ಕನ್ನಡಪ್ರಭ ವಾರ್ತೆ, ತುಮಕೂರುಮಕ್ಕಳಲ್ಲಿ ಸೃಜನಶೀಲ ಹವ್ಯಾಸಗಳನ್ನು ಬೆಳೆಸಿ, ಅವರು ಸರ್ವತೋಮುಖ ಬೆಳವಣಿಗೆಯಾಗಲು ಪೋಷಕರು ಕಾಳಜಿವಹಿಸಬೇಕು.ಶಿಕ್ಷಣದ ಜೊತೆಗೆಕ್ರೀಡೆ, ಕಲೆ, ಸಾಹಿತ್ಯದಲ್ಲಿ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ಕೀರ್ತನಾ ಕ್ರಿಯೆಟಿವ್ ಫೌಂಡೇಶನ್ ಟ್ರಸ್ಟ್ ಮತ್ತುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾಕನ ಕೋಟೆ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಹವ್ಯಾಸಗಳು ಶಿಸ್ತು ಮತ್ತು ಪರಿಶ್ರಮದ ಮೌಲ್ಯವನ್ನು ಕಲಿಸುತ್ತವೆ. ಅಭಿನಯಕಲೆಯು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು, ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲು ಸಹಕಾರಿಯಾಗಿದೆಎಂದು ಹೇಳಿದರು.ಹಿರಿಯ ಲೇಖಕಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಸಾಹಿತ್ಯ ಹಾಗೂ ನಾಟಕ ಕಲೆ ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತವೆ.ಇಂದು ಮಾಸ್ತಿ ವೆಂಕಟೇಶಅಯ್ಯಂಗಾರ್‌ಅವರ ಕಾಕನ ಕೊಟೆ ನಾಟಕವನ್ನು ಮಕ್ಕಳು ಅಭಿನಯಿಸುತ್ತಿದ್ದಾರೆ.ಈ ಮೂಲಕ ಮಾಸ್ತಿಯವರ ನಾಟಕ ಸಾಹಿತ್ಯಕ್ಕೂಜನಪ್ರಿಯತೆ ದೊರೆಯುತ್ತದೆ. ಹಾಗೇ, ಸುಗಮ ಸಂಗೀತದಲ್ಲಿ ಕವನಗಳಿಗೆ ಸಂಗೀತ ಸಂಯೋಜಿಸಿ ಗಾಯನ ಮಾಡುವ ಮೂಲಕ ಕವನ ರಚಿಸಿದ ಕವಿಗೂ ಗೌರವದೊರೆಯುತ್ತದೆ ಹಾಗೂ ಆ ಮೂಲಕ ಕವನವು ಗಾಯನವಾಗಿ ಹೆಚ್ಚು ಜನರನ್ನುತಲುಪುತ್ತದೆಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಡಾ.ಎಸ್. ನಾಗಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ನಾಟಕೋತ್ಸವ ಕಡಿಮೆಯಾಗುತ್ತಿವೆ. ಬದಲಾಗುತ್ತಿರುವ ಕಾಲಮಾನದಲ್ಲಿ ಎಲ್ಲವೂ ವ್ಯವಹಾರಿಕವಾಗಿ ಲಲಿತ ಕಲೆಗಳಿಗೆ ಸಿಗಬೇಕಾದ ಮನ್ನಣೆ ದೊರೆಯದಂತಾಗಿದೆ.ಇದರ ನಡುವೆಇಂತಹ ರಂಗತರಬೇತಿ ಶಿಬಿರಗಳು ಮಕ್ಕಳ ಕಲಾ ಪ್ರತಿಭೆಯನ್ನು ಬೆಳೆಸಿ, ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು. ಸಿನಿಮಾ ಹಾಗೂ ಕಿರುತೆರೆ ಕಲಾವಿದೆ ಸ್ವಾತಿ ಮಾತನಾಡಿ, ಅಭಿನಯ ಕಲೆ ಶ್ರೇಷ್ಠವಾದುದು, ಮಕ್ಕಳಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ, ಸೌಹಾರ್ದತೆ ಬೆಳೆಯಲು ಸಹಕಾರಿಯಾಗುತ್ತದೆ.ಪ್ರತಿ ಮಗುವೂ ಶಿಕ್ಷಣದ ಜೊತೆಗೆಇತರೆ ಹವ್ಯಾಸಗಳನ್ನು ರೂಢಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಬರಹಗಾರ ಮಣ್ಣೆರಾಜು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಆಸ್ಪತ್ರೆಯತಜ್ಞವೈದ್ಯಡಾ.ನಾಗರಾಜ್‌ಗೊರಪ್ಪ, ಹಿರಿಯ ರಂಗ ಕರ್ಮಿ ಡಾ.ಮಂಡ್ಯರವಿ, ಯೋಗತಜ್ಞ ಡಾ.ಎಂ.ಕೆ.ನಾಗರಾಜರಾವ್, ರಂಗನಿರ್ದೇಶಕ ಶಿವಶಂಕರ್ ನಿನಾಸಂ, ಟ್ರಸ್ಟ್ಅಧ್ಯಕ್ಷ ವೈ.ಆರ್.ಲಕ್ಷ್ಮೀಶ್, ಕಾರ್ಯದರ್ಶಿ ನಾಗರತ್ನ ಲಕ್ಷ್ಮೀಶ್, ರೇಷ್ಮೆ ಇಲಾಖೆ ನಿವೃತ್ತಅಧಿಕಾರಿ ವೈ.ಆರ್.ಶಿವಶಂಕರ್ ಮೊದಲಾದವರು ಭಾಗವಹಿಸಿದ್ದರು. ನಂತರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಚನೆಯ ಕಾಕನ ಕೋಟೆ ನಾಟಕವನ್ನು ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ಅಭಿನಯಿಸಿ ಗಮನ ಸೆಳೆದರು.ಶಿವಶಂಕರ್ ನೀನಾಸಂ ಅವರು ನಾಟಕ ವಿನ್ಯಾಸ ಹಾಗೂ ನಿರ್ದೇಶನ ಮಾಡಿದ್ದರು.