ಉತ್ತಮ ಭವಿಷ್ಯಕ್ಕಾಗಿ ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ ರೊಢಿಸಿಕೊಳ್ಳಿ: ಪೊಲೀಸ್ ಆಯುಕ್ತ ಡಾ.ಶರಣಪ್ಪ

KannadaprabhaNewsNetwork |  
Published : Sep 21, 2024, 01:59 AM IST
ಕಲಬುರಗಿಯ ಹೈಕಶಿ ಸಂಸ್ಥೆ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಪಿಡಿಎ ಕಾಲೇಜು ಇಲ್ಲಿಯವರೆಗೆ ಉತ್ತಮ ಎಂಜಿನಿಯರನ್ನು ತಯಾರಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿದೆ. ಇಂತಹ ಕಾಲೇಜು ಈ ಭಾಗದಲ್ಲಿರುವುದು ನಮ್ಮ ಸುದೈವ

ಕನ್ನಡಪ್ರಭ ವಾರ್ತೆ ಕಲಬುರಗಿ

ನಿಷ್ಠೆ, ಪರಿಶ್ರಮ ಮತ್ತು ಸಂಕಲ್ಪದಿಂದ ಮಾತ್ರ ಬದುಕಿನಲ್ಲಿ ಮುಂದೆ ಬರಲು ಸಾಧ್ಯ. ಕೇವಲ ಪದವಿಗಾಗಿ ಓದುವುದನ್ನು ಮಾಡದೆ ಓದಿನಲ್ಲಿ ವಿನೂತನ ಶೈಲಿ ಮತ್ತು ಉತ್ತಮ ಕ್ರಮ ಅನುಸರಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದರು.

ಇಲ್ಲಿನ ಹೈಕಶಿ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥಿಗಳು, ಪೋಷಕರನ್ನು ಉದ್ದೇಶಿಸಿ ಮಾತನಾಡಿ, ತಾವು ಪಟ್ಟ ಪರಿಶ್ರಮ ಮತ್ತು ಕಾರ್ಯದಕ್ಷತೆಯನ್ನು ವಿವರಿಸಿ, ಉನ್ನತ ಸ್ಥಾನದಲ್ಲಿರುವವರ ಸಾಧನೆ ಬಗ್ಗೆ ತಿಳಿದುಕೊಂಡು ಅವರನ್ನು ಅನುಸರಿಸಿದರೆ ತಾವೂ ಕೂಡ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೆ ಹೋಗಬಹುದೆಂದರು.

ಪುಣೆ ಮೂಲದ ಕೈಗಾರಿಕೋದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಗುರುನಾಥ ಕುಲಕರ್ಣಿ ಮಾತನಾಡಿ, ಪಿಡಿಎ ಕಾಲೇಜು ಇಲ್ಲಿಯವರೆಗೆ ಉತ್ತಮ ಎಂಜಿನಿಯರನ್ನು ತಯಾರಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿದೆ. ಇಂತಹ ಕಾಲೇಜು ಈ ಭಾಗದಲ್ಲಿರುವುದು ನಮ್ಮ ಸುದೈವ. ಕಲ್ಯಾಣ ಕರ್ನಾಟಕ ಭಾಗದ ಸಾಕಷ್ಟು ಯುವಜನ ಇಂದು ಉತ್ತಮ ಭವಿಷ್ಯ ಪಡೆದಿದ್ದಾರೆ. ನಿಮ್ಮ ಶೈಕ್ಷಣಿಕ ಪಠ್ಯಕ್ರಮದ ಜೊತೆ ಪ್ರಸ್ತುತ ತಂತ್ರಜ್ಞಾನ ಮತ್ತು ವಿವಿಧ ರಾಷ್ಟ್ರಗಳ ಭಾಷೆ ಕೂಡ ಕರಗತ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಹೈಕಶಿ ಸಂಸ್ಥೆ ಅದ್ಯಕ್ಷ, ಎಂಎಲ್‌ಸಿ ಶಶೀಲ ನಮೋಶಿ ಮಾತನಾಡಿ, ಪಿಡಿಎ ಕಾಲೇಜಿನಲ್ಲಿ ಹಲವಾರು ಯೋಜನೆ ರೂಪಿಸಿಕೊಂಡಿದ್ದು ಅದಕ್ಕಾಗಿ ಬೇಕಾಗುವಂತಹ ಆಧುನಿಕ ಪಿಠೋಪಕರಣ ಮತ್ತು ಯಂತ್ರೋಪಕರಣಗಳ ವ್ಯವಸ್ಥಕೂಡ ಮಾಡಿಕೊಡಲಾಗಿದೆ. ಶೈಕ್ಷಣಿಕ ಮಟ್ಟ ಸುಧಾರಿಸಲು ಹಾಗೂ ಪ್ರಸ್ತುತ ತಂತ್ರಜ್ಞಾನ ರೂಢಿಸಿಕೊಳ್ಳಲು ಸೆಂಟರ್ ಆಫ್ ಎಕ್ಸಲೆನ್ಸ ಮುಖಾಂತರ ವಿದ್ಯಾರ್ಥಿಗಳಿಗೆ ತರಬೇತಿ, ಉದ್ಯೋಗಾವಕಾಶ ಕಲ್ಪಿಸಲಾಗುವುದೆಂದರು.

ಸಂಸ್ಥೆ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಎಮ್. ಪಾಟೀಲ, ಡಾ. ಶರಣಬಸಪ್ಪಾ ಹರವಾಳ, ಡಾ. ಅನೀಲಕುಮಾರ ಪಟ್ಟಣ, ಡಾ. ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ, ಡಾ. ಕಿರಣ ದೇಶಮುಖ, ನಾಗಣ್ಣ ಘಂಟಿ, ನಿಶಾಂತ ಎಲಿ, ಡಾ. ಶಿವಾನಂದ ಮೇಳಕುಂದಿ ಅವರು ಉಪಸ್ಥಿತರಿದ್ದರು.

ಪಿಡಿಎ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಆರ್.ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡಿ ಎಲ್ಲರಿಗೂ ಸ್ವಾಗತಿಸಿದರು. ಸಂಚಾಲಕ ಪ್ರೊ. ಜಯಪ್ರಕಾಶ ಕ್ಷಿರಸಾಗರ ಕಾರ್ಯಕ್ರಮದ ಉದ್ಧೇಶ ವಿವರಿಸಿದರು. ಪ್ರಥಮ ವರ್ಷದ ಸಂಯೋಜಕಿ ಡಾ. ಅಮರೇಶ್ವರಿ ಪಾಟೀಲ ವಂದಿಸಿದರು. ಡಾ. ಸುಜಾತಾ ಪಾಟೀಲ ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ (ಶೈಕ್ಷಣಿಕ) ಡಾ.ಎಸ್.ಆರ.ಹೊಟ್ಟಿ, ಉಪ-ಪ್ರಾಚಾರ್ಯ (ಆಡಳಿತ), ಡಾ. ಭಾರತಿ ಹರಸೂರ ವಿಭಾಗಗಳ ಮುಖ್ಯಸ್ಥರು, ಪರೀಕ್ಷಾ ನಿಯಂತ್ರಣಾಧಿಕಾರಿಗಳು, ಡೀನ್‍ರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!