾರ್ಜುನ ಶ್ರೀಗಳು, ಕುಂಟೋಜಿ ಹಿರೇಮಠದ ಗುರುಚನ್ನವೀರ ಶ್ರೀಗಳು, ಕೊಡೆಕಲ್ಲದ ಶಿವಕುಮಾರ ಶ್ರೀಗಳು, ಕುಕನೂರ ಚನ್ನಮಲ್ಲ ಶ್ರೀಗಳು, ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಇಳಕಲ್ ಮಾತನಾಡಿದರು. ಪ್ರಾರ್ಥನೆ ಶಿವರುದ್ರಯ್ಯ ಕಲಬುರ್ಗಿಮಠ, ಸ್ವಾಗತವನ್ನು ಶಶಿ ಬಂಗಾರಿ, ಡಾ.ಡಿ.ಆರ್.ಮಳಖೇಡ ವಂದಿಸಿ, ಬಸವರಾಜ ಹಾದಿಮನಿ ನಿರೂಪಿಸಿದರು.ನಾನಾಸಾಹೇಬ ದೇಶಮುಖ, ಅತಿಥಿಗಳಾಗಿ ಪೃಥ್ವಿರಾಜ ನಾಡಗೌಡ, ಗಂಗಾಧರ ನಾಡಗೌಡ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಅಬ್ದುಲ್ ಗನಿ ಖಾಜಿ, ಇಬ್ರಾಹಿಂ ಮುಲ್ಲಾ, ಡಾ.ಗುರುಮೂರ್ತಿ ಕಣಕಾಲಮಠ, ಬಳಗಾನೂರದ ಶಿವಶರಣ ಮಂಜುಳಾ ತಾಯಿ, ಚನ್ನಮಲ್ಲ ಶ್ರೀಗಳು ಹಾಗೂ ಇನ್ನಿತರರು ಇದ್ದರು.ಅದ್ದೂರಿ ಸ್ವಾಗತ

ಪಕೀರ ದಿಂಗಾಲೇಶ್ವರ ಶ್ರಿಗಳಿಗೆ ಅದ್ದೂರಿ ಸ್ವಾಗತ ನಡೆಯಿತು. ಅಮರೇಶ್ವರ ದೇವಸ್ಥಾನದಿಂದ ಸುಮಾರು 500ಕ್ಕು ಹೆಚ್ಚು ಬೈಕಗಳಿಂದ ಮೆರವಣಿಗೆ ಮುಖಾಂತರ ವೀರೇಶ್ವರ ವೃತ್ತಕ್ಕೆ ಕರದೊಯ್ಯಲಾಯಿತು. ವೃತ್ತದಲ್ಲಿ ಶರಣ ವೀರೇಶ್ವರರಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ತೆರಳಿದರು.

Share this article